ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಚುನಾವಣೆ 2022: 39 ಅಭ್ಯರ್ಥಿಗಳ 5 ಹಾಗೂ 6ನೇ ಪಟ್ಟಿ ಘೋಷಿಸಿದ ಕಾಂಗ್ರೆಸ್

|
Google Oneindia Kannada News

ಅಹಮದಾಬಾದ್‌, ನವೆಂಬರ್‌ 14: ಗುಜರಾತ್‌ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ 5 ಹಾಗೂ 6ನೇ ಪಟ್ಟಿ ಬಿಡುಗಡೆ ಮಾಡಿದೆ. ಗುಜರಾತ್ ವಿಧಾನಸಭಾ ಚುನಾವಣೆಗೆ 39 ಅಭ್ಯರ್ಥಿಗಳ ಒಟ್ಟಿಗೆ ಎರಡು ಪಟ್ಟಿಯನ್ನು ಕಾಂಗ್ರೆಸ್ ಭಾನುವಾರ ಬಿಡುಗಡೆ ಮಾಡಿದ್ದು, ವಡ್ಗಾಮ್ ಕ್ಷೇತ್ರದಿಂದ ಜಿಗ್ನೇಶ್ ಮೇವಾನಿ ಅವರನ್ನು ಕಣಕ್ಕಿಳಿಸಿದೆ.

ಬೊಟಾಡ್‌ ಕ್ಷೇತ್ರದಿಂದ ಈ ಬಾರಿ ರಮೇಶ್ ಮೇರ್ ಬದಲಿಗೆ ಮನಹರ್ ಪಟೇಲ್ ಕಣಕ್ಕಿಳಿಸುವುದು ಸೇರಿದಂತೆ ಆರು ಅಭ್ಯರ್ಥಿಗಳೊಂದಿಗೆ ಪಕ್ಷವು ತನ್ನ ಐದನೇ ಪಟ್ಟಿಯನ್ನು ಮೊದಲು ಬಿಡುಗಡೆ ಮಾಡಿತು. ಬಳಿಕ ಕಾಂಗ್ರೆಸ್‌ 33 ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿತು. ಇದುವರೆಗೆ ಘೋಷಿಸಲಾದ ಒಟ್ಟು ಕಾಂಗ್ರೆಸ್‌ ಅಭ್ಯರ್ಥಿಗಳ ಸಂಖ್ಯೆಯನ್ನು 142 ಆಗಿದೆ.

ಭಾರೀ ವಿವಾದಕ್ಕೆ ಕಾರಣವಾಗಿರುವ ಈ ಬಿಜೆಪಿ ಅಭ್ಯರ್ಥಿ ಪಾಯಲ್ ಕುಕ್ರಾಣಿ ಯಾರು?ಭಾರೀ ವಿವಾದಕ್ಕೆ ಕಾರಣವಾಗಿರುವ ಈ ಬಿಜೆಪಿ ಅಭ್ಯರ್ಥಿ ಪಾಯಲ್ ಕುಕ್ರಾಣಿ ಯಾರು?

ಐದನೇ ಪಟ್ಟಿಯಲ್ಲಿ ಹೆಸರಿಸಲಾದ ಅಭ್ಯರ್ಥಿಗಳೆಂದರೆ ಮೊರ್ಬಿಯಿಂದ ಜಯಂತಿ ಜೆರಾಜ್‌ಭಾಯ್ ಪಟೇಲ್, ಜಾಮ್‌ನಗರ ಗ್ರಾಮಾಂತರದಿಂದ ಜೀವನ್ ಕುಂಭರ್ವಾಡಿಯಾ, ಧ್ರಂಗಾಧ್ರದಿಂದ ಛತ್ತರಸಿಂಹ ಗುಂಜಾರಿಯಾ, ರಾಜ್‌ಕೋಟ್ ಪಶ್ಚಿಮದಿಂದ ಮನ್‌ಸುಖ್‌ಭಾಯ್ ಕಲಾರಿಯಾ ಮತ್ತು ಗರಿಯಾಧರ್‌ನಿಂದ ದಿವ್ಯೇಶ್ ಚಾವ್ಡಾ ಆಗಿದ್ದಾರೆ.

Gujarat Election 2022: Congress announces list of 39 candidates

33 ಅಭ್ಯರ್ಥಿಗಳ ಆರನೇ ಪಟ್ಟಿಯಲ್ಲಿ, ವಡ್ಗಾಮ್ (ಎಸ್‌ಸಿ) ಕ್ಷೇತ್ರದಿಂದ ಮೇವಾನಿ, ಮಾನ್ಸಾದಿಂದ ಠಾಕೋರ್ ಮೋಹನ್‌ಸಿನ್, ಕಲೋಲ್‌ನಿಂದ ಬಲ್ದೇವ್‌ಜಿ ಠಾಕೋರ್, ಜಮಾಲ್‌ಪುರ್ ಖಾಡಿಯಾದಿಂದ ಇಮ್ರಾನ್ ಖೆಡಾವಾಲಾ, ಅಂಕಲಾವ್‌ನಿಂದ ಅಮಿತ್ ಚಾವ್ಡಾ ಮತ್ತು ದಾಭೋಯ್‌ನಿಂದ ಬಾಲ್ ಕಿಶನ್ ಪಟೇಲ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಗುಜರಾತ್ ಚುನಾವಣೆ: ಕಾಂಗ್ರೆಸ್‌ನಿಂದ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆಗುಜರಾತ್ ಚುನಾವಣೆ: ಕಾಂಗ್ರೆಸ್‌ನಿಂದ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ

ನವೆಂಬರ್ 4 ರಂದು ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಚುನಾವಣೆಗೆ 43 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿತ್ತು. ನವೆಂಬರ್ 10 ರಂದು, ಪಕ್ಷವು 46 ಹೆಸರುಗಳ ಮತ್ತೊಂದು ಪಟ್ಟಿಯನ್ನು ಹೊರತಂದಿತು. ಅಲ್ಲದೆ ಶುಕ್ರವಾರ ಏಳು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಮೊದಲು ಘೋಷಿಸಿದ ಅಭ್ಯರ್ಥಿಯ ಬದಲಿಗೆ ಬರೀ ಒಬ್ಬರ ಹೆಸರು ಅದರಲ್ಲಿ ಇತ್ತು. ನಂತರ ಒಂಬತ್ತು ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಲಾಗಿದೆ.

Gujarat Election 2022: Congress announces list of 39 candidates

ಎರಡು ಹಂತಗಳಲ್ಲಿ ಚುನಾವಣೆ
ಎರಡು ದಶಕಗಳಿಗೂ ಹೆಚ್ಚು ಕಾಲ ಬಿಜೆಪಿ ಪಕ್ಷ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಕಾಂಗ್ರೆಸ್ ಹವಣಿಸುತ್ತಿದೆ. 182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.

ದಲಿತ ನಾಯಕ ಜಿಗ್ನೇಶ್ ಮೇವಾನಿ ಅವರು ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ವಡ್ಗಾಮ್ ಕ್ಷೇತ್ರದಿಂದ 2017 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರು. ಕಾಂಗ್ರೆಸ್ ತನ್ನ ಐದನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಮೇಶ್ ಮೇರ್ ಬದಲಿಗೆ ಬೊಟಾಡ್‌ನಿಂದ ಮನ್ಹರ್ ಪಟೇಲ್ ಸೇರಿದಂತೆ ಆರು ಅಭ್ಯರ್ಥಿಗಳು ಸೇರಿದ್ದಾರೆ.

English summary
Congress has released the 5th and 6th list of candidates in the wake of the Gujarat assembly elections. The Congress on Sunday released two lists of 39 candidates for the Gujarat assembly elections, fielding Jignesh Mevani from the Vadgam constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X