ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Gujarat Exit Poll Results 2022 : ಪ್ರಧಾನಿ ಪ್ರಚಾರದ ಬಳಿಕ ಡಲ್ ಆಯ್ತಾ ಆಪ್?

|
Google Oneindia Kannada News

ನವದೆಹಲಿ, ಡಿಸೆಂಬರ್ 06: ಗುಜರಾತ್‌ನಲ್ಲಿ ನಡೆದ ಎರಡನೇ ಹಂತದ ಮತದಾನ ಪ್ರಕ್ರಿಯೆ ಅಂತ್ಯವಾಗುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆಗಳು ಹೊರ ಬಿದ್ದಿವೆ. ಆ ಪ್ರಕಾರ, ಬಿಜೆಪಿಗೆ ಭರ್ಜರಿ ಜಯ ಸಿಗಲಿದೆ ಎಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ತವರು ರಾಜ್ಯದಲ್ಲಿ ಕಾಂಗ್ರೆಸ್‌ಗೆ ಕಳಪೆ ಪ್ರದರ್ಶನವನ್ನು ತೋರಲಿದ್ದು, ಎಎಪಿಯು ಎರಡಂಕಿಯ ಗಡಿಯನ್ನು ಸಹ ದಾಟುವುದಿಲ್ಲ ಎಂದು ಸೂಚಿಸುತ್ತಿವೆ.

Explainer: ಗುಜರಾತ್‌ನಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ? ಚುನಾವಣೋತ್ತರ ಸಮೀಕ್ಷೆ ಹೇಳಿದ್ದೇನು?Explainer: ಗುಜರಾತ್‌ನಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ? ಚುನಾವಣೋತ್ತರ ಸಮೀಕ್ಷೆ ಹೇಳಿದ್ದೇನು?

ಗುಜರಾತ್‌ನ 182 ವಿಧಾನಸಭಾ ಕ್ಷೇತ್ರಗಳ ಪೈಕಿ ಬಹುಮತಕ್ಕೆ ಬೇಕಾಗುವಷ್ಟು ಸ್ಥಾನಗಳನ್ನು ಗೆಲ್ಲುವುದರ ಮೂಲಕ ಬಿಜೆಪಿಯು ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವುದು ಪಕ್ಕಾ ಅಂತಾ ಸಮೀಕ್ಷೆಗಳು ಹೇಳುತ್ತಿವೆ. ಬಿಜೆಪಿ ಮತ್ತು ಆಪ್ ನಡುವಿನ ರಾಜಕೀಯ ಜಿದ್ದಾಜಿದ್ದು ಮತ್ತು ಅದರ ಎಫೆಕ್ಟ್ ಹೇಗಿತ್ತು ಎಂಬುದರ ಕುರಿತು ಪ್ರಮುಖ ಅಂಶಗಳನ್ನು ಇಲ್ಲಿ ತಿಳಿದುಕೊಳ್ಳಿ.

Gujarat Exit Polls: Poor Show For AAP after 27 Election Rallies By PM In State

ಗುಜರಾತ್‌ನಲ್ಲಿ ನೆಲದಲ್ಲಿ ಪ್ರಚಾರದ ಭರಾಟೆ ಹೀಗಿತ್ತು:

* ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ ನಂತರ ಪ್ರಧಾನಿ ನರೇಂದ್ರ ಮೋದಿ 27 ಕಡೆಗಳಲ್ಲಿ ಪ್ರಚಾರದ ಮೆರವಣಿಗೆಗಳನ್ನು ನಡೆಸಿದರು.

* ಎರಡನೇ ಹಂತದ ಚುನಾವಣೆಯಲ್ಲಿ ಮತ ಚಲಾಯಿಸಿದ ಪ್ರಧಾನಿ ಮೋದಿ ಮತಗಟ್ಟೆಗೆ ಕಾಲ್ನಡಿಗೆಯಲ್ಲಿ ತೆರಳಿದ್ದು, ಸಾಕಷ್ಟು ಜನಸಾಗರವನ್ನು ಸೆಳೆಯಿತು.

* ಇದರ ಮಧ್ಯೆ ಚುನಾವಣಾ ದಿನದಂದು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ರೋಡ್ ಶೋ ನಡೆಸಿದ್ದಾರೆ ಎಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.

* ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ತಮ್ಮ ವರದಿಗಳು "ಇದು ರೋಡ್‌ಶೋ ಮತ್ತು ಜನಸಮೂಹವು ಮೇಲೆ ಇತ್ತು" ಎಂದು ಸೂಚಿಸುವುದಿಲ್ಲ ಎಂದು ಹೇಳಿದರು.

* ಎಪಿಯು ಹೆಚ್ಚಿನ ಪ್ರಚಾರವನ್ನು ನಡೆಸಿತು, ನಗರ ಬಡವರು ಮತ್ತು ಮಧ್ಯಮ ವರ್ಗದವರನ್ನು ಕೇಂದ್ರೀಕರಿಸಿತು. ಈ ಪೈಪೋಟಿಯ ಮಧ್ಯೆಯೇ ಎಎಪಿ 90ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಭವಿಷ್ಯ ನುಡಿದಿದ್ದಾರೆ.

* ಪ್ರಧಾನಿ ತವರು ರಾಜ್ಯದಲ್ಲಿ ಗದ್ದುಗೆ ಹಿಡಿಯಲು ಎಎಪಿ ಸೆಡ್ಡು ಹೊಡೆದು ನಿಂತಿದೆ. ಗುಜರಾತ್ ರಾಜಕೀಯ ಅಂಗಳದಲ್ಲಿ ಬಿಜೆಪಿ, ಎಎಪಿ ಮತ್ತು ಕಾಂಗ್ರೆಸ್ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

English summary
Gujarat Exit Polls: Poor Show For AAP after 27 Election Rallies By PM In State.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X