
Gujarat Election Results 2022: ಎಎಪಿ ಸಿಎಂ ಅಭ್ಯರ್ಥಿ ಇಸುದಾನ್ ಗಧ್ವಿಗೆ ಮುನ್ನಡೆ
ಗಾಂಧಿನಗರ, ಡಿಸೆಂಬರ್ 08: ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ(Gujarat Election Results 2022) ಪ್ರಕಟಗೊಳ್ಳುತ್ತಿದೆ. ಭಾರತೀಯ ಜನತಾ ಪಕ್ಷ (BJP) ಭಾರೀ ಮುನ್ನಡೆ ಸಾಧಿಸಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಎರಡನೇ ಅತಿ ದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್ ಹೀನಾಯ ಪ್ರದರ್ಶನ ನೀಡಿದೆ. ಆದರೆ, ಗುಜರಾತ್‌ನಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರುವ ಬಿಜೆಪಿ ಏಳು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
Recommended Video

ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷದ(AAP) ಸಿಎಂ ಅಭ್ಯರ್ಥಿಯಾಗಿರುವ ಇಸುದನ್ ಗಧ್ವಿ(Isudan Gadhvi) ಮುನ್ನಡೆ ಸಾಧಿಸಿದ್ದಾರೆ.
ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳು
ಖಂಭಾಲಿಯಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಇಸುದಾನ್ ಅವರು ಹಾಲಿ ಶಾಸಕ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿಕ್ರಮ್ ಮದಮ್‌ಗಿಂತ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಮುಲುಭಾಯ್ ಬೇರಾ ಮೂರನೇ ಸ್ಥಾನದಲ್ಲಿದ್ದಾರೆ.
ನಾಲ್ಕು ಸುತ್ತಿನ ಮತ ಎಣಿಕೆಯ ನಂತರ, ಗಧ್ವಿ ಅವರು 13,658 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿಕ್ರಮ್ ಮದಮ್ 9,889 ಪಡೆದಿದ್ದಾರೆ. ಬಿಜೆಪಿಯ ಬೇರಾ 5,703 ಮತಗಳನ್ನು ಪಡೆದಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಗುಜರಾತ್‌ನ ಸೌರಾಷ್ಟ್ರ ಪ್ರದೇಶದಲ್ಲಿ ಖಂಭಾಲಿಯ ಬರುತ್ತದೆ. ಇಲ್ಲಿ ಇಸುದನ್ ಗಧ್ವಿ ಅವರನ್ನು ಎಎಪಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ನಂತರ, ಖಂಭಾಲಿಯ ಪ್ರತಿಷ್ಠಿತ ಕಣವಾಗಿ ಮಾರ್ಪಟ್ಟಿತ್ತು.
ಜನಪ್ರಿಯ ದೂರದರ್ಶನ ಸುದ್ದಿ ನಿರೂಪಕರಾಗಿದ್ದ ಗಧ್ವಿ ತಾವು ಹುಟ್ಟಿ ಬೆಳೆದ ಖಂಭಾಲಿಯಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ ಅಹಿರ್ ಜಾತಿಯ ಪ್ರಾಬಲ್ಯವಿದೆ. ಇದು ಗಧ್ವಿ ಅವರಿಗೆ ಅಷ್ಟು ಅನುಕಲಕರವಾಗಿಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಕಾಂಗ್ರೆಸ್ ಹಾಗೂ ಬಿಜೆಪಿಯ ಅಭ್ಯರ್ಥಿಗಳಿಬ್ಬರೂ ಅಹಿರ್ ಸಮುದಾಯದಿಂದ ಬಂದವರು. ಗಧ್ವಿ ಒಬಿಸಿ ಸಮುದಾಯದವರು.
ಗುಜರಾತ್‌ನಲ್ಲಿ ಎಎಪಿಗೆ ಎರಡು ಸ್ಥಾನ ಬಂದು, ಶೇ 6 ರಷ್ಟು ಮತ ಪ್ರಮಾಣ ಗಳಿಸಿದರೆ ರಾಷ್ಟ್ರೀಯ ಪಕ್ಷದ ಸ್ಥಾನ ಸಿಗಲಿದೆ. ಚುನಾವಣೆ ಪೂರ್ವದಲ್ಲಿ ಎಎಪಿ ನಾಯಕರು ಗುಜರಾತ್‌ನಲ್ಲಿ 40 ರಿಂದ 50 ಸ್ಥಾನಗಳನ್ನು ಪಡೆಯುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ. ಆದರೆ, ಎಎಪಿ ನಾಯಕರು ಊಹಿಸಿದಂತೆ ಗುಜರಾತ್ ಫಲಿತಾಂಶ ಹೊರಬಂದಿಲ್ಲ.

ಸಿಎಂ ಅಭ್ಯರ್ಥಿ ಇಸುದಾನ್ ಗಧ್ವಿಯ ಬಗ್ಗೆ ತಿಳಿಯಬೇಕಿರುವ ಪ್ರಮುಖ ಅಂಶಗಳು
*ಇಸುದನ್ ಗಧ್ವಿ ಅವರು ಜನವರಿ 10, 1982 ರಂದು ಗುಜರಾತ್‌ನ ದ್ವಾರಕಾ ಜಿಲ್ಲೆಯ ಪಿಪಾಲಿಯಾ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಖೇರಾಜಭಾಯ್ ಗಧ್ವಿ ಅವರು ವೃತ್ತಿಯಲ್ಲಿ ಕೃಷಿಕರು.
*ಜನಪ್ರಿಯ ಪತ್ರಕರ್ತರಾಗಿದ್ದ ಗಧ್ವಿ, ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ಅವರು 'ವಿಟಿವಿ' ನ್ಯೂಸ್‌ನ ಸಂಪಾದಕರಾಗಿ ಗುಜರಾತ್‌ನಲ್ಲಿ ಖ್ಯಾತಿ ಗಳಿಸಿದವರು.
*ಇಸುದಾನ್ ಗಧ್ವಿ ಅವರು 2005 ರಲ್ಲಿ ಗುಜರಾತ್‌ನ ವಿದ್ಯಾಪೀಠ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.