ಗುಜರಾತ್ ಅಭಿವೃದ್ಧಿಯ ಹುಳುಕುಗಳನ್ನು ಬಿಚ್ಚಿಟ್ಟ ಪಿ. ಚಿದಂಬರಂ

Subscribe to Oneindia Kannada

ಬೆಂಗಳೂರು, ನವೆಂಬರ್ 20: 'ಗುಜರಾತ್ ಮಾಡೆಲ್' ಅಭಿವೃದ್ಧಿಯನ್ನು ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಟೀಕಿಸಿದ್ದಾರೆ.

ಗುಜರಾತ್ : 28 ಅಭ್ಯರ್ಥಿಗಳ 3ನೇ ಪಟ್ಟಿ ಪ್ರಕಟಿಸಿದ ಬಿಜೆಪಿ

ಕೈಗಾರಿಕೆ ವಿಚಾರದಲ್ಲಿ ಗುಜರಾತ್ ಅಭಿವೃದ್ಧಿಯಾಗಿರಬಹುದು. ಆದರೆ ಮಾನವ ಅಭಿವೃದ್ಧಿ ಸೂಚ್ಯಂಕ ವಿಚಾರಕ್ಕೆ ಬಂದಾಗ ಪ್ರಮುಖ ನಾಲ್ಕು ರಾಜ್ಯಗಳಿಗಿಂತ ಗುಜರಾತ್ ಹಿಂದೆ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮೋದಿಗೇ ಗುಜರಾತ್ ಚುನಾವಣೆ ದಿನಾಂಕ ಘೋಷಣೆ ಅಧಿಕಾರ: ಚಿದು ವ್ಯಂಗ್ಯ

ಕೇರಳ, ತಮಿಳುನಾಡು, ಕರ್ನಾಟಕ ಮತ್ತು ಮಹಾರಾಷ್ಟ್ರಗಳಿಗಿಂತ ಗುಜರಾತ್ ಹಿಂದುಳಿದೆ ಎಂದು ಟ್ವೀಟ್ ಮಾಡಿರುವ ಚಿದಂಬರಂ ಇದಕ್ಕೆ ಪೂರಕ ದಾಖಲೆಗಳನ್ನೂ ನೀಡಿದ್ದಾರೆ. ಸರಣಿ ಟ್ವೀಟ್ ಗಳಲ್ಲಿ ಅವರು, ನರೇಂದ್ರ ಮೋದಿ ಮತ್ತು ಗುಜರಾತ್ ಅಭಿವೃದ್ಧಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

'ಅಚ್ಛೇ ದಿನ ಆನೆ ವಾಲಾ ಹೇ'

'ಅಚ್ಛೇ ದಿನ ಆನೆ ವಾಲಾ ಹೇ'

ಕೇಂದ್ರದಲ್ಲಿ ಅಭಿವೃದ್ಧಿಯನ್ನು ತರುವುದಾಗಿ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು. 'ಅಚ್ಛೇ ದಿನ್ ಆನೆ ವಾಲಾ ಹೇ' ಘೋಷಣೆ ಮೂಲಕ ಅವರು ರಾಜಕೀಯ ಚರ್ಚೆ ಹುಟ್ಟು ಹಾಕಿದರು. "ನಾನು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ". "ವಿದೇಶದ ಬ್ಯಾಂಕುಗಳಲ್ಲಿ ಠೇವಣಿ ಇಟ್ಟ ಹಣವನ್ನು ವಾಪಸ್ಸು ತರುತ್ತೇನೆ ಮತ್ತು ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂಪಾಯಿ ಹಾಕುತ್ತೇನೆ," ಎಂದು ಭರವಸೆ ನೀಡಿದರು.

ಆದರೆ ಈ ಯಾವ ಭರವಸೆಗಳನ್ನೂ ಇಡೇರಿಸಿಲ್ಲ. ಇದರಿಂದ 42 ತಿಂಗಳ ನಂತರ ಜನ ಭ್ರಮ ನಿರಸನಕ್ಕೆ ಒಳಗಾಗಿದ್ದಾರೆ ಎಂದು ಚಿದಂಬರಂ ಟೀಕಿಸಿದ್ದಾರೆ.

ಭ್ರಮನಿರಸನದಲ್ಲಿ ಗುಜರಾತಿಗರು

ಭ್ರಮನಿರಸನದಲ್ಲಿ ಗುಜರಾತಿಗರು

ದೇಶದ ಜನರು ಭ್ರಮ ನಿರಸನಕ್ಕೆ ಒಳಗಾದಂತೆ ಡಿಸೆಂಬರ್ ನಲ್ಲಿ ಚುನಾವಣೆ ಎದುರಿಸಲಿರುವ ಗುಜರಾತಿನ ಜನರೂ ಭ್ರಮ ನಿರಸನಕ್ಕೆ ಒಳಗಾಗಿದ್ದಾರೆ. ಬಹು ಚರ್ಚಿತ 'ಗುಜರಾತ್ ಮಾದರಿ' ಅಭಿವೃದ್ಧಿಯನ್ನು ಒರೆಗೆ ಹಚ್ಚಲಾಗುತ್ತಿದೆ ಎಂದು ಚಿದಂಬರಂ ವಿಶ್ಲೇಷಿಸಿದ್ದಾರೆ.

1995ಕ್ಕೂ ಮೊದಲೇ ಗುಜರಾತ್ ಅಭಿವೃದ್ಧಿ

1995ಕ್ಕೂ ಮೊದಲೇ ಗುಜರಾತ್ ಅಭಿವೃದ್ಧಿ

1995ಕ್ಕೂ ಮೊದಲೇ ಗುಜರಾತ್ ಅಭಿವೃದ್ಧಿ ಪಥದಲ್ಲಿತ್ತು. ಗುಜರಾತ್ ನ ಅಭಿವೃದ್ಧಿ ದರ ದೇಶದ ಅಭಿವೃದ್ಧಿ ದರಕ್ಕಿಂತ ಹೆಚ್ಚಿತ್ತು. ಅಮುಲ್, ಬಂದರುಗಳು, ವಿಶಿಷ್ಟ ಜವಳಿ ಉದ್ದಿಮೆಗಳು, ರಾಸಾಯನಿಕ ಮತ್ತು ಪೆಟ್ರೋ ಕೆಮಿಕಲ್ ಕೈಗಾರಿಕೆಗಳು ಗುಜರಾತ್ ನಲ್ಲಿ 1995ಕ್ಕೂ ಮೊದಲೇ ಇದ್ದವು ಎಂದು ಅವರು ಹೇಳಿದ್ದಾರೆ.

ಈ ಅಭಿವೃದ್ಧಿಗೆ ಕಾರಣ ಗುಜರಾತ್ ನ ಜನರು. ಆದರೆ ಅಲ್ಲಿನ ಸರಕಾರ ಕಳಪೆಯಾಗಿದ್ದು, ದೋಷಪೂರಿತವಾಗಿದೆ. ಮತ್ತು ಸಾಮಾಜಿಕ ನ್ಯಾಯವನ್ನು ನಿರ್ಲಕ್ಷಿಸಿದೆ ಎಂದು ಅವರು ಹೇಳಿದ್ದಾರೆ.

ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದೆ

ಕಳೆದ 22 ವರ್ಷಗಳಲ್ಲಿ ಗುಜರಾತ್ ನಲ್ಲಿ ಕೈಗಾರಿಕಾ ಅಭಿವೃದ್ಧಿ ಮಾತ್ರ ನಡೆದಿದೆ. ಆದರೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕೇರಳ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರಗಳಿಗಿಂತ ಹಿಂದೆ ಇದೆ ಎಂದು ಹೇಳಿರುವ ಚಿದಂಬರಂ ಇದರ ಪಟ್ಟಿಯನ್ನೂ ನೀಡಿದ್ದಾರೆ.

ಈ ಪಟ್ಟಿಯ ಪ್ರಕಾರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಗುಜರಾತ್ 11ನೇ ಸ್ಥಾನದಲ್ಲಿದೆ. ಸಾಕ್ಷರತೆ, ಮನುಷ್ಯರ ಜೀವಿತಾವಧಿ ಪ್ರಮಾಣಗಳಲ್ಲಿ ಮೂರು ರಾಜ್ಯಗಳಿಗಿಂತ ಹಿಂದೆ ಇದೆ. ಶಿಶು ಮರಣ ಪ್ರಮಾಣ, ಲಿಂಗಾನುಪಾತ, ಕಡಿಮೆ ತೂಕದ ಮಕ್ಕಳ ಜನನ, ಕುಂಠಿತ ಬೆಳವಣಿಗೆಯ ಶಿಶುಗಳ ಜನನ, ರೋಗ ನಿರೋಧಕ ಲಸಿಕೆಗಳ ವಿಚಾರದಲ್ಲಿ ಉಳಿದ ನಾಲ್ಕು ರಾಜ್ಯಗಳಿಗಿಂತ ಗುಜರಾತ್ ಹಿಂದುಳಿದಿದೆ.

ಬಡತನ ಅನುಪಾತ, ಪ್ರೌಢ ಶಿಕ್ಷಣ ಪಡೆಯುವವರ ಪ್ರಮಾಣದಲ್ಲೂ ಗುಜರಾತ್ ಹಿಂದಿದೆ. ಸಾಮಾಜಿಕ ವಲಯದ ವೈಯಕ್ತಿಕ ಖರ್ಚಿನ ಪ್ರಮಾಣವೂ ಕಡಿಮೆ ಎಂಬುದನ್ನು ಈ ಪಟ್ಟಿ ಎತ್ತಿ ತೋರಿಸಿದೆ.

ಟೊಳ್ಳು ವಿಕಾಸ

ಟೊಳ್ಳು ವಿಕಾಸ

ತಿರುಚಿದ ಅಭಿವೃದ್ಧಿಯ ಮಾದರಿಯಲ್ಲಿ ಹಲವು ವಲಯಗಳ ಜನರು ಹಿಂದೆಯೇ ಉಳಿದಿದ್ದಾರೆ. ಈ ಬಾರಿಯು ಗುಜರಾತ್ ಚುನಾವಣೆ ಅನೇಕ ವರ್ಗಗಳಲ್ಲಿ ನಡೆಯಲಿದೆ. ಆರ್ಥಿಕತೆ/ಸಾಮಾಜಿಕ ಸತ್ಯಗಳು ಮತ್ತು ತಲೆ ಬರಹ ಆಕರ್ಷಿಸುವ ಪ್ರಕಟಣೆಗಳು ಹಾಗೂ ಕಳಪೆ ಮಾನವ ಅಭಿವೃದ್ಧಿ ಸೂಚ್ಯಂಕ ಮತ್ತು ಬಿಲಿಯನ್ ಡಾಲರ್ ಹೂಡಿಕೆ ಪ್ರಸ್ತಾಪಗಳ ನಡುವೆ ಈ ಬಾರಿಯ ಚುನಾವಣೆ ನಡೆಯಲಿದೆ ಎಂದು ಚಿದಂಬರಂ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former finance minister P Chidambaram on twitter claimed that Gujarat lags behind developed states if human development index parameters are compared.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ