ಜಿಎಸ್ಟಿ ತೆರಿಗೆ ಶ್ರೇಣಿಯಲ್ಲಿ ಬದಲಾವಣೆ, ಆರ್ಥಿಕ ಸಲಹೆಗಾರರಿಂದ ಸುಳಿವು

Subscribe to Oneindia Kannada

ಹೈದರಾಬಾದ್, ನವೆಂಬರ್ 25: ಮುಂದಿನ ದಿನಗಳಲ್ಲಿ ಜಿಎಸ್ಟಿ ಶ್ರೇಣಿಗಳನ್ನು ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣಿಯನ್ ಹೇಳಿದ್ದಾರೆ.

ಹೈದರಾಬಾದ್ ನಲ್ಲಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಿರುವ ಶೇ. 12 ಮತ್ತು 18ರ ತೆರಿಗೆ ಶ್ರೇಣಿಗಳನ್ನು ವಿಲೀನಗೊಳಿಸುವ ಪ್ರಸ್ತಾಪ ಇದೆ ಎಂದು ವಿವರಿಸಿದ್ದಾರೆ. ಮುಂದಿನ 6 ರಿಂದ 9 ತಿಂಗಳಲ್ಲಿ ಜಿಎಸ್ಟಿ ಸ್ಥಿರವಾಗಲಿದ್ದು ಉಳಿದ ದೇಶಗಳಿಗೆ ಮಾದರಿ ವ್ಯವಸ್ಥೆಯಾಗಲಿದೆ ಎಂದು ಹೇಳಿದರು.

 GST May Have Fewer Slabs In Future : Chief Economic Adviser Arvind Subramanian

"ಮುಂದಿನ ದಿನಗಳಲ್ಲಿ ಶೇ. 12 ಮತ್ತು 18 ರ ತೆರಿಗೆ ಶ್ರೇಣಿಗಳನ್ನು ಒಂದೇ ಶ್ರೇಣಿಗೆ ಇಳಿಸಲಾಗುವುದು. ಹೀಗಾಗಿ ಮುಂದಿನ ದಿನಗಳಲ್ಲಿ ಕಡಿಮೆ ಶ್ರೇಣಿಯ ತೆರಿಗೆ ಪದ್ಧತಿಯನ್ನು ನಾವು ಕಾಣಬಹುದು. ಹಾಗಂಥ ಏಕ ಶ್ರೇಣಿ ತೆರಿಗೆ ಪದ್ಧತಿಯನ್ನು ನಾವು ಹೊಂದುವುದು ಅಸಾಧ್ಯವಾಗಿದೆ," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಜಿಎಸ್ಟಿಯಲ್ಲಿ ತಾಂತ್ರಿಕ ಸಮಸ್ಯೆ ಇರುವುದನ್ನು ಅವರು ಒಪ್ಪಿಕೊಂಡಿದ್ದಾರೆ. ರಾಜ್ಯಗಳು ವಿಭಿನ್ನವಾದ ಐಟಿ ವ್ಯವಸ್ಥೆಯನ್ನು ಹೊಂದಿರುವುದರಿಂದ ಈ ರೀತಿ ಆಗಿದೆ. ಈ ಸಮಸ್ಯೆಗಳಿಗೆ ಜಿಎಸ್ಡಿ ಮಂಡಳಿ ಪರಿಹಾರ ರೂಪಿಸಲಿದೆ ಎಂದು ಅವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chief Economic Adviser (CEA) Arvind Subramanian today said going forward the Goods and Services Tax (GST) may 'probably' have fewer rates by 'collapsing' 12 per cent and 18 per cent tax slabs into one.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ