ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಚುನಾವಣೆ: ಬಿಜೆಪಿಗೆ ಬಂಡಾಯಗಾರರ ಭಯ

|
Google Oneindia Kannada News

ಈ ಬಾರಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಸದ್ಯಕ್ಕೆ ಗೋಚರಿಸುತ್ತಿದೆ. ಆದರೆ ಆಮ್ ಆದ್ಮಿ ಪಕ್ಷ ಎಷ್ಟು ಪ್ರಭಾವವನ್ನು ತೋರಿಸಲು ಸಾಧ್ಯವಾಗುತ್ತದೆ ಎಂಬುದರ ಸಂಪೂರ್ಣ ಅಂದಾಜು ಮಾಡಲು ತುಂಬಾ ಕಷ್ಟ. ಒಂದು ವೇಳೆ ಆಪ್ ಹೆಚ್ಚು ಸ್ಥಾನಗಳನ್ನು ಗೆದ್ದರೆ ಅದರಿಂದ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ನಷ್ಟವೇ ಹೆಚ್ಚು. ಮತ್ತೊಂದೆಡೆ ಬಿಜೆಪಿಯಲ್ಲಿ ಬಂಡಾಯ ಅಭ್ಯರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ ಎನ್ನುವುದು ಆಡಳಿತ ಪಕ್ಷಕ್ಕೆ ಮತ್ತೊಂದು ಕಂಟಕವಾಗಿದೆ. ಬಂಡಾಯ ಅಭ್ಯರ್ಥಿಗಳು ಯಾವ ಮತ ಪಡೆದರೂ ಅದು ಬಿಜೆಪಿಯ ಮತಗಳೇ. ಹೀಗಿರುವಾಗ ಬಂಡಾಯಗಾರರ ಸಂಖ್ಯೆ ಇನ್ನೂ ಕಡಿಮೆ ಆಗಿಲ್ಲ ಎಂಬುದು ದೊಡ್ಡ ವಿಷಯ. ಆಡಳಿತ ವಿರುದ್ಧ ಬೇಸತ್ತು ಸ್ವತಂತ್ರ ಅಭ್ಯರ್ಥಿಗಳಾಗಿ ಹಲವಾರು ಜನ ನಿರ್ಧರಿಸಿದ್ದಾರೆ. ಹೀಗಾಗಿ ಬಿಜೆಪಿಗೆ ಅತೃಪ್ತರ ಬಗ್ಗೆ ಆತಂಕ ಹೆಚ್ಚಾಗಿದೆ.

ಬಿಜೆಪಿಗೆ ಅತೃಪ್ತ ಅಭ್ಯರ್ಥಿಗಳ ಭಯ

ಬಿಜೆಪಿಗೆ ಅತೃಪ್ತ ಅಭ್ಯರ್ಥಿಗಳ ಭಯ

ಗುಜರಾತ್‌ನಲ್ಲಿ ಭಾರತೀಯ ಜನತಾ ಪಕ್ಷ ಸತತ ಏಳನೇ ಬಾರಿಗೆ ಮತ್ತೆ ಅಧಿಕಾರ ಹಿಡಿಯಲು ಚುನಾವಣೆ ಎದುರಿಸುತ್ತಿದೆ. ಆದರೆ ಕಾಂಗ್ರೆಸ್‌ನಿಂದ ಪಕ್ಷಾಂತರಿಗಳಿಗೆ ಟಿಕೆಟ್‌ ನೀಡಿರುವುದರಿಂದ ಪಕ್ಷದ ಕಷ್ಟಗಳು ಮಾತ್ರ ಮುಗಿಯುತ್ತಿಲ್ಲ. ಪಕ್ಷದ ಹತ್ತಕ್ಕೂ ಹೆಚ್ಚು ಮುಖಂಡರು ಬಂಡಾಯವೆದ್ದು ಸ್ವತಂತ್ರ ಅಭ್ಯರ್ಥಿಗಳಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯಿಂದ ಟಿಕೆಟ್ ಸಿಗದೆ ಬಂಡಾಯವೆದ್ದಿದ್ದಕ್ಕೆ ಪಕ್ಷದಿಂದ ಅಮಾನತುಗೊಂಡಿರುವ 18 ಬಂಡಾಯಗಾರರ ಪೈಕಿ ಸುರೇಂದ್ರನಗರ ಜಿಲ್ಲಾ ಪಂಚಾಯಿತಿ ಸದಸ್ಯ ಛತ್ತರಸಿಂಹ ಗುಂಜಾರಿಯಾ ಅವರಿಗೆ ಧರಂಗಧ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಿದೆ. ಆದರೆ, ಆಡಳಿತ ಪಕ್ಷದ ವಿರುದ್ಧ ಬಂಡಾಯವೆದ್ದು ಸ್ವತಂತ್ರವಾಗಿ ಸ್ಪರ್ಧಿಸಿದ ಮಾಜಿ ಶಾಸಕರ ಪಟ್ಟಿ ದೊಡ್ಡದಿದೆ.

ಈ ಸ್ಥಾನಗಳ ಬಗ್ಗೆ ಬಿಜೆಪಿಯಲ್ಲಿ ಹೆಚ್ಚಿದ ಆತಂಕ

ಈ ಸ್ಥಾನಗಳ ಬಗ್ಗೆ ಬಿಜೆಪಿಯಲ್ಲಿ ಹೆಚ್ಚಿದ ಆತಂಕ

ಮಾಜಿ ಶಾಸಕರಾದ ಹರ್ಷದ್ ವಾಸವ ಮತ್ತು ಅರವಿಂದ್ ಲಡಾನಿ ಕ್ರಮವಾಗಿ ನಂದೋದ್ ಮತ್ತು ಕೇಶೋಡ್‌ನಿಂದ ಸ್ವತಂತ್ರವಾಗಿ ಸ್ಪರ್ಧಿಸಿದ್ದಾರೆ. ಮೊದಲ ಹಂತದಲ್ಲಿ ಕಣದಲ್ಲಿರುವ ಬಿಜೆಪಿಯಿಂದ ಅಮಾನತುಗೊಂಡಿರುವ ಏಳು ಬಂಡಾಯಗಾರರ ಪೈಕಿ ಇವರೂ ಸೇರಿದ್ದಾರೆ. ಬಿಜೆಪಿಯಿಂದ ಅಮಾನತುಗೊಂಡಿರುವ ಪಕ್ಷದ ಶಾಸಕ ಮಧು ಶ್ರೀವಾಸ್ತವ ಸೇರಿದಂತೆ 12 ಬಂಡಾಯಗಾರರು ಎರಡನೇ ಹಂತದಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ. ಶ್ರೀವಾಸ್ತವ ಅವರು 1995 ರಿಂದ ಆರು ಬಾರಿ ವಘೋಡಿಯಾದಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ.


ಈ ಬಾರಿ ಗುಜರಾತ್‌ನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ನಿರೀಕ್ಷೆಯಿದೆ. ಇಂತಹ ಪರಿಸ್ಥಿತಿಯಲ್ಲಿ ಬಂಡಾಯ ಹೂಡುವುದರಿಂದ ತನ್ನದೇ ಮತಗಳು ಕಡಿಮೆಯಾಗಬಹುದು ಎಂಬ ಭಯ ಬಿಜೆಪಿಯಲ್ಲಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಗೆದ್ದಿರುವ ಆ ಸ್ಥಾನಗಳ ಯಶಸ್ಸಿನ ಬಗ್ಗೆ ಪಕ್ಷವು ವಿಶೇಷವಾಗಿ ಚಿಂತಿಸುತ್ತಿದೆ. ಬಂಡಾಯಗಾರರು ಬಿಜೆಪಿಯ ಮತದಾರರಲ್ಲಿ ಸ್ವಲ್ಪ ಕಡಿಮೆ ಮಾಡಿದರೆ ಇಡೀ ಸಮೀಕರಣವೇ ತಲೆಕೆಳಗಾಗಬಹುದು. ಹೀಗಾಗಿ ಬಂಡಾಯಗಾರರ ಮನವೊಲಿಸಲು ಹಿರಿಯ ನಾಯಕರು ಸಹ ಪ್ರಯತ್ನಿಸಿದ್ದಾರೆ, ಆದರೆ ಅವರು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿಲ್ಲ. ಹೀಗಾಗಿ ಬಿಜೆಪಿಗೆ ಇದೊಂದು ದೊಡ್ಡ ಸವಾಲಾಗಿದೆ.

ಉತ್ಸಾಹ ಕಳೆದುಕೊಂಡ ಕಾರ್ಯಕರ್ತರು

ಉತ್ಸಾಹ ಕಳೆದುಕೊಂಡ ಕಾರ್ಯಕರ್ತರು

ಭಾರತೀಯ ಜನತಾ ಪಕ್ಷವು ಈ ಬಾರಿ 42 ಶಾಸಕರಿಗೆ ಮತ್ತೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಿಲ್ಲ. ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ, ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್, ಭೂಪೇಂದ್ರಸಿನ್ಹ್ ಚುಡಾಸಮಾ ಮತ್ತು ಸೌರಭ್ ಪಟೇಲ್ ಅವರು ಚುನಾವಣೆಯಿಂದ ದೂರ ಸರಿದಿದ್ದಾರೆ. 2017ರಲ್ಲಿ ಗುಜರಾತ್‌ನ 182 ಸ್ಥಾನಗಳಲ್ಲಿ ಭಾರತೀಯ ಜನತಾ ಪಕ್ಷ 99 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಇದು 1995 ರಲ್ಲಿ ಅಧಿಕಾರಕ್ಕೆ ಬಂದ ನಂತರ ಅದರ ಅತ್ಯಂತ ಕಳಪೆ ಪ್ರದರ್ಶನವಾಗಿದೆ. 2017ರ ನಂತರ ಕಾಂಗ್ರೆಸ್ ತೊರೆದು ಪಕ್ಷಕ್ಕೆ ಸೇರ್ಪಡೆಗೊಂಡ 17 ಶಾಸಕರಿಗೆ ಈ ಬಾರಿ ಟಿಕೆಟ್ ನೀಡಿದ್ದು, ಪಕ್ಷದ ಬಹುತೇಕ ಬಂಡಾಯಗಾರರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ, ಕೆಲವೆಡೆ ಪಕ್ಷದ ಕಾರ್ಯಕರ್ತರು ಪೂರ್ಣ ಉತ್ಸಾಹದ ಕೊರತೆಯಿಂದ ಅರೆಮನಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ. ಕಾರ್ಯಕರ್ತರ ಪ್ರಕಾರ, 'ಒಮ್ಮೆ ಯಾವ ನಾಯಕನಿಗಾಗಿ ಕೆಲಸ ಮಾಡುತ್ತಾರೋ ಕಾರ್ಯಕರ್ತರು ಅವರನ್ನೇ ನಂಬಿರುತ್ತಾರೆ. ಜೊತೆಗೆ ಅವರಿಗಾಗೇ ಕೆಲಸ ಮಾಡುತ್ತಾರೆ. ಆದರೆ ಹೊಸ ನಾಯಕರನ್ನು ಒಪ್ಪಿಕೊಳ್ಳುವುದು ಕಾರ್ಯಕರ್ತರಿಗೆ ಸಮಯ ತೆಗೆದುಕೊಳ್ಳುತ್ತದೆ' ಹೀಗಾಗಿ ಪಕ್ಷದಲ್ಲಿ ಏರುಪೇರಾಗಬಹುದು ಎನ್ನಲಾಗುತ್ತಿದೆ.

ಈ ಬಾರಿ ಜಯ ಯಾರಿಗೆ?

ಈ ಬಾರಿ ಜಯ ಯಾರಿಗೆ?

ಹೀಗಾಗಿ ಬಂಡಾಯಗಾರರ ಆತಂಕ ಬಿಜೆಪಿಯನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಪಕ್ಷ ಸಾಕಷ್ಟು ಸಮಾಧಾನವನ್ನು ಅನುಭವಿಸುತ್ತಿದೆ. 2017ರ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಬಿಜೆಪಿಯ ಮುಂದೆ ರೈತರ ಸಮಸ್ಯೆ ಬಿಸಿಯಾಗಿತ್ತು, ನೋಟು ಅಮಾನ್ಯೀಕರಣವೂ ದೊಡ್ಡ ಸಮಸ್ಯೆಯಾಗಿತ್ತು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪಾಟಿದಾರ್ ಚಳವಳಿಯು ಪಕ್ಷವನ್ನು ಒತ್ತಡಕ್ಕೆ ಸಿಲುಕಿಸಿತ್ತು. ಈ ಸಮಸ್ಯೆಗಳಿಂದಾಗಿ ಬಿಜೆಪಿಯ ಸ್ಥಾನಗಳು ಅಷ್ಟರಮಟ್ಟಿಗೆ ಕುಸಿದವು ಮತ್ತು ಕಾಂಗ್ರೆಸ್‌ಗೆ ಇದರಿಂದ ಸಾಕಷ್ಟು ಲಾಭವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ಈ ಬಾರಿ ಪಕ್ಷದ ವಿರುದ್ಧ ಅಷ್ಟೊಂದು ನಕಾರಾತ್ಮಕತೆ ಸದ್ಯಕ್ಕೆ ಗುಜರಾತ್‌ನಲ್ಲಿ ಗೋಚರಿಸುತ್ತಿಲ್ಲ. ಕಳೆದ ಬಾರಿ ರಾಜ್ಯದಲ್ಲಿ ಶೇ.70ರಷ್ಟು ಮತದಾನವಾಗಿದ್ದು, ಪಾಟಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಬಿಜೆಪಿ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಮತ ಚಲಾಯಿಸಿದ್ದರು. ಈ ಬಾರಿ ಪರಿಸ್ಥಿತಿ ಸಂಪೂರ್ಣ ವ್ಯತಿರಿಕ್ತವಾಗಿದೆ. ಅಲ್ಲಿಗೆ ಜನ ಯಾರನ್ನು ಬೆಂಬಲಿಸುತ್ತಾರೆ? ಯಾರಿಗೆ ಆಡಳಿತವನ್ನು ಮೆಚ್ಚುತ್ತಾರೆ? ಅನ್ನೋದನ್ನ ಕಾದು ನೋಡಬೇಕಿದೆ.

English summary
It is being said that BJP is starting to worry about the disaffected in the Gujarat assembly elections 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X