Gujarat Election Results 2022: 7ನೇ ಬಾರಿ ಅಧಿಕಾರ ಹಿಡಿಯಲಿದೆಯೇ ಬಿಜೆಪಿ?
ಅಹಮದಾಬಾದ್, ಡಿ.08: ಗುಜರಾತ್ ಚುನಾವಣೆ 2022ರ ಫಲಿತಾಂಶ ಇಂದು ಪ್ರಕಟವಾಗಲಿದೆ. ಕಳೆದ 27 ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿರುವ ರಾಜ್ಯದಲ್ಲಿ ಈ ಬಾರಿಯು ಅಧಿಕಾರ ಪಡೆಯುವ ಸಾಧ್ಯತೆಯಿದೆ.
Recommended Video
ರಾಜ್ಯದಲ್ಲಿ ಬಿಜೆಪಿಯು ಸತತ 7ನೇ ಬಾರಿಗೆ ಅಧಿಕಾರ ಹಿಡಿಯಲಿದೆ ಎಂದು ಎಕ್ಸಿಟ್ ಪೋಲ್‌ಗಳ ಸಮೀಕ್ಷೆ ಹೇಳುತ್ತಿವೆ. ಇದರ ನಡುವೆ ಕಾಂಗ್ರೆಸ್, ಆಮ್ ಆದ್ಮಿ ಪಕ್ಷಗಳು ಕೂಡ ಗೆಲುವು ನಮ್ಮದೆ ಎನ್ನುತ್ತಿವೆ.
ಗುಜರಾತ್ ವಿಧಾನಸಭೆ ಚುನಾವಣೆಗೆ ಎರಡು ಹಂತಗಳಲ್ಲಿ ಮತದಾನ ನಡೆದಿದೆ. 182 ಸದಸ್ಯ ಬಲದ ವಿಧಾನಸಭೆಗೆ ಮತ ಎಣಿಕೆ ಮುಗಿದ ಕೂಡಲೇ ಚುನಾವಣಾ ಫಲಿತಾಂಶ 2022 ಪ್ರಕಟವಾಗಲಿದೆ. ಗುಜರಾತ್ ವಿಧಾನಸಭೆ ಚುನಾವಣೆ 2022 ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ನಡುವಿನ ಹೋರಾಟವಾಗಿದೆ.

ಗುಜರಾತ್ 27 ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿದೆ. ಗುಜರಾತ್‌ನಲ್ಲಿ ಬಿಜೆಪಿ ಏಳನೇ ಅವಧಿಗೆ ತನ್ನ ಗೆಲುವಿನ ಓಟವನ್ನು ಮುಂದುವರಿಸಲು ನೋಡುತ್ತಿದೆ. ಈ ಬಗ್ಗೆ ಬಿಜೆಪಿ ಕೂಡ ಆತ್ಮವಿಶ್ವಾಸದಲ್ಲಿದೆ. ಇದಕ್ಕೆ ಪೂರಕವೆಂಬಂತೆ ಎಕ್ಸಿಟ್ ಪೋಲ್‌ಗಳು ಸಾಥ್ ನೀಡಿವೆ.
ಇತ್ತ, ಎಎಪಿ ಬಿಜೆಪಿ ಭದ್ರಕೋಟೆಯಲ್ಲಿ ಹೆಜ್ಜೆ ಹಾಕಲು ಮತ್ತು ಬಿಜೆಪಿಗೆ ಪರ್ಯಾಯವಾಗಿ ಹೊರಹೊಮ್ಮಲು ಶ್ರಮಿಸುತ್ತಿದೆ. ಕಾಂಗ್ರೆಸ್ ಮಾತ್ರ ವಿಧಾನಸಭೆ ಚುನಾವಣೆಯಲ್ಲಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಬಯಸುತ್ತಿದೆ.
ಚುನಾವಣಾ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ಗುಜರಾತ್ ಚುನಾವಣಾ ಫಲಿತಾಂಶ 2022 ಇಂದು ಸಂಜೆ ಪ್ರಕಟವಾಗಲಿದೆ.
ಭಾರತೀಯ ಜನತಾ ಪಕ್ಷವು ಗುಜರಾತ್ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಲಿದೆ ಎನ್ನುತ್ತಿರುವಾಗ, ಅರವಿಂದ್ ಕೇಜ್ರಿವಾಲ್ ಪಕ್ಷ ಕೂಡ ಎಕ್ಸಿಟ್ ಪೋಲ್‌ಗಳ ಸಮೀಕ್ಷೆಯನ್ನು ತಿರಸ್ಕರಿಸಿದ್ದಾರೆ. ಹೀಗಾಗಿ ಎಲ್ಲಾ ಕಣ್ಣುಗಳು ಆಮ್ ಆದ್ಮಿ ಪಕ್ಷದ ಮೇಲಿವೆ.
ಆಪ್ ಇದುವರೆಗೆ ರಾಜ್ಯ ಪಕ್ಷವಾಗಿದೆ. 2022 ರ ಗುಜರಾತ್ ಚುನಾವಣೆಯ ಫಲಿತಾಂಶವು ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷದ ರಾಷ್ಟ್ರೀಯ ಮಹತ್ವಾಕಾಂಕ್ಷೆಯ ಭವಿಷ್ಯವನ್ನು ನಿರ್ಧರಿಸುತ್ತದೆ ಎನ್ನಲಾಗಿದೆ.
ಬಿಜೆಪಿಯ ಗುಜರಾತ್ ಭದ್ರಕೋಟೆಯನ್ನು ಭೇದಿಸುವ ಗುರಿ ಹೊಂದಿರುವ ಎಎಪಿ, ಇದಕ್ಕಾಗಿ ಎಲ್ಲಾ 182 ವಿಧಾನಸಭಾ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜೊತೆಗೆ ಭರ್ಜರಿ ಚುನಾವಣಾ ಭರವಸೆಗಳನ್ನು ನೀಡಿದೆ.












Click it and Unblock the Notifications