ಗುಜರಾತ್ Exit Poll: ಟೈಮ್ಸ್ ನೌ VMR ಫಲಿತಾಂಶದಂತೆ ಬಿಜೆಪಿಗೆ ಜಯ
Recommended Video

ಬೆಂಗಳೂರು, ಡಿಸೆಂಬರ್ 14: ಚುನಾವಣೋತ್ತರ ಸಮೀಕ್ಷೆಗಳ ಅಬ್ಬರ ಇದೀಗ ಆರಂಭವಾಗಿದೆ. ಟೈಮ್ಸ್ ನೌ ವಿಎಂಆರ್ ನೀಡಿರುವ ಗುಜರಾತಿನ ವಿಧಾನಸಭಾ ಚುನಾವಣೆ ಎಕ್ಸಿಟ್ ಪೋಲ್ ವರದಿ ಹೀಗಿದೆ.
ಟೈಮ್ಸ್ ನೌ ವರದಿಯಂತೆ ಬಿಜೆಪಿ ಮ್ಯಾಜಿಕ್ ನಂಬರ್ ದಾಟಲಿದ್ದು, ಸತತ ಐದನೇ ಬಾರಿಗೆ ಅಧಿಕಾರ ಸ್ಥಾಪಿಸಲಿದೆ.

ಟೈಮ್ಸ್ ನೌ ವಿಎಂಆರ್ : ಇಲ್ಲಿರುವುದು ಪ್ರೋಜೆಕ್ಷನ್ ವರದಿ ಅಂತಿಮ ಫಲಿತಾಂಶ +/- 3-6 ಸ್ಥಾನ ಬದಲಾಗಲಿದೆ.
ಚುನಾವಣೋತ್ತರ ಸಮೀಕ್ಷೆ: (ಡಿಸೆಂಬರ್ 14ರಂತೆ)
ಬಿಜೆಪಿ : 109
ಕಾಂಗ್ರೆಸ್: 70
ಇತರೆ: 3
ಚುನಾವಣಾ ಪೂರ್ವ ಸಮೀಕ್ಷೆ:
ಬಿಜೆಪಿ : 111
ಕಾಂಗ್ರೆಸ್: 68
ಇತರೆ: 3
ಸಮೀಕ್ಷೆಗಳ ಸಂಗ್ರಹಗಳ ಸರಾಸರಿಯಂತೆ 182 ವಿಧಾನಸಭಾ ಸ್ಥಾನಗಳ ಪೈಕಿ ಬಿಜೆಪಿ 105-106 ಸ್ಥಾನಗಳನ್ನು ಗಳಿಸಲಿದ್ದು, ಮ್ಯಾಜಿಕ್ ನಂಬರ್ 92 ದಾಟುವ ಮೂಲಕ ಅಧಿಕಾರ ಸ್ಥಾಪಿಸುವ ಅವಕಾಶ ಪಡೆಯಲಿದೆ. ಕಾಂಗ್ರೆಸ್ 73-74 ಸ್ಥಾನ ಗಳಿಸಿ ವಿರೋಧ ಪಕ್ಷವಾಗಿ ಉಳಿಯಲಿದೆ ಎಂದು ಹೇಳಲಾಗಿತ್ತು.
2012ರಲ್ಲಿ ಬಿಜೆಪಿ 116 ಹಾಗೂ ಕಾಂಗ್ರೆಸ್ 60 ಸ್ಥಾನ ಗಳಿಸಿತ್ತು. ಕಳೆದ 22 ವರ್ಷಗಳಿಂದ ಕೇಸರಿ ಪಕ್ಷ ಅಧಿಕಾರ ಕಳೆದುಕೊಂಡಿಲ್ಲ. ಡಿಸೆಂಬರ್ 9ರಂದು 89 ಸ್ಥಾನಗಳಿಗಾಗಿ ಮೊದಲ ಹಂತದ ಮತದಾನ, ಡಿಸೆಂಬರ್ 14ರಂದು 93 ಸ್ಥಾನಗಳಿಗಾಗಿ ಎರಡನೇ ಹಂತದ ಮತದಾನ ನಡೆಯಿತು. ಡಿಸೆಂಬರ್ 18ರಂದು ಹಿಮಾಚಲ ಪ್ರದೇಶ ಹಾಗೂ ಗುಜರಾತಿನ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications