ಆರ್ ಎಸ್ ಎಸ್ ನಾಯಕ ಗೋಸಾಯಿ ಹತ್ಯೆ ಖಂಡಿಸಿದ ರಾಹುಲ್ ಗಾಂಧಿ
ನವದೆಹಲಿ, ಅಕ್ಟೋಬರ್ 18: ಪಂಜಾಬಿನ ಲುಧಿಯಾನದಲ್ಲಿ ನಿನ್ನೆ(ಅ.17) ಬೆಳಿಗ್ಗೆ ಅಪರಿಚಿತರ ಗುಂಡೇಟಿಗೆ ಬಲಿಯಾದ ಆರ್ ಎಸ್ ಎಸ್ ಕಾರ್ಯಕರ್ತ ರವೀಂದ್ರ ಗೋಸಾಯಿ ಹತ್ಯೆಯನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರೋಧಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು ಆರ್ ಎಸ್ ಎಸ್ ಮುಖ್ಯಸ್ಥ ಗೋಸಾಯಿ ಅವರ ಹತ್ಯೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಇಂಥ ಹಿಂಸೆಗಳು ಖಂಡನಾರ್ಹ. ತಪ್ಪಿತಸ್ಥರು ಯಾರೇ ಆಗಿದ್ದರೂ ಆವರಿಗೆ ಶಿಕ್ಷೆಯಾಗಲೇ ಬೇಕು ಎಂದಿದ್ದಾರೆ.

ಅ.17 ರಂದು ಆರ್ ಎಸ್ ಎಸ್ ಶಾಖೆ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ವೇಳೆ ರವೀಂದ್ರ ಗೋಸಾಯಿ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದರು.
I strongly condemn the killing of RSS leader Ravinder Gosai in Ludhiana. Violence is unacceptable. The guilty must be brought to book.
— Office of RG (@OfficeOfRG) October 18, 2017












Click it and Unblock the Notifications