ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Gujarat Election Results 2022: ತನ್ನ ಸೋಲಿಗೆ ತನ್ನನ್ನೇ ದೂಷಿಸಬೇಕು ಕಾಂಗ್ರೆಸ್

|
Google Oneindia Kannada News

ಅಹಮದಾಬಾದ್, ಡಿ.08: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ತನ್ನ ಕಳಪೆ ಸ್ಪರ್ಧೆಯೊಡ್ಡಿ ಪಾತಾಳಕ್ಕೆ ಕುಸಿದಿರುವ ಕಾಂಗ್ರೆಸ್ ತನನ ಸೋಲಿಗೆ ಮತ್ತೊಬ್ಬರನ್ನು ದೋಷಿಸುವ ಹಾಗಿಲ್ಲ. ಏಕೆಂದರೆ ಅದು ತನ್ನದೆ ತಪ್ಪುಗಳಿಂದ ಈ ಸ್ಥಾನಕ್ಕೆ ಇಳಿದಿದೆ.

ಆದರೆ, ಅದರ ಈ ಕಳಪೆ ಪೈಪೋಟಿಗೆ ಆಮ್ ಆದ್ಮಿ ಪಕ್ಷ ಅಲ್ಪ ಕಾಣಿಕೆ ನೀಡಿದೆ. ಅಬ್ಬರದ ನಡುವೆಯೇ ಸ್ಪರ್ಧೆಗೆ ಇಳಿದ ಎಎಪಿ ಚುನಾವಣೆಯಲ್ಲಿ ಗಮನಾರ್ಹ ಮತಗಳಿಕೆಯೊಂದಿಗೆ ಸೋಲನ್ನೊಪ್ಪಿಕೊಂಡಿದೆ. ಆದರೆ ಕಾಂಗ್ರೆಸ್ ಪತನಕ್ಕೆ ಕೊಡುಗೆ ನೀಡಿದಂತಿದೆ.

ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳುಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳು

ಬಿಜೆಪಿ ತನ್ನ ಈಗಾಗಲೇ ಭಾರೀ ಮತಗಳನ್ನು ಪಡೆದು, ಗೆಲುವಿನ ಅಂತರವನ್ನು ಎರಡು ಪಕ್ಷಗಳು ಎಟುಕಲಾಗದ ಎತ್ತರಕ್ಕೆ ತೆಗೆದುಕೊಂಡು ಹೋಗಿದೆ. ಕಾಂಗ್ರೆಸ್ ಮತಗಳ ಪಾಲು ಶೇಕಡಾ 25 ಕ್ಕಿಂತ ಕಡಿಮೆಯಾಗಿದೆ. ಅಂದರೆ ಆ ಮತಗಳನ್ನು ಎಎಪಿ ಸೆಳೆದುಕೊಂಡಿದೆ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಿರುವುದು ಗುಜರಾತ್‌ನಲ್ಲಿ ಕಾಂಗ್ರೆಸ್‌ನ ಮತಗಳನ್ನು ಮಾತ್ರ ಎಎಪಿ ವಿಭಜಿಸಿದೆ ಎಂಬುವುದು.

ಹಾಗಾದರೆ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾದ ಅಂಶಗಳನ್ನು ಗಮನಿಸಿಸೋಣ.

ಹೊರಗಿನ ನಾಯಕರಿಗೆ ಪ್ರಚಾರದ ಜವಾಬ್ದಾರಿ

ಹೊರಗಿನ ನಾಯಕರಿಗೆ ಪ್ರಚಾರದ ಜವಾಬ್ದಾರಿ

ಗುಜರಾತ್‌ನಲ್ಲಿ ಚುನಾವಣೆ ಘೋಷಣೆಯಾದಾಗಿನಿಂದಲೂ ಕಾಂಗ್ರೆಸ್ ಎಲ್ಲೂ ಸರಿಯಾಗಿ ಪ್ರಚಾರ ಆರಂಭಿಸಿರಲಿಲ್ಲ. ಪ್ರಬಲವಾದ ಕಾಂಗ್ರೆಸ್ ಪ್ರಚಾರದ ಕೊರತೆ ರಾಜ್ಯದಲ್ಲಿ ಎದ್ದು ಕಾಣುತ್ತಿತ್ತು. ಇದಕಕೆ ಪೂರಕವೆಂಬಂತೆ ಚುನಾವಣಾ ಪ್ರಚಾರಕ್ಕೆ ನಾಯಕರಾಗಿ ಹೊರಗಿನವರನ್ನು ನೇಮಿಸಲಾಗಿತ್ತು.

2017 ರ ಗುಜರಾತ್ ಚುನಾವಣೆಯಲ್ಲಿ, ಕಾಂಗ್ರೆಸ್ ಗಟ್ಟಿಯಾದ ಮತ್ತು ಉತ್ಸಾಹಭರಿತ ಪ್ರಚಾರವನ್ನು ನಡೆಸಿತ್ತು. ಆಗ ರಾಜ್ಯದ ಒಟ್ಟು 182 ಸ್ಥಾನಗಳಲ್ಲಿ 77 ಸ್ಥಾನಗಳನ್ನು ಗೆದ್ದಿತ್ತು. ಆಗ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗುವ ಹಾದಿಯಲ್ಲಿದ್ದರು. ತಾಯಿ ಸೋನಿಯಾ ಗಾಂಧಿ ಅವರಿಂದ ಅಧಿಕಾರ ಸ್ವೀಕರಿಸುವ ಮುನ್ನ ಗುಜರಾತ್ ಚುನಾವಣೆ ಅವರಿಗೆ ವೈಯಕ್ತಿಕ ಸವಾಲಾಗಿತ್ತು.

ಗುಜರಾತ್ ಪ್ರಚಾರದಲ್ಲಿ ರಾಹುಲ್ ಸಕ್ರಿಯ ಆಸಕ್ತಿ ವಹಿಸಿದ್ದರಿಂದ ಪಕ್ಷವು ತನ್ನ ಆಂತರಿಕ ಕಲಹಗಳನ್ನು ಅಲ್ಲಿ ನಿಯಂತ್ರಣದಲ್ಲಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಪ್ರಚಾರವು ಒಂದು ಉದ್ದೇಶ ಮತ್ತು ನಿರ್ದೇಶನವನ್ನು ಹೊಂದಿತ್ತು. ನಾಯಕರು ಮತ್ತು ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸಿದ್ದರು.

ಈ ಬಾರಿ ಭಾರತ್ ಜೋಡೋ ಯಾತ್ರೆಯಲ್ಲಿಯೇ ಇರುವ ರಾಹುಲ್ ಗಾಂಧಿ, ಚುನಾವಣೆಯತ್ತ ತಮ್ಮ ಗಮನ ಹರಿಸಲಿಲ್ಲ. ನಾಮಾಕಾವಸ್ತೆಗೆ ಒಮ್ಮೆ ಬಂದು ಹೋದರು ಅಷ್ಟೆ.

ಚುನಾವಣೆಯಲ್ಲಿ ಗೆಲ್ಲುವ ಉತ್ಸಾಹ ಪಕ್ಷದಿಂದ ಬರಲೇ ಇಲ್ಲ

ಚುನಾವಣೆಯಲ್ಲಿ ಗೆಲ್ಲುವ ಉತ್ಸಾಹ ಪಕ್ಷದಿಂದ ಬರಲೇ ಇಲ್ಲ

ಈ ಬಾರಿ ಕಾಂಗ್ರೆಸ್ ಪ್ರಚಾರ ತೀವ್ರ ನಿರಾಸಕ್ತಿಯಿಂದ ಕೂಡಿತ್ತು. ಪಕ್ಷವು ಚುನಾವಣೆಯಲ್ಲಿ ಉತ್ಸಾಹ ಹೊಂದಿಲ್ಲ ಎಂಬ ಮಾತುಗಳು ಬಹಳ ಮುಂಚೆಯೇ ಹೊರಬಿದಿತ್ತು. ಈ ವದಂತಿಯನ್ನು ಹೋಗಲಾಡಿಸಲು ಕಾಂಗ್ರೆಸ್ ಯಾವುದೇ ಪ್ರಯತ್ನ ಮಾಡಲಿಲ್ಲ. ನಂತರ ಪ್ರಚಾರ ಆರಂಭಿಸಿದರೂ ಕೂಡ, ಅದು ಚುನಾವಣೆ ವಿಷಯದಲ್ಲಿ ಗಂಭೀರವಾಗಿದೆ ಎಂಬ ಯಾವ ಸಂದೇಶವು ಜನರಿಗೆ ತಲುಪಲಿಲ್ಲ.

ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರನ್ನು ಗುಜರಾತ್‌ನಲ್ಲಿ ಪಕ್ಷದ ಹಿರಿಯ ವೀಕ್ಷಕರನ್ನಾಗಿ ನೇಮಿಸಲಾಯಿತು. ಆದರೆ, ಅವರು ರಾಜಸ್ಥಾನದಲ್ಲಿ ಉಂಟಾಗಿದ್ದ ಸಮಸ್ಯೆಗಳ ಬಗ್ಗೆ ಚಿಂತಿಸುತ್ತಿದ್ದರು. ಗುಜರಾತ್‌ನಲ್ಲಿ ಅವರ ಕೆಲಸಗಳಲ್ಲಿ ಮನಸ್ಸಿರಲಿಲ್ಲ.

ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಠಾಕೂರ್ ಅವರು ಅನುಭವಿ. ಆದರೆ, ಭರತ್ ಸಿಂಗ್ ಸೋಲಂಕಿ ಅವರ ನೆರಳಿನಿಂದ ಹೊರಬರಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ಪಕ್ಷದ ಮುಖಂಡರು ಹೇಳುತ್ತಾರೆ.

ಪ್ರಚಾರ ಸಮಿತಿಯಲ್ಲಿಯೇ ಹೆಚ್ಚಾಗಿದ್ದ ಮನಸ್ತಾಪಗಳು

ಪ್ರಚಾರ ಸಮಿತಿಯಲ್ಲಿಯೇ ಹೆಚ್ಚಾಗಿದ್ದ ಮನಸ್ತಾಪಗಳು

ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಮತ್ತೊಂದು ಪ್ರಮುಖ ಅಡಚಣೆಯೆಂದರೆ ಸಂಪನ್ಮೂಲಗಳು. ಅಹ್ಮದ್ ಪಟೇಲ್ ಮತ್ತು ಅಶೋಕ್ ಗೆಹ್ಲೋಟ್ ಜೋಡಿ ಸಂಪನ್ಮೂಲಗಳನ್ನು ಸಮರ್ಥವಾಗಿ ನಿರ್ವಹಿಸುತ್ತಾರೆ ಎಂದು ಈ ಬಾರಿ ಪಕ್ಷದ ಪ್ರಚಾರದ ಉಸ್ತುವಾರಿ ವಹಿಸಲಾಗಿತ್ತು. ಗೆಹ್ಲೋಟ್ ಅವರ ನಿಕಟವರ್ತಿ ಎಂದು ಪರಿಗಣಿಸಲ್ಪಟ್ಟಿದ್ದ ರಾಜಸ್ಥಾನದ ಮಾಜಿ ಸಚಿವ ರಘು ಶರ್ಮಾ ಅವರನ್ನು ರಾಜ್ಯ ಉಸ್ತುವಾರಿಯನ್ನಾಗಿ ಪಕ್ಷವು ನೇಮಿಸಿತು. ಇಲ್ಲಿಯೇ ಪಕ್ಷ ಎಡವಟ್ಟು ಮಾಡಿತ್ತು.

ಏಕೆಂದರೆ, ಚುನಾವಣಾ ಪ್ರಚಾರ ಆರಂಭದಲ್ಲೇ ಕಳೆದ ಎರಡು ತಿಂಗಳಲ್ಲಿ ಗೆಹ್ಲೋಟ್ ಮತ್ತು ಶರ್ಮಾ ನಡುವಿನ ಸಂಬಂಧ ಹಳಸಿತ್ತು ಎಂದು ಮೂಲಗಳು ತಿಳಿಸಿವೆ. ಜೊತೆಗೆ ಗುಜರಾತ್‌ನಲ್ಲಿ ಕಾಂಗ್ರೆಸ್‌ ಪ್ರಚಾರ ಮಾಡುತ್ತಿದೆ ಎಂಬುದು ಕೂಡ ಯಾರಿಗೆ ತಿಳಿಯಲಿಲ್ಲ.

ಹಿಮಾಚಲ ಪ್ರದೇಶದ ಮೇಲೆ ಪ್ರಿಯಾಂಕಾ ಗಾಂಧಿ ಸಂಪೂರ್ಣ ಗಮನ

ಹಿಮಾಚಲ ಪ್ರದೇಶದ ಮೇಲೆ ಪ್ರಿಯಾಂಕಾ ಗಾಂಧಿ ಸಂಪೂರ್ಣ ಗಮನ

ಗುಜರಾತ್‌ಗೆ ವ್ಯತಿರಿಕ್ತವಾಗಿ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ನ ಕಥೆಯೇ ಬೇರೆಯಾಗಿತ್ತು. ಹಿಮಾಚಲ ಚುನಾವಣೆಯ ಫಲಿತಾಂಶದ ಹೊರತಾಗಿ, ಕಾಂಗ್ರೆಸ್ ಅಂತಿಮವಾಗಿ ಅಧಿಕಾರದಲ್ಲಿರುವ ಬಿಜೆಪಿಗಿಂತ ಮುಂಚೂಣಿಯಲ್ಲಿದೆ. ಇದಕ್ಕೆ ಕಾರಣ ಗುಡ್ಡಗಾಡು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರವು ಉತ್ತಮವಾಗಿತ್ತು.

ಹಿಮಾಚಲದಲ್ಲಿ ಪಕ್ಷಕ್ಕೆ ಹೋರಾಟದ ಅವಕಾಶವಿದೆ ಎಂದು ಕಂಡುಕೊಂಡ ಪ್ರಿಯಾಂಕಾ ಗಾಂಧಿ ವಾದ್ರಾ ತನ್ನ ನೇತೃತ್ವದಲ್ಲಿ ಗೆಲುವು ದಾಖಲಿಸಲು ಭಾರೀ ಪ್ರಚಾರ ಆರಂಭಿಸಿದ್ದರು. ಪ್ರಿಯಾಂಕಾ ಹಿಮಾಚಲದಲ್ಲಿ ಪ್ರಚಾರಕ್ಕಾಗಿ ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಅವರೊಂದಿಗೆ ಗಂಟು ಬಿದ್ದು ಕೆಲಸ ಮಾಡಿದರು.

ಹಿಮಾಚಲದಲ್ಲಿ ಆಡಳಿತಾರೂಢ ಬಿಜೆಪಿಗೆ ಏಟು ನೀಡಬಹುದಾದ ಸಮಸ್ಯೆಗಳನ್ನು ಪಕ್ಷವು ಮೊದಲೇ ಗುರುತಿಸಿತ್ತು. ಅವುಗಳಲ್ಲಿ ಹಳೆಯ ಪಿಂಚಣಿ ಯೋಜನೆ (OPS), ನಿರುದ್ಯೋಗ, ಒಂದು ಲಕ್ಷ ಉದ್ಯೋಗಗಳು, ಪ್ರತಿಯೊಬ್ಬ ಮಹಿಳೆಯರಿಗೂ 1,500 ರೂಪಾಯಿಗಳ ಆರ್ಥಿಕ ನೆರವು, ಅಗ್ನಿವೀರ್ ಯೋಜನೆಯ ವಿರುದ್ಧದ ಅಸಮಾಧಾನ ಮತ್ತು ಬೆಲೆ ಏರಿಕೆಗಳ ಬಗ್ಗೆ ಪ್ರಿಯಾಂಕಾ ಬಹಳ ಉತ್ಸುಕವಾಗಿ ಮಾತನಾಡಿದ್ದರು.

ಇವುಗಳ ಜೊತೆಗೆ ಹಿಮಾಚಲದಲ್ಲಿ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಕ್ಷದ ನಾಯಕರು ಕೆಲಸ ಮಾಡಿದರು. ಈ ಕಾರ್ಯ ಗುಜರಾತ್ ಚುನಾವಣೆಯಲ್ಲಿ ಕಂಡುಬರಲಿಲ್ಲ. ಪ್ರಚಾರದಲ್ಲಿ ಪ್ರತಿಯೊಬ್ಬರು ನಿರಾಸಕ್ತಿ ತೋರಿದ್ದರು. ತಮ್ಮ ಒಳಜಗಳಗಳನ್ನು ಬದಿಗಿಡಲಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ರಾಹುಲ್ ಗಾಂಧಿ ಚುನಾವಣೆಗೆ ತನ್ನ ಕೊಡುಗೆ ನೀಡಲಿಲ್ಲ.

English summary
Gujarat Election Results 2022: Congress should blame itself for its spectacular fall in the Gujarat Assembly polls. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X