Gujarat Election Results 2022: ಫಲಿತಾಂಶ ಎಲ್ಲಿ, ಯಾವಾಗ ನೋಡಬಹುದು ತಿಳಿಯಿರಿ

ಅಹಮದಾಬಾದ್, ಡಿ.07: ಡಿಸೆಂಬರ್ 8 ರಂದು (ಗುರುವಾರ) ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ದೇಶದ ಜನರು ಈ ರಾಜ್ಯದ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಜನರ ಜೊತೆಗೆ ಮುಂದೆ ಚುನಾವಣೆ ಎದುರಿಸಲಿರುವ ರಾಜ್ಯಗಳ ನಾಯಕರು ಕಣ್ಣಿಟ್ಟಿದ್ದಾರೆ.

ಗುಜರಾತ್‌ನಲ್ಲಿ 182 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 1,621 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸತತ ಏಳನೇ ಅವಧಿಗೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ತನ್ನ ಗೆಲುವಿನ ಸಂಖ್ಯೆಯನ್ನು ಹೆಚ್ಚಿಸಲು ಬಯಸುತ್ತಿದೆ.

Recommended Video

      Gujarat Election Results: 150ಕ್ಕೂ ಸೀಟ್ ಗೆಲ್ಲುವತ್ತ ಬಿಜೆಪಿ, 7 ನೇ ಬಾರಿ ಸರ್ಕಾರ ರಚನೆ ಖಚಿತ | Oneindia

      ಎರಡು ಪಕ್ಷಗಳ ಸ್ಪರ್ಧೆ ಎನ್ನಲಾಗಿದ್ದ ಗುಜರಾತ್‌ಗೆ ಈ ಬಾರಿ ಹೊಸದಾಗಿ ಪ್ರವೇಶ ಪಡೆದ ಆಮ್ ಆದ್ಮಿ ಪಕ್ಷ (ಎಎಪಿ) ಭಾರೀ ಪ್ರಚಾರ ನಡೆಸಿದೆ. ಭರವಸೆಗಳ ಮಹಾಪೂರ ಹರಿಸಿದೆ. ಜೊತೆಗೆ ದೆಹಲಿ ಮಾದರಿಯನ್ನು ಜನರ ಮುಂದಿಟ್ಟು ಗುಜರಾತ್‌ನಲ್ಲಿ ಪಾದಾರ್ಪಣೆ ಮಾಡಲು ಪ್ರಯತ್ನಿಸುತ್ತಿದೆ.

      Gujarat Election Results 2022 Date and Time: When and where to watch Votes Counting and Final Results

      ಗುಜರಾತ್‌ನಲ್ಲಿ 182 ವಿಧಾನಸಭಾ ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಶೇ.64.33ರಷ್ಟು ಮತದಾನವಾಗಿದೆ. ಆದರೆ, ಇದು 2017ರ ಚುನಾವಣೆಯಲ್ಲಿ ದಾಖಲಾದ ಮತದಾನಕ್ಕೆ ಹೋಲಿಸಿದರೆ ಶೇ.4ಕ್ಕಿಂತ ಕಡಿಮೆಯಾಗಿದೆ.

      ಡಿಸೆಂಬರ್ 6 ರಂದು ಚುನಾವಣಾ ಆಯೋಗವು ಹಂಚಿಕೊಂಡ ಇತ್ತೀಚಿನ ಮಾಹಿತಿಯ ಪ್ರಕಾರ, ಡಿಸೆಂಬರ್ 1 ರಂದು 89 ಸ್ಥಾನಗಳಿಗೆ ನಡೆದ ಮೊದಲ ಹಂತದ ಚುನಾವಣೆಗೆ ಶೇಕಡಾ 63.31 ರಷ್ಟು ಮತದಾನವಾಗಿದೆ. 93 ಸ್ಥಾನಗಳಿಗೆ ಕ್ಕೆ ಡಿಸೆಂಬರ್ 5 ರಂದು ನಡೆದ ಎರಡನೇ ಹಂತದ ಮತದಾನಕ್ಕೆ ಶೇಕಡಾ 65.30 ರಷ್ಟು ಮತದಾನವಾಗಿದೆ.

      33 ಜಿಲ್ಲೆಗಳ ಎಲ್ಲಾ 182 ಸ್ಥಾನಗಳ ಸರಾಸರಿ ಮತದಾನವು 64.33 ಪ್ರತಿಶತದಷ್ಟಿದೆ.

      ಒಟ್ಟು 4.91 ಕೋಟಿ ನೋಂದಾಯಿತ ಮತದಾರರಲ್ಲಿ ಸುಮಾರು 3.16 ಕೋಟಿ ಮತದಾರರು ಡಿಸೆಂಬರ್ 1 ಮತ್ತು 5 ರಂದು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ.

      *ಗುಜರಾತ್ ಚುನಾವಣೆಯ ಫಲಿತಾಂಶ ಯಾವಾಗ ಪ್ರಕಟವಾಗಲಿದೆ?*

      ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಡಿಸೆಂಬರ್ 8 ರಂದು ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ.

      Gujarat Election Results 2022 Date and Time: When and where to watch Votes Counting and Final Results

      *ಗುಜರಾತ್ ಚುನಾವಣಾ ಫಲಿತಾಂಶ 2022 ಎಲ್ಲಿ ನೋಡಬಹುದು?*

      ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಚುನಾವಣಾ ಫಲಿತಾಂಶಗಳನ್ನು ಟ್ರ್ಯಾಕ್ ಮಾಡಬಹುದು.

      *ಗುಜರಾತ್ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು*

      ಭಾರತೀಯ ಜನತಾ ಪಕ್ಷದ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ದಲಿತ ನಾಯಕ ಜಿಗ್ನೇಶ್ ಮೇವಾನಿ, ಇಸುದನ್ ಗಧ್ವಿ (ಎಎಪಿಯ ಸಿಎಂ ಅಭ್ಯರ್ಥಿ), ರಿವಾಬಾ ಜಡೇಜಾ (ಬಿಜೆಪಿ), ಮತ್ತು ಪರೇಶ್ ಧನಾನಿ (ಕಾಂಗ್ರೆಸ್) ಪ್ರಮುಖ ಸ್ಪರ್ಧಿಗಳಲ್ಲಿ ಸೇರಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+