ಇಸ್ರೋದ 'ಜಿಎಸ್‌ಎಲ್‌ವಿ ಮಾರ್ಕ್-3’ಗೂ ಬಾಹುಬಲಿಗೂ ಇದೇನಿದು ಸಂಬಂಧ!
ಶ್ರೀಹರಿಕೋಟಾ, ಜೂನ್ 6: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ದೈತ್ಯ 'ಜಿಎಸ್‌ಎಲ್‌ವಿ ಮಾರ್ಕ್-3' ರಾಕೆಟನ್ನು ಯಶಸ್ವೀ ಪರೀಕ್ಷೆಗೊಳಪಡಿಸಿದೆ. ಬೃಹತ್ ರಾಕೆಟ್ ಉಡಾವಣೆ ಯಶಸ್ವಿಯಾಗುತ್ತಿದ್ದಂತೆ ಈ ರಾಕೆಟ್ ನ್ನು ಇತ್ತೀಚೆಗೆ ಜನಪ್ರಿಯಗೊಂಡ ಸಿನಿಮಾ ಬಾಹುಬಲಿ ಜತೆ ಹೋಲಿಸುತ್ತಿದ್ದಾರೆ.
ಆದರೆ ಬಾಹುಬಲಿ ಹೆಸರನ್ನು ಮೊದಲು ಪ್ರಸ್ತಾಪಿಸಿದ್ದು ಜನರಲ್ಲ. ಇಸ್ರೋ ವಿಜ್ಞಾನಿಯೇ ಇಂಥಹದ್ದೊಂದು ಪ್ರಸ್ತಾಪ ಮಾಡಿ ಇಸ್ರೋ ಯೋಜನೆಯನ್ನು ಬಾಹುಬಲಿ ಜತೆ ಹೋಲಿಕೆ ಮಾಡಿದ್ದಾರೆ. ನಂತರ ಜನರೂ ಇದನ್ನು ಬಾಹುಬಲಿ ಜತೆ ಹೋಲಿಕೆ ಮಾಡಲು ಆರಂಭಿಸಿದ್ದಾರೆ.

ಉಡಾವಣೆ ಯಶಸ್ವಿಯಾಗುತ್ತಿದ್ದಂತೆ ಮಾತನಾಡಿದ ಸ್ಪೇಸ್ ಅಪ್ಲಿಕೇಶನ್ ಸೆಂಟರ್ ನಿರ್ದೇಶಕ ತಪನ್ ಮಿಶ್ರಾ "ಇಸ್ರೋ ಬಾಹುಬಲಿಗೆ ಜನ್ಮ ನೀಡಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ" ಎಂದು ಹೇಳಿದ್ದಾರೆ.
ಇನ್ನು ಇದೊಂದು 'ಗೇಮ್ ಚೇಂಜರ್ ರಾಕೆಟ್' ಎದು ಪ್ರೊಪಲ್ಶನ್ ಕಾಂಪ್ಲೆಕ್ಸ್ ನಿರ್ದೇಶಕ ಪಿವಿ ವೆಂಕಿಟ ಕೃಷ್ಣನ್ ಹೇಳಿದ್ದಾರೆ. ರಾಕೆಟಿಗೆ ಹೆಚ್ಚಾಗಿ ಸ್ವದೇಶಿ ಉತ್ಪನ್ನಗಳನ್ನೇ ಬಳಸಲಾಗಿದೆ. ಕೆಲವನ್ನಷ್ಟೆ ವಿದೇಶದಿಂದ ತರಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಯೋಜನೆಯಲ್ಲಿ ಪಾಲ್ಗೊಂಡಿದ್ದ ಇನ್ನೊಬ್ಬರು ಕ್ರಯೋಜನಿಕ್ ವಿಜ್ಞಾನಿ ಉಡಾವಣಾ ವಾಹಕವನ್ನು 'ಸ್ಮಾರ್ಟ್ ಮತ್ತು ವಿಧೇಯ ವಿದ್ಯಾರ್ಥಿ' ಎಂದು ಬಣ್ಣಿಸಿದ್ದಾರೆ.












Click it and Unblock the Notifications