ಜಿಎಸ್ ಟಿ ಪದವನ್ನು ವಿಸ್ತರಿಸಿ ಹೇಳಲು ತಿಣುಕಾಡಿದ ಸಚಿವ!
ಉತ್ತರ ಪ್ರದೇಶದ ಸಮಾಜ ಕಲ್ಯಾಣ ಇಲಾಖೆಯ ಸಚಿವ ರಮಾಪತಿ ಶಾಸ್ತ್ರಿಗೆ ಜಿಎಸ್ ಟಿ ವಿಸ್ತಾರ ರೂಪ ಗೊತ್ತಿಲ್ಲ. ಮಾಧ್ಯಮಗಳು ಜಿಎಸ್ ಟಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ತಡಬಡಾಯಿಸಿದ ಸಚಿವರು.
ಮಹಾರಾಜ್ ಗಂಜ್ (ಉತ್ತರ ಪ್ರದೇಶ), ಜುಲೈ 1: ''ಜಿಎಸ್ ಟಿ ಅಂದ್ರೆ... ಜಿಎಸ್ ಟಿ ಅಂದ್ರೆ..... '' ಹೀಗೆ ತಡವರಿಸಿದ್ದು ಯಾರೋ ಶಾಲಾ ವಿದ್ಯಾರ್ಥಿಯಲ್ಲ ಅಥವಾ ಯಾರೋ ಹಳ್ಳಿ ಗಮಾರನಲ್ಲ. ಅವರು ಉತ್ತರ ಪ್ರದೇಶದ ಸಚಿವರು.
ಹೌದು. ಕೇಂದ್ರ ಸರ್ಕಾರದ ಮುದ್ದು ಕೂಸು ಎಂಬಂತಿರುವ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ಸಮಾಜ ಕಲ್ಯಾಣ ಹಾಗೂ ಪರಿಶಿಷ್ಠ ಜಾತಿ, ಪಂಗಡಗಳ ಅಭಿವೃದ್ಧಿ ಇಲಾಖೆಯ ಸಚಿವ ರಮಾಪತಿ ಶಾಸ್ತ್ರಿ ಅವರಿಗೆ ಜಿಎಸ್ ಟಿ ಬಗ್ಗೆ ಕೇಳಿದಾಗ ಹೀಗೆ ತಡಬಡಾಯಿಸಿದ್ದಾರೆ.

ಹೀಗೊಂದು ಪ್ರಶ್ನೆ ಕೇಳಿರುವುದು ಪತ್ರಕರ್ತರು. ಅವರ ಪ್ರಶ್ನೆಗೆ ಉತ್ತರಿಸದೇ ಹೀಗೆ ತಡಬಡಾಯಿಸಿದ ಈ ಸಚಿವರು ತಮ್ಮಲ್ಲಿನ ಜ್ಞಾನದ ಕೊರತೆಯನ್ನು ಮರೆಮಾಚಲು, ''ನಾನು ಜಿಎಸ್ ಟಿ ಬಗ್ಗೆ ತಿಳಿದಿದ್ದೇನೆ. ಆ ಬಗ್ಗೆ ಇನ್ನೂ ಹೆಚ್ಚಿನ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಮತ್ತಷ್ಟು ಹೆಚ್ಚಿನ ಮಾಹಿತಿಯನ್ನು ಪಡೆಯಲು ಮುಂದಾಗಿದ್ದೇನೆ'' ಎಂದಿದ್ದಾರೆ.
#WATCH UP Minister Rampati Shastri fails to spell out the full form of #GST pic.twitter.com/wBNUdlBOXf
— ANI UP (@ANINewsUP) June 30, 2017
ಒಟ್ಟಾರೆಯಾಗಿ, ಮಾಧ್ಯಮಗಳ ಮುಂದೆ ಕ್ಯಾಮೆರಾಗಳು ಆನ್ ಆಗಿರುವಾಗಲೇ ಸಚಿವರು ಇಂಥದ್ದೊಂದು ಆಭಾಸಕಾರಿ ನಡೆಯನ್ನು ಪ್ರದರ್ಶಿಸಿ ಉತ್ತರ ಪ್ರದೇಶ ಸರ್ಕಾರಕ್ಕೆ ಹಾಗೂ ಬಿಜೆಪಿಗೆ ಮುಜುಗರ ತಂದಿದ್ದಾರೆ. ಆದರೆ, ಸಚಿವರ ಈ ದಡ್ಡತನವನ್ನು ಮಾಧ್ಯಮಗಳಂತೂ ಹುರಿದು ಮುಕ್ಕಿವೆ.












Click it and Unblock the Notifications