TV9 ಸಿ-ವೋಟರ್ಸ್ ಸಮೀಕ್ಷೆ: ಗುಜರಾತ್ ಮತ್ತೆ ಬಿಜೆಪಿ ತೆಕ್ಕೆಗೆ
Recommended Video

ಅಹಮದಾಬಾದ್, ಡಿಸೆಂಬರ್ 14 : ಇಡೀ ದೇಶವೇ ಎದುರು ನೋಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ವಿಧಾನಸಭೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಗುರುವಾರ ಹೊರ ಬಿದ್ದಿದೆ.
ಗುಜರಾತಿನ ಸ್ಥಳೀಯ ಪ್ರಮುಖ ಸುದ್ದಿ ವಾಹಿನಿ ಟಿವಿ9 ಸಿ-ವೋಟರ್ ನಡೆಸಿದ ಸಮೀಕ್ಷೆಯ ಹೊರ ಬಂದಿದ್ದು, 182 ಸ್ಥಾನಗಳ ಪೈಕಿ ಬಿಜೆಪಿ 108, ಕಾಂಗ್ರೆಸ್ 74, ಇತರೆ 0 ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ಟಿವಿ9 ಸಿ-ವೋಟರ್ ನೀಡಿದ ಸಮೀಕ್ಷೆಯಂತೆ ಪ್ರಸ್ತುತ ಅಧಿಕಾರದಲ್ಲಿರುವ ಬಿಜೆಪಿ ಈ ಬಾರಿಯೂ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲಿದೆ.

ಗುಜರಾತ್ ನಲ್ಲಿ ಸರ್ಕಾರ ರಚನೆ ಮಾಡಲು 92 ಮ್ಯಾಜಿಕ್ ನಂಬರ್ ಗಿಂತ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಪಾಟೀದಾರ್ ಸಮುದಾಯದ ಪ್ರಭಾವಿ ಯುವ ನಾಯಕ ಹಾರ್ದಿಕ್ ಪಟೇಲ್ ಅವರ ಬೆಂಬಲವನ್ನು ಪಡೆದುಕೊಂಡು ಕಾಂಗ್ರೆಸ್ ಈ ಬಾರಿಯ ಗುಜರಾತ್ ಚುನಾವಣೆ ಅಖಾಡಕ್ಕೆ ಇಳಿದಿತ್ತು. ಆದರೆ, ಕಾಂಗ್ರೆಸ್ ನ ಲೆಕ್ಕಾಚಾರಗಳೆಲ್ಲ ಉಲ್ಟಾ ಹೊಡೆದಿವೆ.
ಡಿಸೆಂಬರ್ 18ರಂದು ಮತದಾನ ಎಣಿಕೆ ಬಿಳಿಕ ಸಮೀಕ್ಷೆಯ ಸತ್ಯಾಸತ್ಯತೆ ತಿಳಿಯಲಿದೆ.












Click it and Unblock the Notifications