ಆಸ್ತಿ ಮೌಲ್ಯ ಏರಿಕೆ : ರಾಜ್ಯಗುರುವನ್ನು ಮೀರಿಸಿದ ರೂಪಾನಿ

Posted By:
Subscribe to Oneindia Kannada

ಅಹ್ಮದಾಬಾದ್, ನವೆಂಬರ್ 21: ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಅವರು ರಾಜ್‌ಕೋಟ್ ಪಶ್ಚಿಮ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ. ಜತೆಗೆ ತಮ್ಮ ಆಸ್ತಿ ವಿವರವನ್ನು ಘೋಷಿಸಿದ್ದಾರೆ. ಆಸ್ತಿ ಮೌಲ್ಯ ಏರಿಕೆ ವಿಷಯದಲ್ಲಿ ಎದುರಾಳಿ ರಾಜ್ಯಗುರುವನ್ನು ಕೂಡಾ ರೂಪಾನಿ ಮೀರಿಸಿದ್ದಾರೆ.

ರುಪಾನಿ ಅವರ ಘೋಷಿತ ಆಸ್ತಿಯ ಮೌಲ್ಯ 2017ರಲ್ಲಿ 9.09 ಕೋಟಿ ರು ನಷ್ಟಿದೆ. 2014ರಲ್ಲಿ ರುಪಾನಿ ಘೋಷಿಸಿದ್ದ ಆಸ್ತಿಗೆ ಹೋಲಿಸಿದರೆ ಆಸ್ತಿಯಲ್ಲಿ ಶೇ 21ರಷ್ಟು ಹೆಚ್ಚಳವಾಗಿದೆ.

ರುಪಾನಿಗೆ ಪ್ರತಿಸ್ಪರ್ಧಿಯಾಗಿರುವ ಕಾಂಗ್ರೆಸ್ಸಿನ ಇಂದ್ರನೀಲ್ ರಾಜ್ಯಗುರು ಶ್ರೀಮಂತ ಅಭ್ಯರ್ಥಿ ಎನಿಸಿಕೊಂಡಿದ್ದರೂ, ಕಳೆದ ಅವಧಿಗೆ ಹೋಲಿಸಿದರೆ ಅವರ ಆಸ್ತಿ ಶೇ 15ರಷ್ಟು ಮಾತ್ರ ಏರಿಕೆಯಾಗಿದೆ ಎಂದು ಆಯೋಗಕ್ಕೆ ನೀಡಿರುವ ಮಾಹಿತಿಯಿಂದ ತಿಳಿದು ಬಂದಿದೆ.

Gujarat Elections 2017: Vijay Rupani’s assets rise by 21 per cent in three years

ವಿಜಯ್ ರೂಪಾನಿ(ಬಿಜೆಪಿ)
2017: 9.09 ಕೋಟಿ ರು
2014: 7.51 ಕೋಟಿ ರು
ನಗದು
-49,54,223 ರು ನಗದು (ಸ್ವಂತ), 76,61,570 ರು (ಪತ್ನಿ)
ಒಟ್ಟಾರೆ: 1,26,15,893 ಕೋಟಿ ರು ಚರಾಸ್ತಿ
* ವಿಜಯ್ ಅವರು 9 ಲಕ್ಷ ಬೆಲೆ ಬಾಳುವ ಇನ್ನೋವಾ ಕಾರು, 98 ಸಾವಿರ ಬೆಲೆಯ ಅಭರಣ ಹೊಂದಿದ್ದಾರೆ.
* ಪತ್ನಿ ಹೆಸರಿನಲ್ಲಿ 2,78,100 ರು ಮೌಲ್ಯದ ಆಭರಣ, 58 ಸಾವಿರ ಎಲ್ ಐಸಿ ಪಾಲಿಸಿ ಮಾಡಿಸಿದ್ದಾರೆ.

ಸ್ಥಿರಾಸ್ತಿ
* 18 ಲಕ್ಷ ರು ಮೌಲ್ಯದ ಮನೆ ಹೊಂದಿದ್ದಾರೆ. ಯಾವುದೇ ಕೃಷಿ ಭೂಮಿ, ವಾಣಿಜ್ಯ ಕಟ್ಟಡಗಳನ್ನು ತಮ್ಮ ಹೆಸರಿನಲ್ಲಿ ಅಥವಾ ಪತ್ನಿ ಹೆಸರಿನಲ್ಲಿ ವಿಜಯ್ ಅವರು ಹೊಂದಿಲ್ಲ. 2014ರಲ್ಲಿ ನೀಡಿದ ಮಾಹಿತಿಯಂತೆ ಯಾವುದೇ ಸಿವಿಲ್ ವ್ಯಾಜ್ಯಗಳು ಇಲ್ಲ.


ಇಂದ್ರನೀಲ್ ರಾಜ್ಯಗುರು
2017: 141.22 ಕೋಟಿ ರು
2014: 122.59 ಕೋಟಿ ರು

ಚರಾಸ್ತಿ
5 ಕೋಟಿ ರು : 1 ಕೋಟಿ ರು ಮೌಲ್ಯದ ವಾಹನಗಳು, 34 ಲಕ್ಷ ರು + 2ಲಕ್ಷರು ಆಭರಣ ಹೊಂದಿದ್ದಾರೆ.
ಸ್ಥಿರಾಸ್ತಿ
* 56 ಕೋಟಿ ರು ಮೌಲ್ಯ ಕೃಷಿ ಭೂಮಿ
* 29 ಕೋಟಿ ರು ಮೌಲ್ಯದ ಕೃಷೇತರ ಭೂಮಿ
* 15 ಕೋಟಿ ರು ಗೂ ಅಧಿಕ ವಾಣಿಜ್ಯ ಉದ್ದೇಶಿತ ಕಟ್ಟಡ
* 14 ಕೋಟಿ ರು ಮೌಲ್ಯದ ವಸತಿ ಸಮುಚ್ಚಯ

ಸಾಲ : 27 ಕೋಟಿ ರು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gujarat Chief Minister Vijay Rupani declared assets worth Rs 9.09 crore, an increase of 21 per cent since 2014.Vijay Rupani is contesting from Rajkot West constituency.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ