ಗುಜರಾತ್: ಕಾಂಗ್ರೆಸ್ ನಿಂದ 77 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

Subscribe to Oneindia Kannada

ಅಹಮದಾಬಾದ್, ನವೆಂಬರ್ 20: ಗುಜರಾತ್ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿದ ನಂತರ ಇದೀಗ ಕಾಂಗ್ರೆಸ್ ಕೂಡಾ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.

ಕಾಂಗ್ರೆಸ್-ಹಾರ್ದಿಕ್ ಮಧ್ಯೆ ಕುದುರಿದ ಒಪ್ಪಂದ, ಇಂದು ಬಹಿರಂಗ ಘೋಷಣೆ

ಡಿಸೆಂಬರ್ 9ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ ಸಂಬಂಧಿಸಿದಂತೆ 77 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

Gujarat Assembly elections 2017: Congress's first list of 77 candidates out

ವಿಶೇಷವೆಂದರೆ ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ (ಪಾಸ್) ಮತ್ತು ಕಾಂಗ್ರೆಸ್ ನಡುವೆ ಪಟೇಲರಿಗೆ ಮೀಸಲಾತಿ ನೀಡುವ ಸಂಬಂಧ ಒಪ್ಪಂದ ಏರ್ಪಟ್ಟ ನಂತರ ಈ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಕಾಂಗ್ರೆಸ್ ಕೊಡಲ್ಲ, ಹಾರ್ದಿಕ್ ಬಿಡಲ್ಲ; ಸೀಟಿಗಾಗಿ ಗುಜರಾತಿನಲ್ಲಿ ಕಚ್ಚಾಟ

ಪಟೇಲರ ನಾಯಕ ಲಲಿತ್ ವಾಸೋಯ ಈ ಚುನಾವಣೆಯಲ್ಲಿ ಧೋರಾಜಿ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

ಜಾತಿವಾರು ಲೆಕ್ಕಾಚಾರ:

77 ಅಭ್ಯರ್ಥಿಗಳ ಪಟ್ಟಿಯಲ್ಲಿ11 ಜನ ಪರಿಶಿಷ್ಠ ಜಾತಿ, 7 ಅಭ್ಯರ್ಥಿಗಳು ಪರಿಶಿಷ್ಠ ಪಂಗಡ, 23 ಪಟೇಲರು, 12 ಕೋಲಿ ಸಮುದಾಯದಕ್ಕೆ ಸೇರಿದವರು, ಇಬ್ಬರು ಅಲ್ಪಸಂಖ್ಯಾತರು ಸ್ಥಾನ ಪಡೆದಿದ್ದಾರೆ.

ಮೊದಲ ಹಂತದ 89 ಕ್ಷೇತ್ರಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ ಅಂದರೆ ನವೆಂಬರ್ 21 ಕೊನೆಯ ದಿನವಾಗಿದ್ದು ಕೇವಲ 2 ದಿನಗಳ ಮೊದಲು ಕಾಂಗ್ರೆಸ್ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಮೊದಲ ಹಂತದಲ್ಲಿ 89 ಕ್ಷೇತ್ರಗಳಿಗೆ ಮತದಾನ ನಡೆಯಲಿರುವುದರಿಂದ ಕಾಂಗ್ರೆಸ್ ಎರಡನೇ ಪಟ್ಟಿಯನ್ನೂ ಸದ್ಯದಲ್ಲೇ ಬಿಡುಗಡೆ ಮಾಡಬೇಕಾಗಿದೆ.

ಡಿಸೆಂಬರ್ 14ರಂದು 93 ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ನಡೆಯಲಿದೆ. ಡಿಸೆಂಬರ್ 18ರಂದು 182 ಕ್ಷೇತ್ರಗಳ ಫಲಿತಾಂಶ ಒಟ್ಟಾಗಿ ಹೊರ ಬೀಳಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Congress party finally releases the first of 77 candidates for the upcoming assembly elections in Gujarat on Sunday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ