'ನಿಮ್ಮ ಹೆಂಡತಿ, ಮಗನಿಗೆ ಗುಂಡಿಕ್ಕಿದ್ದೇನೆ, ಹೋಗಿ ನೋಡಿ' ಎಂದ ಸೆಕ್ಯುರಿಟಿ ಗಾರ್ಡ್!
ಗುರುಗ್ರಾಮ, ಅಕ್ಟೋಬರ್ 14: ಜಿಲ್ಲಾ ನ್ಯಾಯಾಧೀಶರೊಬ್ಬರ ಅಧಿಕೃತ ಗನ್‌ಮ್ಯಾನ್ ಅವರ ಪತ್ನಿ ಮತ್ತು ಮಗನಿಗೆ ಜನನಿಬಿಡ ಸ್ಥಳದಲ್ಲಿಯೇ ಗುಂಡಿಕ್ಕಿದ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಕೃಷನ್ ಕಾಂತ್ ಅವರ ಪತ್ನಿ (38) ಆಸ್ಪತ್ರೆಯಲ್ಲಿ ಭಾನುವಾರ ಕೊನೆಯುಸಿರೆಳೆದರು. ಅವರ ಮಗ ಧ್ರುವ (17) ಪರಿಸ್ಥಿತಿ ಚಿಂತಾಜನಕವಾಗಿದೆ.
ನಗರದ ಅರ್ಕೇಡಿಯಾ ಮಾರುಕಟ್ಟೆಯಲ್ಲಿ ಮಧ್ಯಾಹ್ನ ಸುಮಾರು 3.30 ಗಂಟೆ ವೇಳೆಗೆ ಈ ಘಟನೆ ನಡೆದಿದೆ.
ಮಾರುಕಟ್ಟೆಯ ಜನನಿಬಿಡ ಪ್ರದೇಶದಲ್ಲಿ ಏಕಾಏಕಿ ಶೂಟ್ ಮಾಡಿದ ಮಾಡಿದ ಸೆಕ್ಯುರಿಟಿ ಗಾರ್ಡ್ ಮಹಿಪಾಲ್, ಸುಮಾರು ಒಂದೂ ಮುಕ್ಕಾಲು ಗಂಟೆ ಬಳಿಕ ನ್ಯಾಯಾಧೀಶರಿಗೆ ಕರೆ ಮಾಡಿ, ನಿಮ್ಮ ಹೆಂಡತಿ ಮತ್ತು ಮಗನಿಗೆ ಗುಂಡು ಹೊಡೆದಿದ್ದೇನೆ. ಹೋಗಿ ನೋಡಿ ಎಂದು ಹೇಳಿದ್ದಾನೆ. ಕೆಲ ಹೊತ್ತಿನ ಬಳಿಕ ಆತನನ್ನು ಬಂಧಿಸಲಾಯಿತು.
ತನ್ನ ಸರ್ವೀಸ್ ರಿವಾಲ್ವರ್ ತೆಗೆದ ಮಹಿಪಾಲ್, ರಿತು ಅವರ ಎದೆ ಮತ್ತು ಹೊಟ್ಟೆಗೆ ಎರಡು ಗುಂಡು ಹಾರಿಸಿದರೆ, ಧ್ರುವನ ಭುಜಕ್ಕೆ ಒಂದು ಮತ್ತು ತಲೆಗೆ ಎರಡು ಗುಂಡು ಹಾರಿಸಿದ್ದಾನೆ.
ತೀವ್ರವಾಗಿ ಗಾಯಗೊಂಡಿದ್ದ ರಿತು ಮೃತಪಟ್ಟರೆ, ಧ್ರುವ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.

ಖುಷಿಯಿಂದ ಹೇಳಿದ್ದು!
ಶನಿವಾರ ಸಂಜೆ 4.45ರ ವೇಳೆಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಕೃಷನ್ ಕಾಂತ್ ಅವರು ಗುರುಗ್ರಾಮ ಜಿಲ್ಲಾ ಕೋರ್ಟ್‌ನಲ್ಲಿ ಮತ್ತೊಬ್ಬ ನ್ಯಾಯಾಧೀಶರ ಜತೆ ಮಾತುಕತೆ ನಡೆಸುತ್ತಿದ್ದರು. ಆಗ ಅವರ ಸೆಲ್ ಫೋನ್ ರಿಂಗಣಿಸಿತು. ಅದು ಅವರ ಭದ್ರತೆಗೆ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿಯ ಕರೆ. ಏನಿರಬಹುದು ಎಂದು ಕಿವಿಗಿಟ್ಟರು. ಆ ಕಡೆಯಿಂದ ಕೇಳಿಸಿದ್ದು ಉತ್ಸಾಹ, ಖುಷಿ ಬೆರೆತ ಧ್ವನಿ- 'ನಿಮ್ಮ ಹೆಂಡತಿ ಮತ್ತು ಮಗನಿಗೆ ನಾನು ಗುಂಡು ಹಾರಿಸಿದ್ದೇನೆ. ಹೋಗಿ ಅವರನ್ನು ನೋಡಿ' ಎಂದು.
| Array |
ಎಲ್ಲರೆದುರೇ ಗುಂಡು ಹಾರಿಸಿದ
ಗುರುಗ್ರಾಮದ ಸೆಕ್ಟರ್ 49ರ ಆರ್ಕೇಡಿಯಾ ಮಾರುಕಟ್ಟೆಗೆ ನ್ಯಾಯಾಧೀಶರ ಪತ್ನಿ ಮತ್ತು ಮಗ ಹೊಂಡಾ ಸಿಟಿ ಕಾರಿನಲ್ಲಿ ಗನ್‌ಮ್ಯಾನ್ ಮಹಿಪಾಲ್ ಜತೆ ಬಂದಿದ್ದರು. ಆದರೆ ಅಲ್ಲಿ, ಮಹಿಪಾಲ್ ಅನೇಕ ಪ್ರತ್ಯಕ್ಷದರ್ಶಿಗಳ ಮುಂದೆಯೇ ಅವರ ಮೇಲೆ ಗುಂಡು ಹಾರಿಸಿದ.
ಕೂಡಲೇ ನ್ಯಾಯಾಧೀಶರ ಮಗನನ್ನು ಕಾರ್‌ನ ಒಳಗೆ ಎಳೆದು ಹಾಕಲು ಪ್ರಯತ್ನಿಸಿದ. ಆದರೆ, ಆತನಿಂದ ಅದು ಸಾಧ್ಯವಾಗದೇ ಇದ್ದಾಗ ಆತನನ್ನು ರಸ್ತೆಯಲ್ಲಿಯೇ ಬಿಟ್ಟು ಕಾರ್ ಚಲಾಯಿಸಿಕೊಂಡು ಅಲ್ಲಿಂದ ತೆರಳಿದ. ಇದನ್ನು ಪ್ರತ್ಯಕ್ಷದರ್ಶಿಗಳು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡರು.

ಜನರು ನೆರವಾದರು
ಮಹಿಪಾಲ್‌ನ ಕೈಯಲ್ಲಿ ರಿವಾಲ್ವರ್ ಇದ್ದಿದ್ದರಿಂದ ಆತ ಅಲ್ಲಿಇರುವವರೆಗೂ ಆತನ ಸಹಾಯಕ್ಕೆ ಮುಂದಾಗುವ ಧೈರ್ಯವನ್ನು ಯಾರೂ ಮಾಡಿರಲಿಲ್ಲ. ಎಲ್ಲರೂ ಹಠಾತ್ತಾಗಿ ನಡೆದ ಘಟನೆಯಿಂದ ಭಯಭೀತರಾಗಿದ್ದರು. ನ್ಯಾಯಾಧೀಶರ ಮಗ ಧ್ರುವನ ತಲೆ ಹಾಗೂ ಭುಜಕ್ಕೆ ಒಟ್ಟು ಮೂರು ಗುಂಡುಗಳನ್ನು ಹಾರಿಸಿದ್ದರಿಂದ ವಿಪರೀತ ರಕ್ತಸ್ರಾವವಾಗುತ್ತಿತ್ತು. ಮಹಿಪಾಲ್ ತೆರಳಿದ ಬಳಿಕ ಗಾಯಕ್ಕೆ ಬಟ್ಟೆ ಕಟ್ಟಿ ರಕ್ತಸ್ತಾವ ತಡೆಯಲು ಪ್ರಯತ್ನಿಸಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಅವರನ್ನು ಆಸ್ಪತ್ರೆಗೆ ಸಾಗಿಸಿದರು.
| Array |
ಸಹಾಯ ಮಾಡದ ಗೆಳೆಯ
ಗುಂಡು ಹಾರಿಸಿ ಕಾರ್‌ನಲ್ಲಿ ಹೊರಟ ಮಹಿಪಾಲ್ ಸಿಂಗ್, ತನ್ನ ತಾಯಿ ಸೇರಿದಂತೆ ಅನೇಕರಿಗೆ ಫೋನ್ ಮಾಡಿ ತನ್ನ ಕೃತ್ಯದ ಬಗ್ಗೆ ತಿಳಿಸಿದ್ದಾನೆ. ಬಳಿಕ ಸಮೀಪದ ಪೊಲೀಸ್ ಸ್ಟೇಷನ್ ಬಳಿಗೆ ಹೋಗಿದ್ದಾನೆ. ಅಲ್ಲಿಂದ ಮತ್ತೆ ತಪ್ಪಿಸಿಕೊಂಡು ಮುಂದೆ ಸಾಗಿದ್ದಾನೆ.
ಸಮೀಪದ ಇಸ್ಲಾಂಪುರಕ್ಕೆ ತೆರಳಿ ತನ್ನ ಸ್ನೇಹಿತ ಕುಕು ಹತ್ತಿರ ಜಡ್ಜ್ ಕುಟುಂಬಕ್ಕೆ ಅಪಘಾತವಾಗಿದ್ದು, ನೆರವು ನೀಡುವಂತೆ ಕೋರಿದ್ದಾನೆ. ಸ್ವಲ್ಪ ಹೊತ್ತಿನಲ್ಲೇ ತಾನೇ ಗುಂಡಿಕ್ಕಿದ್ದಾಗಿ ಹೇಳಿದ್ದಾನೆ. ಇದರಿಂದ ಸಹಾಯ ಮಾಡಲು ಕುಕು ನಿರಾಕರಿಸಿದ್ದಾನೆ. ಆತ ಅಲ್ಲಿಂದ ಹೊರಡುತ್ತಿದ್ದಂತೆಯೇ ಕುಕು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ರಸ್ತೆಯಲ್ಲಿ ಕಾರನ್ನು ಹಲವು ಆಟೊಗಳಿಗೆ ಗುದ್ದಿಸಿಕೊಂಡು ಫರೀದಾಬಾದ್‌ನತ್ತ ಹೊರಟಿದ್ದಾನೆ. ಆಗಲೇ ಆತ ನ್ಯಾಯಾಧೀಶರಿಗೆ ಕರೆ ಮಾಡಿದ್ದು. ಸಂಜೆ 5.30ರ ವೇಳೆಗೆ ಆತನನ್ನು ಬಂಧಿಸಲಾಯಿತು.
|
ಗುಂಡಿಕ್ಕಲು ಕಾರಣ ತಿಳಿದಿಲ್ಲ
ಮಹಿಪಾಲ್ ಸಿಂಗ್ ಎರಡು ವರ್ಷದ ಹಿಂದೆ ನ್ಯಾಯಾಧೀಶರ ಗನ್ ಮ್ಯಾನ್ ಕೆಲಸಕ್ಕೆ ನಿಯೋಜನೆಗೊಂಡಿದ್ದ. ಮಹೇಂದ್ರಗಡ ಎಂಬ ಊರಿನ ಆತನ ಪತ್ನಿ ಶಿಕ್ಷಕಿ. ಆತನಿಗೆ ಇಬ್ಬರು ಮಕ್ಕಳಿದ್ದಾರೆ. ಖಿನ್ನತೆ ಮತ್ತು ಮಾನಸಿಕ ಸಮಸ್ಯೆಯಿಂದ ಆತ ಈ ಕೃತ್ಯ ಕಾಡಿರಬಹುದು ಎನ್ನಲಾಗಿದೆ. ವಿಚಾರಣೆ ವೇಳೆ ಆತ ಒಮ್ಮೊಮ್ಮೆ ವ್ಯಗ್ರನಾಗಿ ವರ್ತಿಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯಾಯಾಧೀಶರ ಕುಟುಂಬದ ಮೇಲೆ ಕೆಲವು ಕಾರಣಗಳಿಂದ ಆತನಿಗೆ ಕೋಪವಿತ್ತು ಎಂದೂ ಹೇಳಲಾಗಿದೆ. ರಿತು ಅವರಿಗೆ ಗುಂಡು ಹಾರಿಸಿದ ಬಳಿಕ ಅವರನ್ನು ಹಲವು ಬಾರಿ ಕಾಲಿನಿಂದ ಒದ್ದಿದ್ದು ವಿಡಿಯೋಗಳಲ್ಲಿ ದಾಖಲಾಗಿದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications