GST:ಮೊದಲ ತಿಂಗಳಲ್ಲಿ ಸರಕಾರಕ್ಕೆ ಬಂದ ಆದಾಯ, ಇಲ್ಲಿದೆ ಬ್ರೇಕ್ ಅಪ್
ಜುಲೈ ತಿಂಗಳಲ್ಲಿ ನಮ್ಮ ಟಾರ್ಗೆಟಿಗಿಂತ ಹೆಚ್ಚಿನ ಪ್ರಮಾಣದಲ್ಲಿ GST ತೆರಿಗೆ ಹರಿದು ಬಂದಿದ್ದು, ಚೊಚ್ಚಲ ಮಾಸದಲ್ಲಿ 92,283 ಕೋಟಿ ರೂಪಾಯಿ ಆದಾಯ ಬಂದಿದೆ - ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿಕೆ.
ನವದೆಹಲಿ, ಆ 30 (ಪಿಟಿಐ): ಸರಕು ಮತ್ತು ಸೇವಾ ತೆರಿಗೆ ನೀತಿ ಜಾರಿಗೆ ಬಂದ ಮೊದಲ ತಿಂಗಳಲ್ಲೇ (ಜುಲೈ 2018) ನಮ್ಮ ಗುರಿಯನ್ನು ನಾವು ತಲುಪಿದ್ದೇವೆಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಮಂಗಳವಾರ ರಾತ್ರಿ (ಆ 29) ಮಾಧ್ಯಮದರೊಂದಿಗೆ ಮಾತನಾಡುತ್ತಿದ್ದ ಜೇಟ್ಲಿ, ಜುಲೈ ತಿಂಗಳಲ್ಲಿ ನಮ್ಮ ಟಾರ್ಗೆಟಿಗಿಂತ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಹರಿದು ಬಂದಿದ್ದು, ಚೊಚ್ಚಲ ಮಾಸದಲ್ಲಿ 92,283 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಜೇಟ್ಲಿ ಹೇಳಿದ್ದಾರೆ.

ಇಷ್ಟು ತೆರಿಗೆ ಹಣ ಸರಕಾರಕ್ಕೆ ಬರಬೇಕೆಂದು ನಾವು ಟಾರ್ಗೆಟ್ ಇಟ್ಟುಕೊಂಡಿದ್ದೆವು, ಅದನ್ನು ಮೀರಿ ಆದಾಯ ಹರಿದು ಬಂದಿದೆ. 59.57 ಲಕ್ಷ ತೆರಿಗೆದಾರರು ಹೊಸ ಜಿಎಸ್ಟಿಯಲ್ಲಿ ನೊಂದಾಯಿಸಿಕೊಂಡು, ತಮ್ಮ ಜಿಎಸ್ಟಿ ನಂಬರಿಂದಲೇ ವ್ಯವಹಾರ ನಡೆಸುತ್ತಿದ್ದಾರೆಂದು ಜೇಟ್ಲಿ ತಿಳಿಸಿದ್ದಾರೆ.
ಒಟ್ಟು ಸಂಗ್ರಹವಾಗಿರುವ ತೆರಿಗೆ ಮೊತ್ತವಾದ 92,283 ಕೋಟಿ ರೂಪಾಯಿಗಳಿಗೆ ವಿತ್ತ ಸಚಿವರು ನೀಡಿದ ಬ್ರೇಕ್ ಅಪ್ ಹೀಗಿದೆ:
ಒಟ್ಟು ಸಂಗ್ರಹವಾಗಿರುವ ತೆರಿಗೆ ಮೊತ್ತ: 92,283 ಕೋಟಿ ರೂಪಾಯಿ
ಸೆಂಟ್ರಲ್ ಜಿಎಸ್ಟಿ (CGST) : 14,894 ಕೋಟಿ ರೂಪಾಯಿ
ಸ್ಟೇಟ್ ಜಿಎಸ್ಟಿ (SGST) : 22,722 ಕೋಟಿ ರೂಪಾಯಿ
ಐಜಿಎಸ್ಟಿ (IGST) : 47,469 ಕೋಟಿ ರೂಪಾಯಿ
ಜುಲೈ ತಿಂಗಳಲ್ಲಿ ಕೇಂದ್ರಕ್ಕೆ 48 ಸಾವಿರ ಕೋಟಿ ಮತ್ತು ರಾಜ್ಯಕ್ಕೆ 43 ಸಾವಿರ ಕೋಟಿ, ಒಟ್ಟಾರೆ 91,000 ಕೋಟಿ ತೆರಿಗೆ ಸಂಗ್ರಹಿಸಬೇಕು ಎನ್ನುವ ಗುರಿಯನ್ನು ಇಟ್ಟುಕೊಂಡಿದ್ದೆವು. ಅದು 92,283 ಕೋಟಿ ರೂಪಾಯಿ ದಾಟುವ ಮೂಲಕ ನಮ್ಮ ಗುರಿಯನ್ನು ತಲುಪಿದ್ದೇವೆಂದು ಅರುಣ್ ಜೇಟ್ಲಿ ಸಂತೋಷ ವ್ಯಕ್ತ ಪಡಿಸಿದ್ದಾರೆ.












Click it and Unblock the Notifications