'ಪಪ್ಪು' ಪದ ಕತ್ತರಿಗೆ ಬಿಜೆಪಿಗೆ ಸೂಚಿಸಿದ ಚುನಾವಣೆ ಆಯೋಗ, ಟ್ವಿಟ್ಟರ್ ಟ್ರೆಂಡಿಂಗ್

Posted By:
Subscribe to Oneindia Kannada

ಗುಜರಾತ್ ವಿಧಾನಸಭಾ ಚುನಾವಣೆ ಮುಂದಿನ ತಿಂಗಳು ಇದೆ ಎಂಬ ಸಂಗತಿ ನಿಮಗೆಲ್ಲ ಗೊತ್ತೇ ಇದೆ. ಗುಜರಾತ್ ನ ಚುನಾವಣಾ ಆಯೋಗವು ಬಿಜೆಪಿಯ ಚುನಾವಣೆ ಜಾಹೀರಾತಿನಲ್ಲಿ ಬಳಸಿರುವ 'ಪಪ್ಪು' ಪದಕ್ಕೆ ಕತ್ತರಿ ಹಾಕುವುದಕ್ಕೆ ಸೂಚಿಸಿದೆಯಂತೆ. ಈಗ ಇದೇ ವಿಷಯ ಟ್ವಿಟ್ಟರ್ ನಲ್ಲಿ #PappuCensored ಹ್ಯಾಷ್ ಟ್ಯಾಗ್ ನಲ್ಲಿ ಭಾರೀ ತಮಾಷೆಗೆ ಕಾರಣವಾಗಿದೆ.

ಜೇಟ್ಲಿ ಗುಜರಾತ್ ಜನತೆ ಮೇಲಿನ ಹೊರೆ : ಯಶವಂತ್ ಸಿನ್ಹಾ

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಅವಮಾನ ಮಾಡುವುದಕ್ಕೆ ಇಂಥ ಪದ ಬಳಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತವಾಗಿತ್ತು. ಇದೀಗ ಚುನಾವಣೆ ಆಯೋಗದಿಂದ ಆ ಪದಕ್ಕೆ ಕತ್ತರಿ ಹಾಕಿದ್ದರೂ ಗೇಲಿ, ವ್ಯಂಗ್ಯ ಕೇಳಿಬರುತ್ತಿದೆ. ಅದರ ಕೆಲವು ಉದಾಹರಣೆಗಳು ಇಲ್ಲಿವೆ.

Rahul Gandhi

ಓಹೋ, ಈಗ ಚುನಾವಣೆ ಆಯೋಗವೇ ಯಾರು ಪಪ್ಪು ಅನ್ನೋದನ್ನು ಖಾತ್ರಿ ಪಡಿಸಿದೆ, ಇನ್ನು ಸರ್ಟಿಫಿಕೇಟ್ ನ ಅಗತ್ಯವಿಲ್ಲ ಎಂದು ಗೌರವ್ ಪರಾಶರ್ ಎಂಬುವರು ಪ್ರತಿಕ್ರಿಯಿಸಿದ್ದರೆ, ಸೋಮೆನಾಥ್, ಚುನಾವಣೆ ಆತನನ್ನು ಅಧಿಕೃತವಾಗಿ ಪಪ್ಪು ಎಂದು ಘೋಷಣೆ ಮಾಡಿದೆ ಎಂದಿದ್ದಾರೆ.

ಅಜಯ್ ಶ್ರೀವತ್ಸ, ಬಿಜೆಪಿಯಲ್ಲಿ ಅಪ್ರಬುದ್ಧ ಮತ್ತು ಅತಾರ್ಕಿಕ ನಾಯಕರಿದ್ದಾರೆ. ಈ ಹಿಂದೆ ಪಕ್ಷದಲ್ಲಿ ಒಳ್ಳೆ ನಾಯಕರಿದ್ದರು. ಈಗ ಇರುವವರೆಲ್ಲ ಬೋಗಸ್ ನಾಯಕರು ಎಂದಿದ್ದಾರೆ. ಪೃಥ್ವಿರಾಜ್, ಪಪ್ಪು ಪದಕ್ಕೆ ಆಕ್ಷೇಪ ಎತ್ತುವ ಮೂಲಕ ಕಾಂಗ್ರೆಸ್ ಒಪ್ಪಿಕೊಂಡಂತಾಗಿದೆ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gujarat state Election Commission raises objection on use of word ‘Pappu’ in advertisement.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ