• search

ಗುಜರಾತ್ ಚುನಾವಣೆ ಅಪ್ಡೇಟ್: ಬಿಜೆಪಿ ಟಿಕೆಟಿಗೆ ಮುಸ್ಲಿಮರ ಭಾರೀ ಪೈಪೋಟಿ

Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಗುಜರಾತ್ ಚುನಾವಣೆ 2017 : ಬಿಜೆಪಿ ಟಿಕೆಟ್ ಗಾಗಿ ಮುಸ್ಲಿಮರ ಪೈಪೋಟಿ | Oneindia Kannada

    ಚುನಾವಣಾ ಹೊಸ್ತಿಲಲ್ಲಿರುವ ಗುಜರಾತ್ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ಟಿಕೆಟ್ ಗಿಟ್ಟಿಸಲು ಮುಸ್ಲಿಂ ಸಮುದಾಯದಿಂದ ಭಾರೀ ಡಿಮಾಂಡ್ ವ್ಯಕ್ತವಾಗುತ್ತಿದೆ. ಕಳೆದ ಚುನಾವಣೆಗಿಂತಲೂ ಈ ಬಾರಿ ಅತಿಹೆಹ್ಚು ಮುಸ್ಲಿಮರು ಟಿಕೆಟಿಗಾಗಿ ಬಿಜೆಪಿ ಬಾಗಿಲು ಬಡಿಯುತ್ತಿದ್ದಾರೆ.

    2011ರಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ನಡೆಸಿದ್ದ ಸದ್ಭಾವನಾ ಯಾತ್ರೆಯ ನಂತರ ಬಿಜೆಪಿ ಟಿಕೆಟಿಗೆ ಭಾರೀ ಪೈಪೋಟಿ ವ್ಯಕ್ತವಾಗಿತ್ತು. ಆದರೆ, ನಿರೀಕ್ಷಿಸಿದಷ್ಟು ಮಟ್ಟಕ್ಕೆ ಮುಸ್ಲಿಮರಿಗೆ ಬಿಜೆಪಿ ಟಿಕೆಟ್ ನೀಡಿರಲಿಲ್ಲ.

    ರಾಹುಲ್ ಗಾಂಧಿ-ಜಿಗ್ನೇಶ್ ಮೇವಾನಿ ಭೇಟಿ

    ಸದ್ಭಾವನೆ ಎನ್ನುವುದನ್ನು ಕಾರ್ಯರೂಪಕ್ಕೂ ತನ್ನಿ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ, ಮುಸ್ಲಿಂ ಪ್ರಾಭಲ್ಯವಿರುವ ಗುಜರಾತಿನ ಅಸೆಂಬ್ಲಿ ಕ್ಷೇತ್ರಗಳಲ್ಲಿ ಮುಸ್ಲಿಮರಿಗೇ ಟಿಕೆಟ್ ನೀಡಬೇಕೆಂದು ಬಿಜೆಪಿ ಸಂಸದೀಯ ಮಂಡಳಿಯನ್ನು ಒತ್ತಾಯಿಸುತ್ತಿದೆ.

    2015ರಲ್ಲಿ ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ 350ಕ್ಕೂ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳು ಬಿಜೆಪಿ ಟಿಕೆಟಿನಿಂದ ಗೆಲುವು ಸಾಧಿಸಿದ್ದರು. ಜಮ್ಲಾಪುರ, ಖಾಡಿಯಾ, ವೇಜಾಲ್ಪುರ, ವಾಗ್ರಾ, ಭುಜ್ ಮುಂತಾದ ಮುಸ್ಲಿಮರು ಹೆಚ್ಚಿರುವ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗೇ ಮನ್ನಣೆ ನೀಡಬೇಕೆಂದು ಅಲ್ಪಸಂಖ್ಯಾತ ಮೋರ್ಚಾ ಪಟ್ಟು ಹಿಡಿದಿದೆ ಎಂದು ಟೈಮ್ಸ್ ಆಪ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.

    ಗುಜರಾತಿನ ದಲಿತ ಸಮುದಾಯದ ಮುಖಂಡ ಜಿಗ್ನೇಶ್ ಮೇವಾನಿ, ನವಸರ್ಜನ್ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ತಮ್ಮ 17 ಬೇಡಿಕೆಗಳ ಪಟ್ಟಿ ನೀಡಿದ್ದಾರೆ. ಇವುಗಳಲ್ಲಿ ಶೇಕಡಾ 90ರಷ್ಟು ಬೇಡಿಕೆಗಳಿಗೆ ಕಾಂಗ್ರೆಸ್ ಉಪಾಧ್ಯಕ್ಷರು ಒಪ್ಪಿಕೊಂಡಿದ್ದಾರೆಂದು ಜಿಗ್ನೇಶ್ ಹೇಳಿದ್ದು, ಮುಂದಿನ ಚುನಾವಣೆಯಲ್ಲಿ ಜಿಗ್ನೇಶ್ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಮುಂದೆ ಓದಿ..

    ಹಲವು ಕಾಂಗ್ರೆಸ್ ಮುಖಂಡರು ಪಕ್ಷ ತೊರೆಯುವ ಸಾಧ್ಯತೆ

    ಹಲವು ಕಾಂಗ್ರೆಸ್ ಮುಖಂಡರು ಪಕ್ಷ ತೊರೆಯುವ ಸಾಧ್ಯತೆ

    ಹಾರ್ಥಿಕ್ ಪಟೇಲ್ ಮತ್ತು ಜಿಗ್ನೇಶ್ ಮೆವಾನಿಯವರನ್ನು ಕಾಂಗ್ರೆಸ್ಸಿಗೆ ಸೇರಿಸಲು ರಾಹುಲ್ ಗಾಂಧಿ ಉತ್ಸುಕರಾಗಿದ್ದಾರೆಯೇ ಹೊರತು, ಬೇರುಮಟ್ಟದಲ್ಲಿ ಕೆಲಸ ಮಾಡುವ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ರಾಹುಲ್ ಗಾಂಧಿಯವರಿಗೆ ಬೇಕಾಗಿಲ್ಲ ಎಂದು ಬೇಸರಿಸಿಕೊಂಡಿರುವ ಇನ್ನಷ್ಟು ಕಾಂಗ್ರೆಸ್ ಮುಖಂಡರು ಪಕ್ಷ ತೊರೆಯುವ ಸಾಧ್ಯತೆಯಿದೆ ಎಂದು ಕೇಳಿಬರುತ್ತಿದೆ.

    ಚುನಾವಣೆ ಮತ್ತೆ ಗೆಲ್ಲಲು 'ಮಿಷನ್ 150' ಯೋಜನೆ

    ಚುನಾವಣೆ ಮತ್ತೆ ಗೆಲ್ಲಲು 'ಮಿಷನ್ 150' ಯೋಜನೆ

    ಕಳೆದ 22ವರ್ಷದಿಂದ ಅಧಿಕಾರದಲ್ಲಿರುವ ಬಿಜೆಪಿ, ಮತ್ತೆ ಈ ಚುನಾವಣೆಯನ್ನು ಗೆಲ್ಲಲು 'ಮಿಷನ್ 150' ಯೋಜನೆ ಹಾಕಿಕೊಂಡಿದೆ. ಮೋದಿ ಗುಜರಾತ್ ಸಿಎಂ ಆಗಿದ್ದಾಗ 120 ಸೀಟ್ ಗೆದ್ದಿದ್ದೆವು, ಈಗ ಮೋದಿ ಪ್ರಧಾನಿಯಾಗಿದ್ದಾರೆ. ಹಾಗಾಗಿ ನಮ್ಮ ಗುರಿ 150 ಎಂದು ಅಮಿತ್ ಶಾ ಹೇಳಿದ್ದಾರೆ. ಗುಜರಾತ್ ಅಸೆಂಬ್ಲಿಯ ಒಟ್ಟು ಸ್ಥಾನಗಳು 182.

    ಹೆಚ್ಚುತ್ತಿರುವ ಕಾಂಗ್ರೆಸ್ ಜನಪ್ರಿಯತೆ

    ಹೆಚ್ಚುತ್ತಿರುವ ಕಾಂಗ್ರೆಸ್ ಜನಪ್ರಿಯತೆ

    ಸತತವಾಗಿ ಗುಜರಾತ್ ನಲ್ಲಿ ಕಾಂಗ್ರೆಸ್ ಚುನಾವಣೆ ಸೋಲುತ್ತಿದ್ದರೂ, ಕಳೆದ ಬಾರಿಗೆ ಹೋಲಿಸಿದರೆ ಕಾಂಗ್ರೆಸ್ ಜನಪ್ರಿಯತೆ ಹೆಚ್ಚುತ್ತಿದೆ. ಆಡಳಿತ ವಿರೋಧಿ ಅಲೆ, ಜಿಎಸ್ಟಿ, ಅಪನಗದೀಕರಣ ಮುಂತಾದ ವಿಷಯಗಳು ಕಾಂಗ್ರೆಸ್ಸಿಗೆ ಲಾಭ ತಂದುಕೊಟ್ಟರೂ ಕೊಡಬಹುದು. ಆದರೆ ಇತ್ತೀಚಿನ ಚುನಾವಣಾಪೂರ್ವ ಸರ್ವೇಗಳು ಬಿಜೆಪಿ ಪರವಾಗಿಯೇ ಹೊರಬಿದ್ದಿದೆ.

    ಬಿಜೆಪಿ ಟಿಕೆಟಿಗಾಗಿ ಭಾರೀ ಪೈಪೋಟಿ

    ಬಿಜೆಪಿ ಟಿಕೆಟಿಗಾಗಿ ಭಾರೀ ಪೈಪೋಟಿ

    ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಮುಸ್ಲಿಂ ಸಮುದಾಯದವರು ಬಿಜೆಪಿ ಟಿಕೆಟಿಗಾಗಿ ಪೈಪೋಟಿ ನಡೆಸುತ್ತಿರುವುದರಿಂದ, ಪ್ರಮುಖವಾಗಿ ಮುಸ್ಲಿಂ ಪ್ರಾಭಲ್ಯವಿರುವ ಕ್ಷೇತ್ರಗಳಲ್ಲಿ ಬಿಜೆಪಿ ಮುಸ್ಲಿಮರಿಗೆ ಮಣೆಹಾಕುತ್ತೋ ಎಂದು ಕಾದುನೋಡಬೇಕಿದೆ.

    ಪಾಂಡವ ಮತ್ತು ಕೌರವರ ಉದಾಹರಣೆ ನೀಡಿದ ರಾಹುಲ್

    ಪಾಂಡವ ಮತ್ತು ಕೌರವರ ಉದಾಹರಣೆ ನೀಡಿದ ರಾಹುಲ್

    ಗುಜರಾತ್ ನಲ್ಲಿ ಚುನಾವಣಾ ಪ್ರಚಾರದಲ್ಲಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಶನಿವಾರ (ನ 4) ನಾನಾ ಪೊಂದಾ ನಗರದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ನಮ್ಮ ಮತ್ತು ಬಿಜೆಪಿ ನಡುವೆ ನಡೆಯುತ್ತಿರುವುದು ಸತ್ಯ ಮತ್ತು ಸುಳ್ಳಿನ ನಡುವಿನ ಹೋರಾಟ ಎನ್ನುತ್ತಾ ಪಾಂಡವ ಮತ್ತು ಕೌರವರ ಉದಾಹರಣೆಯನ್ನು ನೀಡಿದ್ದಾರೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Gujarat assembly poll 2017, Muslims queue up for BJP tickets. BJP Minority Morcha has demanded several seats in the upcoming elections. Muslims leaders are seeking some "real sadbhavna" and hoping that BJP will field minority candidates for making greater inroads into the community.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more