• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಚುನಾವಣೆ: ಬಿಜೆಪಿಯಿಂದ ರವೀಂದ್ರ ಜಡೇಜಾ ಪತ್ನಿ, ಹಾರ್ದಿಕ್ ಪಟೇಲ್ ಕಣಕ್ಕೆ

|
Google Oneindia Kannada News

ಅಹಮದಾಬಾದ್, ನ.10 : ಗುಜರಾತ್ ಚುನಾವಣೆಗೆ ಬಿಜೆಪಿ ಗುರುವಾರ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. 182 ವಿಧಾನಸಭಾ ಸ್ಥಾನಗಳಲ್ಲಿ 160 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.

2019 ರಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರನ್ನು ಗುಜರಾತ್ ವಿಧಾನಸಭಾ ಚುನಾವಣೆಗೆ ಜಾಮ್‌ನಗರ ಉತ್ತರ ಅಭ್ಯರ್ಥಿಯಾಗಿ ಬಿಜೆಪಿ ಕಣಕ್ಕಿಳಿಸಿದೆ. ಅದರ ಪ್ರಸ್ತುತ ಶಾಸಕ ಧರ್ಮೇಂದ್ರ ಸಿಂಗ್ ಎಂ ಜಡೇಜಾ ಅವರನ್ನು ಅಭ್ಯರ್ಥಿಗಳ ಪಟ್ಟಿಯಿಂದ ಕೈಬಿಡಲಾಗಿದೆ.

ಗುಜರಾತ್ ಚುನಾವಣೆ: ಇಂದು ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಸಾಧ್ಯತೆ ಗುಜರಾತ್ ಚುನಾವಣೆ: ಇಂದು ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಸಾಧ್ಯತೆ

ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಸೇರ್ಪಡೆಗೊಂಡ ಹಾರ್ದಿಕ್ ಪಟೇಲ್ ಕೂಡ ಗುರುವಾರ ಘೋಷಿಸಲಾಗಿರುವ 160 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿದ್ದಾರೆ.

ಎರಡು ವಾರಗಳ ಹಿಂದೆ ಸೇತುವೆ ಕುಸಿದು 130 ಮಂದಿ ಸಾವಿಗೀಡಾಗಿದ್ದ ಮೋರ್ಬಿಯಿಂದ ಆಡಳಿತ ಪಕ್ಷ ಹಾಲಿ ಶಾಸಕರನ್ನು ಬದಲಿಸಿ, ಸೇತುವೆ ಕುಸಿತದ ವೇಳೆ ಸಂತ್ರಸ್ತರನ್ನು ರಕ್ಷಿಸಲು ನದಿಗೆ ಹಾರಿದ ಮಾಜಿ ಶಾಸಕರಿಗೆ ಟಿಕೆಟ್ ನೀಡಲಾಗಿದೆ.

ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಘಟ್ಲೋಡಿಯಾದಿಂದ ಸ್ಪರ್ಧಿಸಲಿದ್ದಾರೆ.

ಈಗ 27 ವರ್ಷಗಳಿಂದ ಗುಜರಾತ್‌ನಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಕೆಲವು ಹಿರಿಯ ನಾಯಕರನ್ನು ಈ ಬಾರಿ ಕಣಕ್ಕಿಳಿಸಿಲ್ಲ, ಅವರಲ್ಲಿ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿಯಂತಹ ಅನೇಕರು ತಾವಾಗಿಯೇ ಹೊರಗುಳಿಯುವುದಾಗಿ ಈ ಹಿಂದೆ ಘೋಷಿಸಿದ್ದರು.

2019 ರಲ್ಲಿ ಬಿಜೆಪಿಗೆ ಸೇರಿದ ರಿವಾಬಾ ಜಡೇಜಾ ಅವರು ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದಾರೆ. ಕಾಂಗ್ರೆಸ್ ಹಿರಿಯ ಹರಿ ಸಿಂಗ್ ಸೋಲಂಕಿ ಅವರ ಸಂಬಂಧಿಕರಾಗಿದ್ದಾರೆ. ಅವರು 2016 ರಲ್ಲಿ ಕ್ರಿಕೆಟಿಗ ರವೀಂದ್ರ ಜಡೇಜಾ ಅವರನ್ನು ವಿವಾಹವಾಗಿದ್ದಾರೆ.

Gujarat Assembly Elections 2022: Hardik Patel, Ravindra Jadejas Wife BJP Candidates

2017 ರ ಚುನಾವಣೆಯಲ್ಲಿ ಸ್ಪರ್ಧಿಸಿದ ಏಳು ಮಂದಿ ಮಾಜಿ ಕಾಂಗ್ರೆಸ್ ನಾಯಕರಿಗೆ ಟಿಕೆಟ್ ನೀಡಲಾಗಿದೆ. ಅವರಲ್ಲಿ ಪ್ರದ್ಯುಮಾನ್ ಜಡೇಜಾ ಮತ್ತು ಅಶ್ವಿನ್ ಕೊತ್ವಾಲ್ ಮತ್ತು 25 ವರ್ಷವಾಗಿರದ ಕಾರಣ ಚುನಾವಣೆಗೆ ಸ್ಪರ್ಧಿಸದಿದ್ದ ಗುಜರಾತ್ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರಾಗಿದ್ದ ಹಾರ್ದಿಕ್ ಪಟೇಲ್‌ಗೂ ಟಿಕೆಟ್ ನೀಡಲಾಗಿದೆ.

ಗುಜರಾತ್‌ನಲ್ಲಿ ಡಿಸೆಂಬರ್ 1 ರಂದು ಮೊದಲ ಹಂತದ ಮತದಾನದಲ್ಲಿ 89 ಸ್ಥಾನಗಳಿಗೆ ಚನಾವಣೆ ನಡೆಯಲಿದೆ. 182 ಸ್ಥಾನಗಳಲ್ಲಿ ಉಳಿದ 93 ಸ್ಥಾನಗಳಿಗೆ ಎರಡನೇ ಹಂತದಲ್ಲಿ ಡಿಸೆಂಬರ್ 5 ರಂದು ಮತದಾನ ನಡೆಯಲಿದೆ.

ನವೆಂಬರ್ 9 ರಂದು ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ ಅವರ ಅಧ್ಯಕ್ಷತೆಯಲ್ಲಿ ಪಕ್ಷದ ಚುನಾವಣಾ ಸಮಿತಿ ಸಭೆ ನಡೆಸಿದ ನಂತರ ಬೆಳಗ್ಗೆ ಬಿಜೆಪಿ ಪಟ್ಟಿ ಘೋಷಣೆಯಾಗಿದೆ. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವರು ಭಾಗವಹಿಸಿದ್ದರು.

English summary
Gujarat assembly elections 2022: cricketer Ravindra Jadeja's wife, Hardik Patel are in Bharatiya Janata Party's first list of candidates for the elections. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X