
Gujarat Assembly Election 2022: 2ನೇ ಹಂತದ ಮತದಾನ- ದಿನಾಂಕ, ವೇಳೆ, ಕ್ಷೇತ್ರಗಳ ಪಟ್ಟಿ
ಗಾಂಧಿನಗರ, ಡಿಸೆಂಬರ್ 3: ಗುಜರಾತ್ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಚುನಾವಣೆ ಡಿಸೆಂಬರ್ 5 ರಂದು ನಡೆಯಲಿದೆ. ಇದು ಚುನಾವಣಾ ಕಣದಲ್ಲಿರುವ 833 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದೆ.
182 ಸದಸ್ಯ ಬಲದ ಗುಜರಾತ್ ವಿಧಾನಸಭೆ ಚುನಾವಣೆಯ ಫಲಿತಾಂಶ ಡಿಸೆಂಬರ್ 8 ರಂದು ಪ್ರಕಟವಾಗಲಿದೆ. ಒಂದನೇ ಹಂತದ ಮತದಾನ ಡಿಸೆಂಬರ್ 01ರಂದು ನಡೆದಿದೆ. ಗುಜರಾತ್ ವಿಧಾನಸಭೆಯ 182 ಸ್ಥಾನಗಳಲ್ಲಿ 13 ಸ್ಥಾನಗಳು ಎಸ್‌ಸಿ ಹಾಗೂ 27 ಎಸ್‌ಟಿಗಳಿಗೆ ಮೀಸಲಾಗಿದೆ.
14 ಜಿಲ್ಲೆಗಳ ಒಟ್ಟು 93 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 5 ರಂದು ಮತದಾನ ನಡೆಯಲಿದ್ದು, ಬೆಳಗ್ಗೆ 8 ಗಂಟೆಗೆ ಆರಂಭವಾಗಿ ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ. ಎರಡನೇ ಹಂತದ ಚುನಾವಣೆಯ ಪ್ರಚಾರ ಇಂದು(ಶನಿವಾರ) ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ.

ಗುಜರಾತ್ ಚುನಾವಣೆ ಪ್ರಚಾರದಲ್ಲಿ ಭಾಗಿಯಾದ ಪ್ರಮುಖರು
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಭಾರತೀಯ ಜನತಾ ಪಕ್ಷದ ನಾಯಕರು ರಾಜ್ಯದಲ್ಲಿ ನಡೆದ ಹಲವಾರು ರ್‍ಯಾಲಿಗಳಲ್ಲಿ ಹಾಗೂ ರೋಡ್ ಶೋಗಳನ್ನು ನಡೆಸಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಪೈಪೋಟಿ ನೀಡಿರುವ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರು ಕೂಡ ರಾಜ್ಯದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಎಎಪಿ ನಾಯಕ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಸಂಸದ ಸಂಜಯ್ ಸಿಂಗ್ ಸೇರಿದಂತೆ ಹಲವು ಪ್ರಮುಖ ನಾಯಕರು ರಾಜ್ಯದಲ್ಲಿ ಪ್ರಚಾರ ನಡೆಸಿದ್ದಾರೆ.
ಕಾಂಗ್ರೆಸ್ ರಾಜ್ಯ ನಾಯಕರಾದ ಅಲ್ಪೇಶ್ ಕಥಿರಿಯಾ, ರಾಜ್ಯ ಕಾಂಗ್ರೆಸ್ ರಾಜ್ಯ ಘಟಕದ ಮುಖ್ಯಸ್ಥ ಜಗದೀಶ್ ಠಾಕೋರ್ ಮತ್ತು ಸಂಸದ ಶಕ್ತಿಸಿಂಗ್ ಗೋಹಿಲ್ ಪ್ರಚಾರ ಮಾಡಿದ್ದಾರೆ.

ಗುಜರಾತ್ ಚುನಾವಣೆಯಲ್ಲಿ ಮೂರು ಪಕ್ಷಗಳ ನಡುವೆ ಸ್ಪರ್ಧೆ
ಬಿಜೆಪಿ ಮತ್ತು ಎಎಪಿ ಎಲ್ಲಾ 93 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ 90 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇತರ ಮೂರು ಸ್ಥಾನಗಳಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಎರಡನೇ ಹಂತದ ಚುನಾವಣೆಯಲ್ಲಿ ಒಟ್ಟು 285 ಸ್ವತಂತ್ರ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ.
ಎರಡನೇ ಹಂತದ ಚುನಾವಣೆಯಲ್ಲಿ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳ ಪೈಕಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಹಿರಿಯ ಬಿಜೆಪಿ ಸಚಿವ ಹೃಷಿಕೇಶ್ ಪಟೇಲ್, ಬಿಜೆಪಿ ನಾಯಕರಾದ ಹಾರ್ದಿಕ್ ಪಟೇಲ್ ಮತ್ತು ಅಲ್ಪೇಶ್ ಠಾಕೋರ್ ಸೇರಿದ್ದಾರೆ. ಕಾಂಗ್ರೆಸ್ ನಾಯಕರಾದ ಸುಖರಾಮ್ ರಥಾವ ಮತ್ತು ಜಿಗ್ನೇಶ್ ಮಾವಾನಿ ಕಣದಲ್ಲಿದ್ದಾರೆ. ಎಎಪಿ ನಾಯಕರಾದ ಭರತ್ ಸಿಂಗ್ ವಖಾಲಾ ಮತ್ತು ಭೇಮಾ ಭಾಯಿ ಚೌಧರಿ ಅವರು ಸ್ಪರ್ಧೆಯಲ್ಲಿದ್ದಾರೆ.

2ನೇ ಹಂತದ ಚುನಾವಣೆಯ ವೇಳಾಪಟ್ಟಿ
ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಿದ ದಿನಾಂಕ: ನವೆಂಬರ್ 10
ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 17
ನಾಮಪತ್ರ ಪರಿಶೀಲನೆಯ ದಿನಾಂಕ: ನವೆಂಬರ್ 18
ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನಾಂಕ: ನವೆಂಬರ್ 21
ಮತದಾನದ ದಿನಾಂಕ: ಡಿಸೆಂಬರ್ 5
ಎಣಿಕೆಯ ದಿನಾಂಕ: ಡಿಸೆಂಬರ್ 8
ಚುನಾವಣೆಯನ್ನು ಪೂರ್ಣಗೊಳಿಸುವ ಮೊದಲು ದಿನಾಂಕ - ಡಿಸೆಂಬರ್ 10

2ನೇ ಹಂತದ ಚುನಾವಣೆಯ ಜಿಲ್ಲಾವಾರು ಕ್ಷೇತ್ರಗಳ ಪಟ್ಟಿ
ಬನಾಸಕಾಂಠಾ ಜಿಲ್ಲೆ
ವಾವ
ತರಡ್
ಧನೇರ
ದಂತ (ಎಸ್‌ಟಿ)
ವಡ್ಗಮ್ (ಎಸ್‌ಇ)
ಪಾಲನಪುರ
ದೀಸಾ
ದೇವದರ್
ಕಾಂಕ್ರೇಜ್
ಪಟಾನ್
ರಾಧನ್‌ಪುರ
ಚನಾಸ್ಮಾ
ಪಟಾನ್
ಸಿಧ್ಪುರ್
ಮೆಹ್ಸಾಣಾ
ಖೇರಾಲು
ಉಂಜಾ
ವಿಸ್ನಗರ
ಬೇಚರಜಿ
ಕಡಿ (ಎಸ್‌ಇ)
ಮೆಹ್ಸಾಣಾ
ವಿಜಾಪುರ
ಸಬರ್ ಕಾಂತ
ಹಿಮತ್ನಗರ
ಇದಾರ್ (ಎಸ್‌ಇ)
ಖೇಡಬ್ರಹ್ಮ (ಎಸ್‌ಟಿ)
ಪ್ರಂತಿಜ್
ಅರಾವಳಿ
ಭಿಲೋಡಾ (ಎಸ್‌ಟಿ)
ಮೋದಸ ಅರಾವಳಿ
ಬಯಾದ್
ಗಾಂಧಿನಗರ
ದಹೆಗಂ
ಗಾಂಧಿನಗರ ದಕ್ಷಿಣ
ಗಾಂಧಿನಗರ ಉತ್ತರ
ಮಾನಸ
ಕಲೋಲ್
ಅಹಮದಾಬಾದ್
ವಿರಾಮಗಮ್
ಸನಂದ್
ಘಟ್ಲೋಡಿಯಾ
ವೇಜಲ್ಪುರ್
ವತ್ವಾ
ಎಲ್ಲಿಸ್‌ಬ್ರಿಡ್ಜ್
ನಾರಣಪುರ
ನಿಕೋಲ್
ನರೋಡಾ
ಥಕ್ಕರ್ಬಾಪಾ ನಗರ
ಬಾಪುನಗರ
ಅಮರೈವಾಡಿ
ದರಿಯಾಪುರ
ಜಮಾಲ್ಪುರ್-ಖಾಡಿಯಾ
ಮಣಿನಗರ
ಡ್ಯಾನಿಲಿಮ್ಡಾ (ಎಸ್‌ಇ)
ಸಬರಮತಿ
ಅಸರ್ವಾ (ಎಸ್‌ಇ)
ದಸ್ಕ್ರೋಯ್
ಧೋಲ್ಕಾ
ಧಂಧೂಕಾ
ಆನಂದ್
ಖಂಭಟ್
ಬೋರ್ಸಾದ್
ಅಂಕಲಾವ್
ಉಮ್ರೆತ್
ಆನಂದ್
ಪೆಟ್ಲಾಡ್
ಸೋಜಿತ್ರಾ
ಖೇಡಾ
ಮತರ್
ನಾಡಿಯಾಡ್
ಮೆಹಮದಾಬಾದ್
ಮಹುಧ
ಥಸ್ರಾ
ಕಪದ್ವಂಜ್
ಮಹಿಸಾಗರ್
ಬಾಲಸಿನೋರ್
ಲುನವಾಡ
ಸಂತ್ರಂಪುರ (ಎಸ್‌ಟಿ)
ಪಂಚಮಹಾಲ್
ಶೆಹ್ರಾ
ಮೊರ್ವಾ ಹದಾಫ್ (ಎಸ್‌ಟಿ)
ಗೋಧ್ರಾ
ಕಲೋಲ್
ಹಲೋಲ್
ದಾಹೋದ್
ಫತೇಪುರ (ಎಸ್‌ಟಿ)
ಝಲೋದ್ (ಎಸ್‌ಟಿ)
ಲಿಮ್ಖೇಡಾ (ಎಸ್‌ಟಿ)
ದಾಹೋದ್ (ಎಸ್‌ಟಿ)
ಗರ್ಬಡಾ (ಎಸ್‌ಟಿ)
ದೇವಗಧಬರಿಯಾ
ವಡೋದರಾ
ಸಾವ್ಲಿ
ವಘೋಡಿಯಾ
ದಭೋಯ್
ವಡೋದರಾ ನಗರ (ಎಸ್‌ಇ)
ಸಯಾಜಿಗುಂಜ್
ಅಕೋಟಾ
ರಾವ್ಪುರ
ಮಂಜಲ್ಪುರ್
ಪದ್ರಾ
ಕರ್ಜನ್
ಛೋಟಾ ಉದೇಪುರ್
ಛೋಟಾ ಉದೇಪುರ್(ಎಸ್‌ಟಿ)
ಜೆಟ್ಪುರ್ (ಎಸ್‌ಟಿ)
ಸಂಖೇಡಾ (ಎಸ್‌ಟಿ)