ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳೆದ ಬಾರಿ ಮಾಡಿದ್ದ ಜಾದೂ ಈಗಲೂ ಮಾಡುವುದೆ ಬಿಜೆಪಿ?

By Prasad
|
Google Oneindia Kannada News

Recommended Video

ಬಿಜೆಪಿ ಈ ಬಾರಿಯೂ ಜಾದೂ ಮಾಡುವುದೆ ? | Oneindia Kannada

ಅಹ್ಮದಾಬಾದ್, ಡಿಸೆಂಬರ್ 14 : ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕಿಂತ, ಡಿಸೆಂಬರ್ 14ರಂದು ನಡೆಯುತ್ತಿರುವ ಎರಡನೇ ಹಂತದ ಮತದಾನ ಕಾಂಗ್ರೆಸ್ಸಿಗಿಂತ ಭಾರತೀಯ ಜನತಾ ಪಕ್ಷಕ್ಕೆ ಹೆಚ್ಚು ನಿರಾಳತೆಯನ್ನು ತರಲಿದೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ.

ಎರಡನೇ ಹಂತದಲ್ಲಿ, ಒಟ್ಟು 182 ಕ್ಷೇತ್ರಗಳಲ್ಲಿ 93 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಕಳೆದ ಬಾರಿ, ಅಂದರೆ 2012ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ, ಭಾರತೀಯ ಜನತಾ ಪಕ್ಷ 52ರಲ್ಲಿ ಜಯ ಗಳಿಸಿದ್ದರೆ, ಕಾಂಗ್ರೆಸ್ ಕೇವಲ 39 ಸ್ಥಾನಗಳನ್ನು ಗಳಿಸಲು ಯಶಸ್ವಿಯಾಗಿತ್ತು.

LIVE - ಪ್ರಜಾಪ್ರಭುತ್ವದ ಹಬ್ಬಕ್ಕೆ ಮೋದಿ, ರಾಹುಲ್ ಸ್ವಾಗತLIVE - ಪ್ರಜಾಪ್ರಭುತ್ವದ ಹಬ್ಬಕ್ಕೆ ಮೋದಿ, ರಾಹುಲ್ ಸ್ವಾಗತ

ಗುಜರಾತ್ ಕೇಂದ್ರ ಭಾಗದಲ್ಲಿ ಬಿಜೆಪಿ ಬಲಾಢ್ಯವಾಗಿದೆ. ನಲವತ್ತರಲ್ಲಿ ಕಾಂಗ್ರೆಸ್ 18ರಲ್ಲಿ ಮತ್ತು ಬಿಜೆಪಿ 20 ಕ್ಷೇತ್ರಗಳಲ್ಲಿ ಜಯಗಳಿಸಿದ್ದರೂ, ಬಿಜೆಪಿಯ ಗೆಲುವಿನ ಅಂತರ ಕಾಂಗ್ರೆಸ್ ಕಳೆಗುಂದುವಂತೆ ಮಾಡಿತ್ತು. ಇದೇ ಕೇಂದ್ರ ಮತ್ತು ಉತ್ತರ ಭಾಗದಲ್ಲಿ ಡಿಸೆಂಬರ್ 14ರಂದು ಮತದಾನ ಜರುಗಲಿದೆ.

ಕಣದಲ್ಲಿ 851 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕಳೆದ 22 ವರ್ಷಗಳಿಂದ ರಾಜ್ಯಭಾರ ನಡೆಸುತ್ತಿರುವ ಭಾರತೀಯ ಜನತಾ ಪಕ್ಷಕ್ಕೆ ಮತ್ತೆ ಅಧಿಕಾರ ಮರಳಿ ಪಡೆಯಲು ಹವಣಿಸುತ್ತಿರುವ ಕಾಂಗ್ರೆಸ್ ಪಕ್ಷ ಈ ಬಾರಿ ಭಾರೀ ಪೈಪೋಟಿ ನೀಡಲಿದೆ ಎಂದು ಹಲವಾರು ಸಮೀಕ್ಷೆಗಳಿಂದ ತಿಳಿದುಬಂದಿದೆ.

ಕೇಂದ್ರ ಗುಜರಾತ್ ನಲ್ಲಿ ಬಿಜೆಪಿಗೆ ಭಾರೀ ಪೈಪೋಟಿ

ಕೇಂದ್ರ ಗುಜರಾತ್ ನಲ್ಲಿ ಬಿಜೆಪಿಗೆ ಭಾರೀ ಪೈಪೋಟಿ

ಎಬಿಪಿ ನ್ಯೂಸ್ ಮತ್ತು ಸಿಎಸ್‌ಡಿಎಸ್ ಜಂಟಿಯಾಗಿ ನಡೆಸಿರುವ ಸಮೀಕ್ಷೆಯಲ್ಲಿ, ಭಾರತೀಯ ಜನತಾ ಪಕ್ಷ ಕಾಂಗ್ರೆಸ್ ನಿಂದ ಕೇಂದ್ರ ಭಾಗದಲ್ಲಿ ಭಾರೀ ಪೈಪೋಟಿ ಎದುರಿಸಲಿದೆ. ಕೇಂದ್ರ ಭಾಗದಲ್ಲಿ ವಡೋದರಾ, ಆನಂದ, ಖೇಡ, ಪಂಚಮಹಲ್, ದಹೋಡ್, ಛೋಟಾ, ಉದೇಪುರ, ಮಹಿಸಾಗರ ಜಿಲ್ಲೆಗಳು ಬರುತ್ತವೆ.

ಎಬಿಪಿ ನ್ಯೂಸ್ ಸಮೀಕ್ಷೆ : ಗುಜರಾತ್ ನಲ್ಲಿ ಬಿಜೆಪಿಗೆ ಸುಲಭವಲ್ಲ ಜಯ!ಎಬಿಪಿ ನ್ಯೂಸ್ ಸಮೀಕ್ಷೆ : ಗುಜರಾತ್ ನಲ್ಲಿ ಬಿಜೆಪಿಗೆ ಸುಲಭವಲ್ಲ ಜಯ!

ಉತ್ತರ ಗುಜರಾತ್ ನಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು

ಉತ್ತರ ಗುಜರಾತ್ ನಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು

ಉತ್ತರ ಗುಜರಾತ್ ನಲ್ಲಿ ಸರಾಸರಿ ಗೆಲುವಿನ ಮತಗಳು 26,015 ಆಗಿತ್ತು. 53 ಕ್ಷೇತ್ರಗಳಲ್ಲಿ ಬಿಜೆಪಿ 32ರಲ್ಲಿ ಜಯಭೇರಿ ಬಾರಿಸಿದ್ದರೆ, ಕಾಂಗ್ರೆಸ್ ಕೇವಲ 21 ಸ್ಥಾನಗಳನ್ನು ಗಳಿಸಿತ್ತು. ಬಿಜೆಪಿಯ ಗೆಲುವಿನ ಸರಾಸರಿ ಮತಗಳ ಸಂಖ್ಯೆ ಕಾಂಗ್ರೆಸ್ಸಿಗಿಂತ ದುಪ್ಪಟ್ಟು ಇದ್ದದ್ದು ಕಾಂಗ್ರೆಸ್ಸಿಗೆ ಮುಖಭಂಗವಾಗುವಂತೆ ಮಾಡಿತ್ತು.

ಟೈಮ್ಸ್ ನೌ- ವಿಎಂಆರ್ ಸಮೀಕ್ಷೆಯಲ್ಲೂ ಗುಜರಾತ್ ನಲ್ಲಿ ಬಿಜೆಪಿಗೆ ಬಹುಮತಟೈಮ್ಸ್ ನೌ- ವಿಎಂಆರ್ ಸಮೀಕ್ಷೆಯಲ್ಲೂ ಗುಜರಾತ್ ನಲ್ಲಿ ಬಿಜೆಪಿಗೆ ಬಹುಮತ

ಪಟಿದಾರ್ ಸಮುದಾಯದವರು ಹೆಚ್ಚಿರುವ ಸೌರಾಷ್ಟ್ರ

ಪಟಿದಾರ್ ಸಮುದಾಯದವರು ಹೆಚ್ಚಿರುವ ಸೌರಾಷ್ಟ್ರ

ಮೊದಲ ಹಂತದಲ್ಲಿ ಮತದಾನ ಕಂಡಿರುವ ಸೌರಾಷ್ಟ್ರದಲ್ಲಿ, ಈಗ ಬಿಜೆಪಿ ವಿರುದ್ಧ ತಿರುಗಿಬಿದ್ದಿರುವ ಪಟಿದಾರ್ ಸಮುದಾಯದವರು ಹೆಚ್ಚಾಗಿದ್ದರೂ, ಕಳೆದ ಬಾರಿಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 30 ಕ್ಷೇತ್ರಗಳಲ್ಲಿ ಜಯಶಾಲಿಯಾಗಿ ಮೀಸೆ ತಿರುವಿತ್ತು. ಕಾಂಗ್ರೆಸ್ 15 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಇಲ್ಲಿ ಕೂಡ ಬಿಜೆಪಿ ಸರಾಸರಿ ಮತಗಳ ಸಂಖ್ಯೆ ಕಾಂಗ್ರೆಸ್ಸಿಗಿಂತ ದುಪ್ಪಟ್ಟಾಗಿತ್ತು.

ಕಛ್ ನಲ್ಲಿ ಬಿಜೆಪಿಯ ಪ್ರಭುತ್ವ

ಕಛ್ ನಲ್ಲಿ ಬಿಜೆಪಿಯ ಪ್ರಭುತ್ವ

ಇನ್ನು ಕಛ್ ಪ್ರದೇಶದಲ್ಲಿ ಒಂದೇ ಜಿಲ್ಲೆಯಿದ್ದರೂ, ಇದ್ದ 6 ಸ್ಥಾನಗಳಲ್ಲಿ 5ರಲ್ಲಿ ಭಾರತೀಯ ಜನತಾ ಪಕ್ಷ ಜಯಭೇರಿ ಬಾರಿಸಿ ತನ್ನ ಪ್ರಭುತ್ವವನ್ನೆ ಮೆರೆದಿತ್ತು. ದಕ್ಷಿಣ ಗುಜರಾತ್ ನಲ್ಲಿ ಬಿಜೆಪಿಗೆ ಸಾಟಿಯೇ ಇರಲಿಲ್ಲ. 35 ಕ್ಷೇತ್ರಗಳಲ್ಲಿ 28 ಸ್ಥಾನಗಳನ್ನು ಭಾರತೀಯ ಜನತಾ ಪಕ್ಷ ಕಬಳಿಸಿತ್ತು. ಕಾಂಗ್ರೆಸ್ ಕೇವಲ 6 ಸ್ಥಾನಗಳಲ್ಲಿ ಗೆದ್ದು ಸಮಾಧಾನಕರ ಬಹುಮಾನ ಪಡೆದಿತ್ತು.

ಫಲಿತಾಂಶ ಹೊರಬೀಳಲಿದೆ ಡಿಸೆಂಬರ್ 18ರಂದು

ಫಲಿತಾಂಶ ಹೊರಬೀಳಲಿದೆ ಡಿಸೆಂಬರ್ 18ರಂದು

ಬಹುತೇಕ ಚುನಾವಣಾಪೂರ್ವ ಸಮೀಕ್ಷೆಗಳು ಕಾಂಗ್ರೆಸ್ಸಿಗಿಂತ ಭಾರತೀಯ ಜನತಾ ಪಕ್ಷವೇ ಮುಂದಿರಲಿದೆ ಎಂದು ಭವಿಷ್ಯ ನುಡಿದಿವೆ. ಆದರೂ, ಈಬಾರಿ ಕಾಂಗ್ರೆಸ್ ಭಾರೀ ಪೈಪೋಟಿ ನೀಡಲಿದೆ ಎಂದು ಸಮೀಕ್ಷೆ ತಿಳಿಸಿವೆ. ಯಾರು ಜಯದ ಮೀಸೆ ತಿರುವಲಿದ್ದಾರೆ, ಯಾರ ಮೀಸೆ ಮಣ್ಣಾಗಲಿದೆ ಎಂಬುದು ಡಿಸೆಂಬರ್ 18, ಸೋಮವಾರ ನಡೆಯಲಿರುವ ಮತಎಣಿಕೆಯ ನಂತರವಷ್ಟೇ ತಿಳಿದುಬರಲಿದೆ. ಫಲಿತಾಂಶ ತಿಳಿಯಲು ಒನ್ಇಂಡಿಯಾ ಕನ್ನಡ ನೋಡುತ್ತಿರಿ.

English summary
Second round of voting has begun in Gujarat assembly elections 2017. In the previous election in 2012 BJP has won many seats in Central and North Gujarat, leaving Congress way behind. Will it repeat the same magic? The results will be announced on 18th December.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X