ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Gujarat Election Results 2022: ರಾಜ್ಯ ಬಿಜೆಪಿ ಕಚೇರಿಗೆ ತೆರಳಿದ ಭೂಪೇಂದ್ರ ಪಟೇಲ್‌

|
Google Oneindia Kannada News

ಅಹಮದಾಬಾದ್, ಡಿಸೆಂಬರ್‌ 08: ಗುಜರಾತ್‌ ವಿಧಾನಸಭೆ ಚುನಾವಣೆಯ ಮತ ಎಣಿಕೆ(Gujarat Election Results 2022) ಪ್ರಕ್ರಿಯೆ ಇಂದು ನಡೆಯುತ್ತಿದೆ. 2017ರ ಚುನಾವಣೆಯಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್‌ ತೀವ್ರ ನಷ್ಟವನ್ನು ಅನುಭವಿಸಿದೆ. ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷವು ಒಂದಂಕಿಯ ಸ್ಥಾನಗಳನ್ನು ಗಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದೆ. ಒಟ್ಟಾರೆಯಾಗಿ, ಗುಜರಾತ್‌ ಚುನಾವಣೆ ಫಲಿತಾಂಶ ಬಿಜೆಪಿಯ ನಾಗಲೋಟವನ್ನು ಮುಂದುವರಿಸುವ ಎಲ್ಲ ಲಕ್ಷಣಗಳನ್ನೂ ಹೊಂದಿದೆ.

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಘಟ್ಲೋಡಿಯಾದಿಂದ 50000 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಡಾ.ಅಮೀ ಯಾಜ್ನಿಕ್ ಅವರನ್ನು ಸೋಲಿಸಿದ್ದಾರೆ

Recommended Video

Gujarat Election Results: ಡೋಲು ಬಾರಿಸಿ, ನೃತ್ಯ ಮಾಡಿ ಕಾರ್ಯಕರ್ತರ ಸಂಭ್ರಮಾಚರಣೆ | Oneindia

ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳುಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳು

ಚುನಾವಣಾ ಆಯೋಗದ ಇತ್ತೀಚಿನ ಮಾಹಿತಿಯ ಪ್ರಕಾರ, ಪಟೇಲ್ ಅವರು ಶೇಕಡಾ 80.86 ರಷ್ಟು ಮತಗಳನ್ನು ಪಡೆದಿದ್ದಾರೆ. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಅಮಿಬೆನ್ ಯಾಗ್ನಿಕ್ ಅವರು ಪಡೆದ ಶೇಕಡಾ 9.81 ರಷ್ಟು ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಮತ್ತೊಂದೆಡೆ, ಎಎಪಿ ಅಭ್ಯರ್ಥಿ ವಿಜಯ್ ಪಟೇಲ್ ಶೇ 6.73 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.

Gujarat Election Results 2022: Bhupendra Patel Wins From Ghatlodia, What is Vote Share

ಗೆದ್ದು ಬೀಗಿರುವ ಭೂಪೇಂದ್ರ ಪಟೇಲ್‌ ರಾಜ್ಯ ಬಿಜೆಪಿ ಕಚೇರಿಯತ್ತ ತೆರಳಿದ್ದಾರೆ. ಅಲ್ಲಿ ನೆರೆದಿರುವ ಕಾರ್ಯಕರ್ತರ ಸಂಭ್ರಮಾಚಣೆಯಲ್ಲಿ ಪಾಲ್ಗೊಂಡಿದ್ದಾರೆ

ಗಾಂಧಿನಗರ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಪಾಟಿದಾರ್ ಪ್ರಾಬಲ್ಯದ ಘಟ್ಲೋಡಿಯಾ ಗುಜರಾತ್‌ಗೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದೆ. ಭೂಪೇಂದ್ರ ಪಟೇಲ್ ಮತ್ತು ಆನಂದಿಬೆನ್ ಪಟೇಲ್ ಅವರು ಗುಜರಾತ್‌ನ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ್ದಾರೆ. ಇದು ಬಿಜೆಪಿಯ ಭದ್ರಕೋಟೆಯಾಗಿದೆ.

Gujarat Election Results 2022: Bhupendra Patel Wins From Ghatlodia, What is Vote Share

ಭೂಪೇಂದ್ರ ಪಟೇಲ್ ಅವರು, 2017 ರಲ್ಲಿ 1.17 ಲಕ್ಷ ಮತಗಳ ಭಾರೀ ಅಂತರದಿಂದ ಇಲ್ಲಿ ಗೆದ್ದಿದ್ದರು. ಈ ಚುನಾವಣೆಯ ನಂತರ ಪಟೇಲ್ ಅವರಿಗೆ ಮತ್ತೆ ಸಿಎಂ ಸ್ಥಾನ ನೀಡಲಾಗುವುದು ಎಂದು ಬಿಜೆಪಿ ಈಗಾಗಲೇ ಘೋಷಿಸಿದೆ.

ಸುಮಾರು 3.70 ಲಕ್ಷ ಮತದಾರರನ್ನು ಘಟ್ಲೋಡಿಯಾ ಕ್ಷೇತ್ರ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಬಿಜೆಪಿ ಗೆಲ್ಲುವುದು ಬಹುಮುಖ್ಯವಾಗಿತ್ತು. ಚುನಾವಣೋತ್ತರ ಸಮೀಕ್ಷೆಗಳೂ ಸಹ ಬಿಜೆಪಿ ಗೆಲುವಿನ ಬಗ್ಗೆ ಹೇಳಿದ್ದವು. ಗುಜರಾತಿನ ಗೆಲುವು 2024 ರ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದು ಬಿಜೆಪಿ ನಾಯಕರು ಪ್ರತಿಪಾದಿಸಿದ್ದಾರೆ.

English summary
Gujarat Chief Minister Bhupendra Patel has won from Ghatlodia by a margin of more than 50000 thousand votes. He has defeated his rival Dr. Ami Yaznik of Congress,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X