ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ ಮೊದಲ ಹಂತದ ಚುನಾವಣೆ, ಶೇ.68ರಷ್ಟು ಮತದಾನ

|
Google Oneindia Kannada News

ಅಹಮದಾಬಾದ್, ಡಿಸೆಂಬರ್ 9: ತೀವ್ರ ಕುತೂಹಲ ಕೆರಳಿಸಿರುವ ಗುಜರಾತ್ ವಿಧಾನಸಭೆಗೆ ಇಂದು(ಡಿ. 9) ಮೊದಲ ಹಂತದ ಮತದಾನ ಶಾಂತಿಯುತವಾಗಿ ಅಂತ್ಯವಾಗಿದ್ದು, ಶೇ 68 ಪ್ರತಿಶತ ಮತದಾನವಾಗಿದೆ ಎಂದು ಚುನಾವಣಾ ಚುನಾವಣೆ ಆಯುಕ್ತರು ಮಾಹಿತಿ ನೀಡಿದರು.

ಶೇಕಡಾವಾರು ಮತದಾನ ಇನ್ನಷ್ಟು ಹೆಚ್ಚಾಗಬಹುದು ಎಂದೂ ಚುನಾವಣಾ ಆಯೋಗ ಹೇಳಿದೆ. ಸೌರಾಷ್ಟ್ರ ಹಾಗೂ ದಕ್ಷಿಣ ಗುಜರಾತ್‌ನ ಕ್ಷೇತ್ರಗಳಲ್ಲಿ 89 ಸ್ಥಾನಗಳಿಗೆ ಶನಿವಾರ ಮೊದಲ ಹಂತದ ಮತದಾನ ಶಾಂತಿಯುತವಾಗಿ ನಡೆದಿದ್ದು, ಯುವ ಜನ, ವಿದ್ಯಾರ್ಥಿಗಳು ಉತ್ತಮವಾಗಿ ಸ್ಪಂದಿಸಿ ಹಕ್ಕು ಚಲಾಯಿಸಿದ್ದಾರೆ.

ಚುನಾವಣೆ ಶಾಂತಿಯುತವಾಗಿ ನಡೆಯುವಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳು ಸಾಕಷ್ಟು ಶ್ರಮ ವಹಿಸಿದ್ದಾರೆ ಎಂದು ಚುನಾವಣೆ ಆಯುಕ್ತ ಮೆಚ್ಚುಗೆ ವ್ಯಕ್ತಪಡಿಸಿದರು. ಎರಡನೇ ಹಂತದ ಮತದಾನ ಡಿಸೆಂಬರ್ 14ರಂದು 93 ಕ್ಷೇತ್ರಗಳಲ್ಲಿ ನಡೆಯಲಿದೆ. ಡಿಸೆಂಬರ್ 18ರಂದು ಮತಎಣಿಕೆ ನಡೆಯಲಿದೆ.

Gujarat assembly elections-2017 First Phase voting Live updates

ಮಧ್ಯಾಹ್ನ 4.30: ಕರ್ನಾಟಕದ ರಾಜ್ಯಪಾಲ ವಾಜುಭಾಯಿ ವಾಲಾ ಅವರು ರಾಜ್ ಕೋಟ್ ನಲ್ಲಿ ತಮ್ಮ ಮತ ಚಲಾಯಿಸಿದರು.

ಮಧ್ಯಾಹ್ನ 4.00:ಇದುವರೆಗೆ ಶೇ.40.47 ಮತದಾನ ದಾಖಲು

ಮಧ್ಯಾಹ್ನ 2.30: ಇದುವರೆಗೆ ಶೇ.37 ಮತದಾನ ದಾಖಲು

Gujarat assembly elections-2017 First Phase voting Live updates

ಮಧ್ಯಾಹ್ನ 02.15: ಇವಿಎಂ ಬ್ಲೂಟೂಥ್ ಗೆ ಕನೆಕ್ಟ್ ಆಗಿದೆ ಎಂಬ ದೂರಿನ ಮೇಲೆ ಪೋರ್ ಬಂದರ್ ಮತಗಟ್ಟೆಗೆ ಬಂದ ಚುನಾವಣಾ ಆಯೋಗದ ಅಧಿಕಾರಿಗಳು.

ಮಧ್ಯಾಹ್ನ 01.00: ಇದುವರೆಗೆ ಶೇ.21.09 ಮತದಾನ ದಾಖಲು

ಮಧ್ಯಾಹ್ನ 12.50: ನನ್ನ ವಿರುದ್ಧ ಪ್ರತಿಭಟನೆ ಮಾಡಿದ್ದು ಪಾಟೀದಾರ್ ಸಮುದಾಯದವರಲ್ಲ, ಕಾಂಗ್ರೆಸ್ ನವರು. ಮಾಧ್ಯಮದಲ್ಲಿ ಪಾಟೀದಾರ್ ಸಮುದಾಯ ಎನ್ನಲಾಗುತ್ತಿದೆ: ರೇಷ್ಮಾ ಸ್ಪಷ್ಟನೆ

Gujarat assembly elections-2017 First Phase voting Live updates

ಮಧ್ಯಾಹ್ನ 12.30: ಬಿಜೆಪಿಯ ಪಾರ್ಡಿ ಕ್ಷೇತ್ರದ ಅಭ್ಯರ್ಥಿ ಕಾನು ದೇಸಾಯಿಯವರ ಸಂಬಂಧಿಯೊಬ್ಬರು ಮತದಾರರೊಬ್ಬರಿಗೆ ಹಣ ನೀಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆ.

ಮಧ್ಯಾಹ್ನ 12.00: ಮತಯಂತ್ರದಲ್ಲಿ ದೋಷವಿದ್ದರೆ ಶೀಘ್ರ ಬಗೆಹರಿಸುವಂತೆ ಅಹ್ಮದ್ ಪಟೇಲ್ ಮನವಿ

ಬೆಳಿಗ್ಗೆ 11.40: ಜುನಾಗಢದಲ್ಲಿ ಬಿಜೆಪಿಯ ರೇಷ್ಮಾ ಪಟೇಲ್ ಮತದಾನಕ್ಕೆ ಆಗಮಿಸುತ್ತದಿದ್ದಂತೆಯೇ ಪಾಟಿದಾರ್ ಸಮುದಾಯದ ಗುಂಪೊಂದು ಪ್ರತಿಭಟನೆ ಆರಂಭ ಇಸಿದ ಕಾರಣ ಕೆಲ ಕಾಲ ಪ್ರಕ್ಷುಬ್ಧ ವಾತಾವರಣ ತಲೆದೋರಿತ್ತು. ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು.

ಬೆಳಿಗ್ಗೆ 11.10: ಈಗಾಗಲೇ ಎರಡು ಇವಿಎಂ ಮತ್ತು ವಿವಿಪಿಎಟಿ ಯಂತ್ರಗಳನ್ನು ಬದಲಿಸಲಾಗಿದೆ. ಇವನ್ನು ತಾಂತ್ರಿಕ ದೋಷ ಎನ್ನಲಾಗುವುದಿಲ್ಲ. ಇವು ಎಲೆಕ್ಟ್ರಾನಿಕ್ ವಸ್ತುಗಳಾಗಿರುವುದರಿಂದ ಕೆಲವು ಸಮಸ್ಯೆಗಳಾಗುವುದು ಸಹಜ. ಸದ್ಯಕ್ಕೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ಮತದಾನ ಆರಂಭವಾಗಿದೆ: ತರಬೇತುದಾರ ವಿಪುಲ್ ಗೋಟಿ ಹೇಳಿಕೆ

ಬೆಳಿಗ್ಗೆ 10.45: ಇದುವರೆಗೆ ಶೇ.15 ಮತದಾನ ದಾಖಲು

ಬೆಳಿಗ್ಗೆ 10.40: ಭಾರೂಚ್ ನ ಅಂಕ್ಲೇಶ್ವರದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ರಿಂದ ಮತಚಲಾವಣೆ

ಬೆಳಿಗ್ಗೆ 10.15: ರಾಜಕೋಟ್ ನ ರವಿ ವಿದ್ಯಾಲಯ ಭೂತ್ ನಲ್ಲಿ ಕ್ರಿಕೆಟ್ ಆಟಗಾರ ಚೇತೇಶ್ವರ್ ಪೂಜಾರ್ ರಿಂದ ಮತ ಚಲಾವಣೆ

ಬೆಳಿಗ್ಗೆ10.00: ಭಾರುಚ್ ನ ಬಹುಮಲಿಯಲ್ಲಿ ಮತಚಲಾಯಿಸಿದ ವಧು-ವರರು. ಮತಚಲಾಯಿಸಿದ ನಂತರ ಅವರು ಸಪ್ತಪದಿ ತುಳಿದರು.

Gujarat assembly elections-2017 First Phase voting Live updates

ಬೆಳಿಗ್ಗೆ 9.30: 5 ಜಿಲ್ಲೆಯ ಕೆಲವು ಮತಗಟ್ಟೆಗಳಲ್ಲಿ ಕೈಕೊಟ್ಟ ಇವಿಎಂ. ಮತದಾರರ ಪರದಾಟ

ಬೆಳಿಗ್ಗೆ 9.15: ರಾಜ್ ಕೋಟ್ ನಲ್ಲಿ ಮತಚಲಾಯಿಸಿದ ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ.

Gujarat assembly elections-2017 First Phase voting Live updates

ಬೆಳಿಗ್ಗೆ 8.50: ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ನಾವು 150 ಕ್ಕೂ ಹೆಚ್ಚು ಸೀಟುಗಳನ್ನು ಗೆದ್ದೇ ಗೆಲ್ಲುತ್ತೇವೆ, ನಮಗೆ ಯಾವುದೇ ಅಡೆತಡೆಗಳಿಲ್ಲ: ಭಾವ್ನಾನಗರದಲ್ಲಿ ಮತಚಲಾಯಿಸಿದ ನಂತರ ಜಿತು ವಘಾನಿ ಹೇಳಿಕೆ

ಬೆಳಿಗ್ಗೆ 8.45: ಸೂರತ್ ನ ಚೊರಾಯ್ಸಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಆರಂಭ.

ಬೆಳಿಗ್ಗೆ 8.40: ಭಾವ್ನಾನಗರದಲ್ಲಿ ಗುಜರಾತ್ ಬಿಜೆಪಿ ರಾಜ್ಯಾಧ್ಯಕ್ಷ ಜಿತುಭಾಯ್ ವಘಾನಿ ಮತದಾನ

ಬೆಳಿಗ್ಗೆ 8.15: ಸೂರತ್ ನ ಜೆಎಚ್ ಅಂಬಾನಿ ಸರಸ್ವತಿ ವಿದ್ಯಾಮಂದಿರ ಮತಗಟ್ಟೆಯಲ್ಲಿ ಮತದಾನ ಆರಂಭ

ಬೆಳಿಗ್ಗೆ 8.10: ಬಾರೂಚ್ ನ ಅಂಕಲೇಶ್ವರದಲ್ಲಿ ಮತದಾನಕ್ಕೆ ಸಾಲುಗಟ್ಟಿನಿಂತ ಜನರು.(ಚಿತ್ರಕೃಪೆ: ಎಎನ್ ಐ)

Gujarat assembly elections-2017 First Phase voting Live updates

ಬೆಳಿಗ್ಗೆ 8.05: ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ತೊಡಗಬೇಕು. ನಮಗೆ ವಿಶ್ವಾಸವಿದೆ, ಗೆಲುವು ನಮ್ಮದೇ. ನಮಗೆ ಯಾವ ಸವಾಲೂ ಇಲ್ಲ: ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ

ಬೆಳಿಗ್ಗೆ 8.00: ಗುಜರಾತ್ ಮೊದಲ ಹಂತದ ಮತದಾನ ಆರಂಭ

ಬೆಳಿಗ್ಗೆ 7.30: ಬಿಜೆಪಿ ಐತಿಹಾಸಿಕ ಜಯ ದಾಖಲಿಸಲಿದೆ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

ಬೆಳಿಗ್ಗೆ 7.15: ಮತಗಟ್ಟೆಗಳಲ್ಲಿ ಮತದಾನಕ್ಕೆ ಸಿದ್ಧತೆ ನಡೆಸುತ್ತಿರುವ ಸಿಬ್ಬಂದಿಗಳು

ಬೆಳಿಗ್ಗೆ 6.45: ಮತದಾನಕ್ಕೆ ಕ್ಷಣಗಣನೆ. ಎಲ್ಲಾ ಮತಗಟ್ಟೆಗಳಲ್ಲಿ ಬಿಗಿ ಬಂದೋಬಸ್ತ್

ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 977 ಅಭ್ಯರ್ಥಿಗಳು ಕಣದಲ್ಲಿದ್ದರೆ, ಇವರಲ್ಲಿ 920 ಪುರುಷ ಅಭ್ಯರ್ಥಿಗಳು ಮತ್ತು 57 ಮಹಿಳಾ ಅಭ್ಯರ್ಥಿಗಳಾಗಿದ್ದಾರೆ.

ಒಟ್ಟು 2,12,31,652 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. 1,11,05,933 ಕೋಟಿ ಪುರುಷ ಮತದಾರರು ಮತ್ತು 1,01,25,472 ಮಹಿಳಾ ಮತದಾರರು ಅಭ್ಯರ್ಥಿಗಳ ಹಣೆ ಬರಹ ನಿರ್ಧರಿಸಲಿದ್ದಾರೆ.

ಜಾಮ್ನಗರ ಗ್ರಾಮಾಂತರದಲ್ಲಿ ಗರಿಷ್ಠ 27 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದರೆ , ಝಗಾಡಿಯಾ ಮತ್ತು ಗಂಡೇವಿಯಲ್ಲಿ ಕೇವಲ 3 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.
ರಾಜಕೋಟ್ ನಿಂದ ಸ್ಪರ್ಧಿಸಿರುವ ಮುಖ್ಯಮಂತ್ರಿ ವಿಜಯ್ ರೂಪಾಣಿ, ಮಾಂಡ್ವಿಯಿಂದ ಶಕ್ತಿಸಿನ್ಹಾ ಗೋಹಿಲ್, ಅಮ್ರೇಲಿಯಿಂದ ಪರೇಶ್ ಧನಾನಿ ಕಣದಲ್ಲಿರುವ ಪ್ರಮುಖ ಸ್ಪರ್ಧಿಗಳಾಗಿದ್ದಾರೆ.
ಎರಡನೇ ಹಂತದ ಮತದಾನ ಡಿಸೆಂಬರ್ 14ರಂದು 93 ಕ್ಷೇತ್ರಗಳಲ್ಲಿ ನಡೆಯಲಿದೆ. ಡಿಸೆಂಬರ್ 18ರಂದು ಮತಎಣಿಕೆ ನಡೆಯಲಿದೆ.

English summary
Gujarat assembly elections-2017 First Phase voting Live updates are here. Voting begins today(December 09) at the poll stations to elect 89 members to Gujarat legislative assembly. Results will be announced on December 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X