ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Gujarat CM Bhupendra Patel : ಗುಜರಾತ್‌ ಸಿಎಂ ಅಭ್ಯರ್ಥಿ ಭೂಪೇಂದ್ರ ಪಟೇಲ್‌ ಹಿನ್ನೆಲೆ ಏನು?

|
Google Oneindia Kannada News

ಅಹಮದಾಬಾದ್‌, ಡಿಸೆಂಬರ್‌ 8: ಬಿಜೆಪಿಯ ಹಿರಿಯ ನಾಯಕ ಭೂಪೇಂದ್ರ ಪಟೇಲ್ ಗುಜರಾತ್‌ನ ನೂತನ ಮುಖ್ಯಮಂತ್ರಿಯಾಗಲಿದ್ದಾರೆ. ರಾಜ್ಯವು ವಿಧಾನಸಭಾ ಚುನಾವಣೆಗೆ ಹೋಗುವ ಮೊದಲು ಭೂಪೇಂದ್ರ ಪಟೇಲ್‌ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿತ್ತು.

ಜುಲೈ 15 1965ರಲ್ಲಿ ಜನಿಸಿದ ಭೂಪೇಂದ್ರ ಪಟೇಲ್‌ ಅವರು ಘಟ್ಲೋಡಿಯಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. 2017ರಲ್ಲಿ ಮೊದಲ ಬಾರಿ ಶಾಸಕರಾದ ಅವರು ಆಡಳಿತರೂಢ ಬಿಜೆಪಿಯ ಹಾಲಿ ಮುಖ್ಯಮಂತ್ರಿಯೂ ಆಗಿದ್ದಾರೆ. ಅವರು ಈ ಹಿಂದೆ ಶಾಸಕರಾಗುವ ಮೊದಲು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಗುಜರಾತ್‌ನ ಪ್ರಭಾವಿ ಪಟೇಲ್ ಅಥವಾ ಪಾಟಿದಾರ್ ಸಮುದಾಯಕ್ಕೆ ಸೇರಿದವರಾಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ಅವರು ಪ್ರಮುಖ ಸ್ಥಾನವನ್ನು ಹೊಂದಿದ್ದರು.

ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳುಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳು

Recommended Video

ಗುಜರಾತ್ ಭರ್ಜರಿ ಮುನ್ನಡೆಗೆ ಸಿ.ಎಂ ಬೊಮ್ಮಾಯಿ ಫಸ್ಟ್ ರಿಯಾಕ್ಷನ್ | Oneindia Kannada

ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರ ಆಪ್ತ ಸಹಾಯಕರಾಗಿ ಗುರುತಿಸಿಕೊಂಡಿದ್ದ ಭೂಪೇಂದ್ರ ಪಟೇಲ್ ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದ ನೇತೃತ್ವ ವಹಿಸಿದ್ದರು. ಕುತೂಹಲಕಾರಿಯಾಗಿ, ಭೂಪೇಂದ್ರ ಎಂದಿಗೂ ಸಚಿವ ಸ್ಥಾನವನ್ನು ಹೊಂದಿರಲಿಲ್ಲ. ಆದರೆ ಎಲ್ಲರಿಗೂ ಆಶ್ಚರ್ಯವಾಗುವಂತೆ ಇಪ್ಪತ್ತು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯಂತೆಯೇ ಉನ್ನತ ಹುದ್ದೆಗೆ ಆಯ್ಕೆಯಾದರು.

Gujarat Election results 2022: Bhupendra Patel Biography, age, family, political career

ಅವರು 2017ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಶಶಿಕಾಂತ್ ಪಟೇಲ್ ಅವರನ್ನು ಸೋಲಿಸಿದ ನಂತರ ಘಟ್ಲೋಡಿಯಾ ಕ್ಷೇತ್ರದ ಶಾಸಕರಾದರು. ಅವರು 1,17,000 ದಾಖಲೆಯ ಮತಗಳ ಅಂತರದಿಂದ ಗೆದಿದ್ದರು. ಅವರು ಶಿಕ್ಷಣದಲ್ಲಿ ಪಟೇಲ್ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾವನ್ನು ಪಡೆದಿದ್ದಾರೆ.

ವಿಧಾನಸಭೆ ಚುನಾವಣೆಗೆ ಒಂದು ವರ್ಷ ಮುಂಚಿತವಾಗಿ, ವಿಜಯ್ ರೂಪಾನಿ ಅವರು ಹುದ್ದೆಯಿಂದ ಅನಿರೀಕ್ಷಿತವಾಗಿ ನಿರ್ಗಮಿಸಿದ ಎರಡು ದಿನಗಳ ನಂತರ, ಮೊದಲ ಅವಧಿಯ ಶಾಸಕರಾದ ಭೂಪೇಂದ್ರ ಪಟೇಲ್ ಸೋಮವಾರ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. 59 ವರ್ಷದ ಭೂಪೇಂದ್ರ ಪಟೇಲ್ ಅವರು ಗುಜರಾತ್‌ನ 17ನೇ ಮುಖ್ಯಮಂತ್ರಿಯಾಗಿ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರಿಂದ ಸರಳ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಅವರು ಮೂಲತಃ ಬಿಲ್ಡರ್ ಆಗಿದ್ದಾರೆ. ಅವರು ಸರ್ದಾರ್ಧಾಮ್ ವಿಶ್ವ ಪಾಟಿದಾರ್ ಕೇಂದ್ರದ ಟ್ರಸ್ಟಿ ಮತ್ತು ವಿಶ್ವ ಉಮಿಯಾ ಫೌಂಡೇಶನ್‌ನ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಅವರು ದಾದಾ ಭಗವಾನ್ ಸ್ಥಾಪಿಸಿದ ಅಕ್ರಂ ವಿಜ್ಞಾನ ಚಳವಳಿಯನ್ನು ಮುನ್ನಡೆಸಿದ್ದಾರೆ. ಅವರ ಆಸಕ್ತಿ ಕ್ರೀಡೆಗಳು ಕ್ರಿಕೆಟ್ ಮತ್ತು ಬ್ಯಾಡ್ಮಿಂಟನ್‌ ಆಗಿದೆ.

Gujarat Election results 2022: Bhupendra Patel Biography, age, family, political career

ಪಟೇಲ್ ಅವರು 1995-1996, 1999-2000 ಮತ್ತು 2004-2006ರಲ್ಲಿ ಮೆಮ್‌ನಗರ ನಗರಪಾಲಿಕೆಯ ಸದಸ್ಯರಾಗಿದ್ದರು. ಅವರು 1999-2000ರಲ್ಲಿ ಮೆಮ್‌ನಗರ ನಗರಪಾಲಿಕೆಯ ಅಧ್ಯಕ್ಷರಾಗಿದ್ದರು. ಅವರು 2008 ರಿಂದ 2010 ರವರೆಗೆ ಅಮದವಾಡ ಮುನ್ಸಿಪಲ್ ಕಾರ್ಪೊರೇಶನ್ ಶಾಲಾ ಮಂಡಳಿಯ ಉಪಾಧ್ಯಕ್ಷರಾಗಿದ್ದರು. ಅವರು 2010 ರಿಂದ 2015 ರವರೆಗೆ ಥಾಲ್ತೇಜ್ ವಾರ್ಡ್‌ನಿಂದ ಕೌನ್ಸಿಲರ್ ಆಗಿದ್ದರು. 2015 ರಿಂದ 2017 ರವರೆಗೆ ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಇಲ್ಲಿನ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

English summary
Gujarat Election results 2022: Senior BJP leader Bhupendra Patel will be the new Chief Minister of Gujarat. Bhupendra Patel was announced as the chief ministerial candidate before the state went to assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X