ಗುಜರಾತ್ ಸಮೀಕ್ಷೆಗಳ ಸರಾಸರಿ: ಬಿಜೆಪಿ ಸತತ ಐದನೇ ಬಾರಿಗೆ ಅಧಿಕಾರಕ್ಕೆ

ಬೆಂಗಳೂರು, ಡಿಸೆಂಬರ್ 07: ಗುಜರಾತಿನಲ್ಲಿ ಅಬ್ಬರದ ಚುನಾವಣಾ ಪ್ರಚಾರ ಮುಕ್ತಾಯ ಕಂಡಿದೆ. ಮೊದಲ ಹಂತದ ಮತದಾನಕ್ಕೆ ಸಕಲ ಸಿದ್ಧತೆಯಾಗಿದೆ.

ಈ ನಡುವೆ ಚುನಾವಣಾ ಪೂರ್ವ ಸಮೀಕ್ಷೆಗಳು, ಅಭಿಪ್ರಾಯಗಳ ಬಗ್ಗೆ ಚರ್ಚೆ ಮುಂದುವರೆದಿದ್ದು, ಸಮೀಕ್ಷೆಗಳ ಸಂಗ್ರಹ ಇಲ್ಲಿದೆ. ಸಂಗ್ರಹ ವರದಿಯಂತೆ ಬಿಜೆಪಿ ಮ್ಯಾಜಿಕ್ ನಂಬರ್ ದಾಟಲಿದ್ದು,ಸತತ ಐದನೇ ಬಾರಿಗೆ ಅಧಿಕಾರ ಸ್ಥಾಪಿಸಲಿದೆ.

ಸಮೀಕ್ಷೆಗಳ ಸಂಗ್ರಹಗಳ ಸರಾಸರಿಯಂತೆ 182 ವಿಧಾನಸಭಾ ಸ್ಥಾನಗಳ ಪೈಕಿ ಬಿಜೆಪಿ 105-106 ಸ್ಥಾನಗಳನ್ನು ಗಳಿಸಲಿದ್ದು, ಮ್ಯಾಜಿಕ್ ನಂಬರ್ 92 ದಾಟುವ ಮೂಲಕ ಅಧಿಕಾರ ಸ್ಥಾಪಿಸುವ ಅವಕಾಶ ಪಡೆಯಲಿದೆ. ಕಾಂಗ್ರೆಸ್ 73-74 ಸ್ಥಾನ ಗಳಿಸಿ ವಿರೋಧ ಪಕ್ಷವಾಗಿ ಉಳಿಯಲಿದೆ.

Gujrat Assembly Elections 2017 : Opinion polls aggregates gives Thumbs up to BJP

ಬಿಜೆಪಿ
ಇಂಡಿಯಾ ಟಿವಿ : 106-116
ಟೈಮ್ಸ್ ನೌ : 111
ಎಬಿಪಿ ಸಿಎಸ್ ಡಿಎಸ್ : 91-99
ನ್ಯೂಸ್ ನೇಷನ್: 131-141
ರಿಪಬ್ಲಿಕ್ ಟಿವಿ: 110-125
ಟಿವಿ9: 109
ಸಹಾರಾ ಸಿಎನ್ಎಕ್ಸ್: 128
ಇವೆಲ್ಲದರ ಸರಾಸರಿ : 105-106 ಆಗಲಿದೆ


ಕಾಂಗ್ರೆಸ್

ಇಂಡಿಯಾ ಟಿವಿ : 63-73
ಟೈಮ್ಸ್ ನೌ : 68
ಎಬಿಪಿ ಸಿಎಸ್ ಡಿಎಸ್ : 78-86
ನ್ಯೂಸ್ ನೇಷನ್: 37-47
ರಿಪಬ್ಲಿಕ್ ಟಿವಿ: 53-68
ಟಿವಿ9: 73
ಸಹಾರಾ ಸಿಎನ್ಎಕ್ಸ್: 52

ಇವೆಲ್ಲದರ ಸರಾಸರಿ : 73-74 ಆಗಲಿದೆ


ಇತರೆ
ಇಂಡಿಯಾ ಟಿವಿ : 2-4
ಟೈಮ್ಸ್ ನೌ : 3
ಎಬಿಪಿ ಸಿಎಸ್ ಡಿಎಸ್ : 3-7
ನ್ಯೂಸ್ ನೇಷನ್: 04
ರಿಪಬ್ಲಿಕ್ ಟಿವಿ: -
ಟಿವಿ9:-
ಸಹಾರಾ ಸಿಎನ್ಎಕ್ಸ್: 2

ಇವೆಲ್ಲದರ ಸರಾಸರಿ : 4-5 ಆಗಲಿದೆ

2012ರಲ್ಲಿ ಬಿಜೆಪಿ 116 ಹಾಗೂ ಕಾಂಗ್ರೆಸ್ 60 ಸ್ಥಾನ ಗಳಿಸಿತ್ತು. ಕಳೆದ 22 ವರ್ಷಗಳಿಂದ ಕೇಸರಿ ಪಕ್ಷ ಅಧಿಕಾರ ಕಳೆದುಕೊಂಡಿಲ್ಲ. ಡಿಸೆಂಬರ್ 9ರಂದು 89 ಸ್ಥಾನಗಳಿಗಾಗಿ ಮೊದಲ ಹಂತದ ಮತದಾನ ನಡೆಯಲಿದೆ.

ಡಿಸೆಂಬರ್ 14ರಂದು 93 ಸ್ಥಾನಗಳಿಗಾಗಿ ಎರಡನೇ ಹಂತದ ಮತದಾನ ನಿಗದಿಯಾಗಿದೆ. ಡಿಸೆಂಬರ್ 18ರಂದು ಹಿಮಾಚಲ ಪ್ರದೇಶ ಹಾಗೂ ಗುಜರಾತಿನ ಫಲಿತಾಂಶ ಪ್ರಕಟವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+