Gujarat Election Results 2022: ಮುನ್ನಡೆ ಸಾಧಿಸಿರುವ ಪ್ರಮುಖ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

ಗಾಂಧಿನಗರ, ಡಿಸೆಂಬರ್‌ 8: ದೇಶದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ(Gujarat Assembly Elections 2022) ಬಿಜೆಪಿ ಮುನ್ನಡೆ ಸಾಧಿಸಿದೆ. ಬೆಳಿಗ್ಗೆ 9 ಗಂಟೆ ಕೊನೆಗೊಂಡಂತೆ ಬಿಜೆಪಿಗೆ 127 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ, ಕಾಂಗ್ರೆಸ್‌ 40 ಹಾಗೂ ಎಎಪಿ 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಮುನ್ನಡೆ ಸಾಧಿಸಿರುವ ಪ್ರಮುಖ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.

ಗುಜರಾತ್‌ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಈ ಬಾರಿಯ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ನಡುವೆ ತ್ರಿಕೋನ ಸ್ಪರ್ಧೆಯನ್ನು ನಿರೀಕ್ಷಿಸಲಾಗಿದೆ. ಇದು ಹೈವೊಲ್ಟೇಜ್‌ ಚುನಾವಣೆ ಎಂದು ಪರಿಗಣಿಸಲಾಗಿದೆ. ಇಂದು ಪೂರ್ಣ ಫಲಿತಾಂಶ ಹೊರಬರಲಿದೆ.

Gujarat Assembly election result 2022 Bhupendra Patel, Hardik, Isudan leading

Recommended Video

      Gujarat Election Results: 150ಕ್ಕೂ ಸೀಟ್ ಗೆಲ್ಲುವತ್ತ ಬಿಜೆಪಿ, 7 ನೇ ಬಾರಿ ಸರ್ಕಾರ ರಚನೆ ಖಚಿತ | Oneindia

      ಗುಜರಾತ್‌ನಲ್ಲಿ ಕಳೆದ ಎರಡು ದಶಕಗಳಿಂದ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಇರುತ್ತಿತ್ತು. ಈ ಬಾರಿ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷವು(AAP) ಗುಜರಾತ್‌ನಲ್ಲಿ ನೆಲೆ ಕಂಡುಕೊಳ್ಳಲು ಯತ್ನ ನಡೆಸಿದೆ. ಅದಕ್ಕೆ ತಕ್ಕನಾಗಿ ಎಎಪಿಗೆ ಗುಜರಾತ್‌ನಲ್ಲಿ ಬೆಂಬಲ ವ್ಯಕ್ತವಾಗಿದೆ. ಪ್ರಧಾನಿ ಮೋದಿಯ ತವರು ರಾಜ್ಯವಾದ ಗುಜರಾತ್‌ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದೆ. ಕಾಂಗ್ರೆಸ್‌ ಮೌನ ಪ್ರಚಾರದಲ್ಲಿ ತೊಡಗಿಕೊಂಡಿತ್ತು. ಗುಜರಾತ್‌ನ ಗ್ರಾಮೀಣ ಭಾಗಗಳಲ್ಲಿ ಪ್ರಚಾರ ಕೈಕೊಂಡಿತ್ತು.

      Gujarat Assembly election result 2022 Bhupendra Patel, Hardik, Isudan leading

      ಮುನ್ನಡೆ ಸಾಧಿಸಿರುವ ಪ್ರಮುಖ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

      1- ಭೂಪೇಂದ್ರ ಪಟೇಲ್‌- Bhupendra Patel (ಬಿಜೆಪಿ)
      2- ಹಾರ್ದಿಕ್‌ ಪಟೇಲ್‌- Hardik Patel (ಬಿಜೆಪಿ)
      3- ಅಲ್ಪೇಶ್‌ ಠಾಕೂರ್‌- Alpesh Thakor (ಬಿಜೆಪಿ)
      4- ರಿವಾಬಾ ಜಡೇಜ- Rivaba Jadeja (ಬಿಜೆಪಿ)
      5- ಜಿಗ್ನೇಶ್‌ ಮೇವಾನಿ- Jignesh Mevani (ಕಾಂಗ್ರೆಸ್‌)
      6-ಇಸುದಾನ್‌ ಗದ್ವಿ- Isudan Gadhvi (ಎಎಪಿ)

      Gujarat Assembly election result 2022 Bhupendra Patel, Hardik, Isudan leading

      ಹಿನ್ನೆಡೆ ಸಾಧಿಸಿರುವ ಪ್ರಮುಖರು

      1- ಗೋಪಾಲ್‌ ಇಟಾಲಿಯಾ- Gopal Italia (ಎಎಪಿ)

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+