ಗುಜರಾತ್ ನಲ್ಲಿ 2.2 ಕೋಟಿ ರೂ ಮೌಲ್ಯದ 75,968 ಬಾಟಲ್ ಮದ್ಯ ವಶ

Subscribe to Oneindia Kannada

ಅಹಮದಾಬಾದ್, ನವೆಂಬರ್ 26: ಗುಜರಾತ್ ಪೊಲೀಸರು ಭಾರೀ ಪ್ರಮಾಣದ ಮದ್ಯದ ಬೇಟೆಯಾಡಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಭಾರತದಲ್ಲಿ ಉತ್ಪಾದನೆಯಾದ ವಿದೇಶಿ ಮದ್ಯದ ರಾಶಿ ರಾಶಿ ಬಾಟಲಿಗಳನ್ನು ವಶಕ್ಕೆ ಪಡೆದಿದ್ದಾರೆ.

ಹಾರ್ದಿಕ್ ವಿರುದ್ಧ ತೊಡೆ ತಟ್ಟಿದ ಎನ್‌ಆರ್‌ಐ ಪಟೇಲರಿಂದ ಬಿಜೆಪಿಗೆ ಬೆಂಬಲ

ಒಟ್ಟು 75,968 ಬಾಟಲಿಗಳನ್ನು ಗಾಂಧಿನಗರದ ಬಳಿಯ ಖೊರಾಜ್ ಗ್ರಾಮದಲ್ಲಿ ವಶಕ್ಕೆ ಪಡೆಯಲಾಗಿದೆ. ಇವುಗಳ ಮೌಲ್ಯ 2.2 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದು ಇತ್ತೀಚೆಗೆ ವಶಕ್ಕೆ ಪಡೆದ ಬೃಹತ್ ಪ್ರಮಾಣದ ಮದ್ಯವಾಗಿದೆ.

ಜತೆಗೆ 5 ವಾಹನಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದು ಇವುಗಳ ಮೌಲ್ಯ 24 ಲಕ್ಷ ರೂಪಾಯಿಯಾಗಿದೆ.

ಹಾರ್ದಿಕ್ ಪಟೇಲ್ 'ಸೆಕ್ಸ್ ಸಿಡಿ' ಬೆನ್ನಿಗೆ ಬಿದ್ದ ಮಹಿಳಾ ಆಯೋಗ

Gujarat Police seized 75,968 bottles of liquor worth Rs 2.2 crore

ಇಲ್ಲಿನ ಪ್ರದೇಶವೊಂದನ್ನು ಉತ್ತರ ಪ್ರದೇಶದ ನಿವಾಸಿಯೊಬ್ಬರು ಬಾಡಿಗೆಗೆ ಪಡೆದಿದ್ದರು. ಇಲ್ಲಿನ ಗೋಡೌನ್ ನಲ್ಲಿ ಬಾಟಲಿಗಳನ್ನು ಶೇಖರಿಸಡಲಾಗಿತ್ತು. ಗುಜರಾತ್ ನಲ್ಲಿ ಮದ್ಯ ನಿಷೇಧವೂ ಜಾರಿಯಲ್ಲಿದ್ದು ಚುನಾವಣೆಗೂ ಮೊದಲು ಇಷ್ಟು ದೊಡ್ಡ ಪ್ರಮಾಣದಲ್ಲಿ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗುಜರಾತ್ ನಲ್ಲಿ ಡಿಸೆಂಬರ್ 9 ಮತ್ತು 14ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 18 ರಂದು ಮತ ಎಣಿಕೆ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gujarat Police seized 75,968 bottles of Indian made foreign liquor (IMFL) worth Rs 2,20,88,000 and 5 vehicles worth Rs. 24,15,000 in Gandhinagar.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ