ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಚುನಾವಣಾ ಫಲಿತಾಂಶ : ಖ್ಯಾತ ಜ್ಯೋತಿಷಿ ನುಡಿದ ಭವಿಷ್ಯ

|
Google Oneindia Kannada News

Recommended Video

ಗುಜರಾತ್ ವಿಧಾನಸಭಾ ಚುನಾವಣೆಯ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ | Oneindia Kannada

ಗುಜರಾತ್ ಅಸೆಂಬ್ಲಿಯ ಮೊದಲ ಹಂತದ ಚುನಾವಣೆಗೆ ಕೇವಲ ಎರಡು ದಿನ ಬಾಕಿ ಉಳಿದಿದೆ. ಡಿಸೆಂಬರ್ 9 ಮತ್ತು 14ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 18ರಂದು ಫಲಿತಾಂಶ ಹೊರ ಬೀಳಲಿದೆ.

ಈ ನಡುವೆ ಓಖ್ಹಿ ಚಂಡಮಾರುತದಂತೆ ವಿವಿಧ ಮಾಧ್ಯಮಗಳ ಚುನಾವಣಾಪೂರ್ವ ಸಮೀಕ್ಷೆಗಳು ಒಂದರ ಮೇಲೊಂದು ಬಡೆದಪ್ಪಳಿಸುತ್ತಿದೆ. ಇದರ ಜೊತೆಗೆ, ಖ್ಯಾತ ಜ್ಯೋತಿಷಿಯೊಬ್ಬರೂ ಗುಜರಾತ್ ಚುನಾವಣಾ ಫಲಿತಾಂಶ ಹೀಗೇ ಹೊರಬೀಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಗುಜರಾತ್: ಟೈಮ್ಸ್ ನೌ-ವಿಎಂಆರ್ ಸಮೀಕ್ಷೆಯಲ್ಲಿ ಬಿಜೆಪಿಗೆ ಭರ್ಜರಿ ಜಯಗುಜರಾತ್: ಟೈಮ್ಸ್ ನೌ-ವಿಎಂಆರ್ ಸಮೀಕ್ಷೆಯಲ್ಲಿ ಬಿಜೆಪಿಗೆ ಭರ್ಜರಿ ಜಯ

ಅಲಹಾಬಾದ್ ಮೂಲದ ಸದ್ಯ ದೆಹಲಿ ನಿವಾಸಿಯಾಗಿರುವ ಅನಿರುದ್ದ ಕುಮಾರ್ ಮಿಶ್ರಾ ಎನ್ನುವ ಜ್ಯೋತಿಷಿಯೊಬ್ಬರು, ಗುಜರಾತ್ ಚುನಾವಣೆಯಲ್ಲಿ ಗೆಲ್ಲೋದು ಬಿಜೆಪಿಯೇ ಅನ್ನುವ ಭವಿಷ್ಯವನ್ನು ನುಡಿದಿದ್ದಾರೆ. ಮಾಧ್ಯಮಗಳ ಸಮೀಕ್ಷೆಗಳು ಬಹುತೇಕ ಇದನ್ನೇ ಹೇಳುತ್ತಿವೆ.

ಸಮೀಕ್ಷೆ : ಕಾಂಗ್ರೆಸ್ ಹಾಕಿದ ಬಲೆಗೆ ಬಿದ್ದ ಹಾರ್ದಿಕ್ ಪಟೇಲ್ಸಮೀಕ್ಷೆ : ಕಾಂಗ್ರೆಸ್ ಹಾಕಿದ ಬಲೆಗೆ ಬಿದ್ದ ಹಾರ್ದಿಕ್ ಪಟೇಲ್

ಯಾರು ಈ ಅನಿರುದ್ದ ಮಿಶ್ರಾ? ಉತ್ತರಪ್ರದೇಶದ ಅಲಹಾಬಾದ್ ನಲ್ಲಿ ಹುಟ್ಟಿ, ವಾರಣಾಸಿ, ರಿಷಿಕೇಶ, ಹರಿದ್ವಾರ ಮುಂತಾದ ಧಾರ್ಮಿಕ ಕ್ಷೇತ್ರಗಳಲ್ಲಿ ವೈದಿಕ ಪಾಂಡಿತ್ಯ, ಜ್ಯೋತಿಷ್ಯ ಶಾಸ್ತ್ರವನ್ನೂ ಕಲಿತಿರುವ ಮಿಶ್ರಾ, ಸದ್ಯ ದೆಹಲಿಯಲ್ಲಿ ವಾಸವಾಗಿದ್ದಾರೆ

ನ್ಯೂಸ್ ನೇಷನ್ ಸಮೀಕ್ಷೆ: ಗುಜರಾತಿನಲ್ಲಿ ಬಿಜೆಪಿಗೆ ಭಾರೀ ಜಯನ್ಯೂಸ್ ನೇಷನ್ ಸಮೀಕ್ಷೆ: ಗುಜರಾತಿನಲ್ಲಿ ಬಿಜೆಪಿಗೆ ಭಾರೀ ಜಯ

ರಾಜಕೀಯ, ಕ್ರೀಡೆ, ನೈಸರ್ಗಿಕ ವಿಕೋಪ, ಭಯೋತ್ಪಾದನೆ, ಷೇರು ಮಾರುಕಟ್ಟೆಯ ಬಗ್ಗೆ ಭವಿಷ್ಯ ನುಡಿಯುವ ಮಿಶ್ರಾ, ಡಿಸೆಂಬರ್ ಆದಿಯಲ್ಲಿ ಪಾಕಿಸ್ತಾನದಲ್ಲಿ ಉಗ್ರರು ಅಟ್ಟಹಾಸ ಮೆರೆಯುತ್ತಾರೆಂದು ನುಡಿದಿದ್ದರು. ಪಾಕ್ ನಲ್ಲಿ ಉಗ್ರ ಚಟುವಟಿಕೆ ಹೊಸದಲ್ಲದಿದ್ದರೂ, ಡಿ. 1ರಂದು ಪೇಷಾವರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹನ್ನೆರಡಕ್ಕೂ ಜನರು ಸಾವನ್ನಪ್ಪಿದ್ದರು. ಗುಜರಾತ್ ಚುನಾವಣೆಯ ಬಗ್ಗೆ ಮಿಶ್ರಾ ನುಡಿದ ಭವಿಷ್ಯ, ಮುಂದಿದೆ..

 ಅನಿರುದ್ದ ಮಿಶ್ರಾ ನುಡಿದ ಭವಿಷ್ಯ

ಅನಿರುದ್ದ ಮಿಶ್ರಾ ನುಡಿದ ಭವಿಷ್ಯ

ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವುದು ನಿಶ್ಚಿತ. ಆದರೆ, ಕಳೆದ ಚುನಾವಣೆಯಲ್ಲಿ ಬಂದಂತಹ ಫಲಿತಾಂಶವನ್ನು ಬಿಜೆಪಿ ನಿರೀಕ್ಷಿಸಲು ಸಾಧ್ಯವಿಲ್ಲ. ಟು, ಥರ್ಡ್ ಮೆಜಾರಿಟಿ ಬಿಜೆಪಿಗೆ ಸಿಗಲಿದೆ. ಕಾಂಗ್ರೆಸ್ಸಿಗೆ ಮತ್ತೆ ನಿರಾಶೆಯಾಗಲಿದೆ - ಅನಿರುದ್ದ ಮಿಶ್ರಾ.

ಇಂಡಿಯಾ ಟಿವಿ ವಿಎಂಆರ್ ಸಮೀಕ್ಷೆ: ಬಿಜೆಪಿಗೆ 106-116 ಸೀಟುಗಳು ಪಕ್ಕಾ!ಇಂಡಿಯಾ ಟಿವಿ ವಿಎಂಆರ್ ಸಮೀಕ್ಷೆ: ಬಿಜೆಪಿಗೆ 106-116 ಸೀಟುಗಳು ಪಕ್ಕಾ!

 ಭಾರತ-ಚೀನಾ ನಡುವಿನ ದೋಕ್ಲಾಂ ಗಡಿ ಭವಿಷ್ಯ

ಭಾರತ-ಚೀನಾ ನಡುವಿನ ದೋಕ್ಲಾಂ ಗಡಿ ಭವಿಷ್ಯ

ಭಾರತ-ಚೀನಾ ನಡುವಿನ ದೋಕ್ಲಾಂ ಗಡಿ ವಿಚಾರದ ಬಗ್ಗೆ ನಾನು ಈ ಹಿಂದೆ ಭವಿಷ್ಯ ನುಡಿದಿದ್ದೆ. ಆಗಸ್ಟ್ 29ರ ನಂತರ ಚೀನಾ ಶಾಂತಿಯುತವಾಗಿ ವರ್ತಿಸಲಿದ್ದು, ಉಭಯ ದೇಶಗಳು ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಿದೆ ಎಂದು ಮಿಶ್ರಾ ಟ್ವೀಟ್ ಮಾಡಿದ್ದರು.

 ಬಿಜೆಪಿಗೆ ಮತ್ತೆ ಅಧಿಕಾರಕ್ಕೆ ಬರುತ್ತೆ ಅಂತಾರೆ ಮಿಶ್ರಾ

ಬಿಜೆಪಿಗೆ ಮತ್ತೆ ಅಧಿಕಾರಕ್ಕೆ ಬರುತ್ತೆ ಅಂತಾರೆ ಮಿಶ್ರಾ

ಗುಜರಾತ್ ಚುನಾವಣೆಯ ಬಗ್ಗೆ ಮಿಶ್ರಾ ನುಡಿದ ಭವಿಷ್ಯದ ಪ್ರಕಾರ, ಬಿಜೆಪಿಗೆ 127-134, ಕಾಂಗ್ರೆಸ್ಸಿಗೆ 40- 45 ಸ್ಥಾನ ಸಿಗಬಹುದು. ಇತರರು 0-5 ಸ್ಥಾನ ಸಂಪಾದಿಸಬಹುದು ಎಂದು ಭವಿಷ್ಯ ನುಡಿದಿದ್ದಾರೆ. 182 ಸ್ಥಾನ ಹೊಂದಿರುವ ಗುಜರಾತ್ ಅಸೆಂಬ್ಲಿಯಲ್ಲಿ ಸರಳ ಬಹುಮತಗಳಿಸಲು ಬೇಕಾಗಿರುವ ಮ್ಯಾಜಿಕ್ ಸಂಖ್ಯೆ 92.

 ಅಮೆರಿಕಾದ ಮೇಲೆ ಉಗ್ರರ ದಾಳಿ

ಅಮೆರಿಕಾದ ಮೇಲೆ ಉಗ್ರರ ದಾಳಿ

ತನ್ನ ಈ ಹಿಂದಿನ ಅಮೆರಿಕಾದ ಮೇಲಿನ ಉಗ್ರರ ದಾಳಿಯ ಬಗ್ಗೆ ಭವಿಷ್ಯ ನುಡಿದಿರುವ ಬಗ್ಗೆ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿರುವ ಮಿಶ್ರಾ, ಡಿಸೆಂಬರ್ 8-9ಕ್ಕೆ ಮತ್ತೊಂದು ಚಂಡಮಾರುತ, ಭಾರತ ಮತ್ತು ಬಾಂಗ್ಲಾದೇಶದ ಮೇಲೆ ಅಪ್ಪಳಿಸಲಿದೆ ಎಂದು ಟ್ವೀಟ್ ಮಾಡಿದ್ದಾರೆ.

 ಅಮೆರಿಕಾದಲ್ಲಿ ಮತ್ತೆ ಭೀಕರ ಚಂಡಮಾರುತ

ಅಮೆರಿಕಾದಲ್ಲಿ ಮತ್ತೆ ಭೀಕರ ಚಂಡಮಾರುತ

2011ರಲ್ಲಿ ಬಹುದೊಡ್ಡ ಶೂಟೌಟ್ ಆಗಲಿದೆ ಎಂದು ಹೇಳಿದ್ದೆ, ವರ್ಷಾಂತ್ಯದಲ್ಲಿ ಅಮೆರಿಕಾದಲ್ಲಿ ಮತ್ತೆ ಭೀಕರ ಚಂಡಮಾರುತ ಬೀಸಲಿದೆ, ಕ್ರಿಕೆಟ್ ಸರಣಿ ಭಾರತ ಗೆಲ್ಲಲಿದೆ, ಹೀಗೆ ಹತ್ತು ಹಲವಾರು ಭವಿಷ್ಯವನ್ನು ನಾನು ಈಗಾಗಲೇ ನುಡಿದಿದ್ದೇನೆಂದು ಮಿಶ್ರಾ, ತನ್ನ ಟ್ವಿಟ್ಟರ್ ಅಕೌಂಟ್ ನಲ್ಲಿ ಹೇಳಿಕೊಂಡಿದ್ದಾರೆ.

English summary
Gujarat assembly elections 2017: Prediction by astrologer hails from Allahabad (UP) Deepak Kumar Mishra. Mishra's prediction says, BJP will retain the power in Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X