ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ ಟಿ ಕೌನ್ಸಿಲ್ ಸಭೆಯ ಪ್ರಮುಖ ಅಂಶಗಳು

|
Google Oneindia Kannada News

ನವದೆಹಲಿ, ಅಕ್ಟೋಬರ್ 6: ವಾರ್ಷಿಕ ಒಂದೂವರೆ ಕೋಟಿಯೊಳಗೆ ವ್ಯವಹಾರ ನಡೆಸುವ ವ್ಯವಹಾರಸ್ಥರಿಗೆ ಮೂರು ತಿಂಗಳಿಗೊಮ್ಮೆ ತೆರಿಗೆ ಪಾವತಿಸಲು ಜಿಎಸ್ ಟಿ ಕೌನ್ಸಿಲ್ ಅವಕಾಶ ನೀಡಿದೆ. 22ನೇ ಜಿಎಸ್ ಟಿ ಕೌನ್ಸಿಲ್ ಸಭೆಯ ನಂತರ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಾಹಿತಿ ನೀಡಿದರು.

GST Council meeting highlight points

ಇಂದಿನ ಸಭೆಯ ಪ್ರಮುಖ ಅಂಶಗಳು ಹೀಗಿವೆ.

* ಐವತ್ತು ಸಾವಿರ ರುಪಾಯಿ ಮೇಲಿನ ಎರಡು ಲಕ್ಷ ರುಪಾಯಿವರೆಗೆ ಆಭರಣಗಳ ಖರೀದಿಗೆ ಪ್ಯಾನ್ ಕಾರ್ಡ್ ಅಗತ್ಯವಿಲ್ಲ.

* ಬಟ್ಟೆಗಳ ಮೇಲಿನ ತೆರಿಗೆ ಶೇ 12ರಿಂದ ಶೇ 5ಕ್ಕೆ ಇಳಿಕೆ

* ಅರವತ್ತು ವಸ್ತುಗಳ ಮೇಲಿನ ತೆರಿಗೆಯನ್ನು ಶೇ 12ರಿಂದ ಶೇ 5ಕ್ಕೆ ಇಳಿಸಲಾಗಿದೆ- ಇದರಿಂದ ವರ್ತಕರು ಹಾಗೂ ಗ್ರಾಹಕರು ಇಬ್ಬರಿಗೂ ನಿರಾಳ

* ಕರಕುಶಲ ವಸ್ತುಗಳ ಮೇಲಿನ ಜಿಎಸ್ ಟಿ ದರವನ್ನು ಶೇ 12ರಿಂದ ಶೇ 5ಕ್ಕೆ ಇಳಿಸಲಾಗಿದೆ.

* ಮುಂದಿನ ಏಪ್ರಿಲ್ ನಿಂದ ಇ ವೇ ಬಿಲ್ಲಿಂಗ್ ಜಾರಿಗೆ ತರಲು ನಿರ್ಧಾರ

* ಕೆಲವು ದಿನಬಳಕೆ ವಸ್ತುಗಳನ್ನು ಶೇ 28ರಷ್ಟಿದ್ದ ಜಿಎಸ್ ಟಿ ದರದಿಂದ ಹೊರಗಿಡಲಾಗಿದೆ.

* ಹವಾನಿಯಂತ್ರಿತ ರೆಸ್ಟೋರೆಂಟ್ ಗಳ ಜಿಎಸ್ ಟಿ ದರವನ್ನು ಶೇ 12ಕ್ಕೆ ನಿಗದಿ ಮಾಡಲಾಗಿದೆ.

* ಬ್ರ್ಯಾಂಡ್ ರಹಿತವಾದ ಆಯುರ್ವೇದ ಔಷಧಗಳ ಮೇಲಿನ ಜಿಎಸ್ ಟಿ ದರ ಶೇ 12ರಿಂದ ಶೇ 5ಕ್ಕೆ ಇಳಿಸಲು ನಿರ್ಧಾರ

* ಇನ್ ಪುಟ್ ಕ್ರೆಡಿಟ್ ಅನ್ವಯ ಆಗದಂತೆ ಕಾಂಪೋಸಿಷನ್ ಯೋಜನೆ ಅಡಿ ತೆರಿಗೆ ಹಾಕುವ ವ್ಯವಹಾರ ಮಿತಿಯನ್ನು ಎಪ್ಪತ್ತೈದು ಲಕ್ಷದಿಂದ ಒಂದು ಕೋಟಿ ರುಪಾಯಿಗೆ ಏರಿಕೆ ಮಾಡಲಾಗಿದೆ.

* ಇದರಿಂದ ಸಣ್ಣ ಪ್ರಮಾಣದ ವ್ಯವಹಾರಸ್ಥರಿಗೆ ಅನುಕೂಲವಾಗುತ್ತದೆ. ವ್ಯಾಪಾರಿಗಳಿಗೆ ಶೇ 1, ಉತ್ಪಾದಕರಿಗೆ ಶೇ 2 ಮತ್ತು ರೆಸ್ಟೋರೆಂಟ್ ಗಳಿಗೆ ಶೇ 5ರಷ್ಟು ತೆರಿಗೆ ಅನ್ವಯ ಆಗುತ್ತದೆ. ಸೇವಾ ವಲಯದಲ್ಲಿ ರೆಸ್ಟೋರೆಂಟ್ ಗಳಿಗೆ ಮಾತ್ರ ಈ ಅವಕಾಶ ನೀಡಲಾಗಿದೆ.

* ಕಾಂಪೋಸಿಷನ್ ಯೋಜನೆಯನ್ನು ಆರಿಸಿಕೊಳ್ಳುವ ವ್ಯವಹಾರಗಳಿಗೆ ಮೂರು ತಿಂಗಳಿಗೊಮ್ಮೆ ಒಟ್ಟು ವ್ಯವಹಾರದ ಮಾಹಿತಿಯನ್ನು ದಾಖಲಿಸಿದರೆ ಆಯಿತು.

* ಜುಲೈ ತಿಂಗಳ ರಫ್ತು ಮರುಪಾವತಿ ಚೆಕ್ ಅನ್ನು ಅಕ್ಟೋಬರ್ ಹತ್ತರಂದು ಮತ್ತು ಆಗಸ್ಟ್ ತಿಂಗಳ ರಫ್ತಿನ ಮರುಪಾವತಿ ಚೆಕ್ ನ ಪ್ರಕ್ರಿಯೆ ಅಕ್ಟೋಬರ್ ಹದಿನೆಂಟರಂದು ಆರಂಭವಾಗುತ್ತದೆ.

* ಈ ಎಲ್ಲ ಬದಲಾವಣೆಯಿಂದ ಶೇ ತೊಂಬತ್ತರಷ್ಟು ತೆರಿಗೆ ಪಾವತಿದಾರರಿಗೆ ಅನುಕೂಲವಾಗುತ್ತದೆ.

English summary
22nd GST council meeting highlight points are here. There are changes in GST rate for some of the sectors. Here are the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X