ಮನದನ್ನೆಯ ಆಸೆ ಪೂರೈಸಲು ಆತ ಬಂದಿದ್ದು ಹೆಲಿಕಾಪ್ಟರ್ ನಲ್ಲಿ

Posted By:
Subscribe to Oneindia Kannada

ನವದೆಹಲಿ, ನವೆಂಬರ್ 16: ತನ್ನ ಭಾವಿ ಪತ್ನಿಯ ಮನ ಸಂತೃಪ್ತಿಗಾಗಿ ವರ ಮಹಾಶಯ ಮಾಡಿರುವ ಕೆಲಸ ಇದು. ಆಕೆಗೆ ತನ್ನ ಮದುವೆಯಾಗುವ ಹುಡುಗ ಹೆಲಿಕಾಪ್ಟರ್ ನಲ್ಲಿ ಬರಬೇಕು ಅಂತ ಆಸೆಯಿತ್ತು. ಅದೇ ರೀತಿ ಮದುವೆ ನಿಗದಿಯಾಗಿದ್ದ ಉತ್ತರಪ್ರದೇಶದ ಹಾಪುರ್ ಗೆ ಆತ ಹೆಲಿಕಾಪ್ಟರ್ ನಲ್ಲೇ ಬಂದಿದ್ದಾನೆ.

ಆನೆ ಜತೆಗೆ ಬಾಹುಬಲಿ ಸ್ಟಂಟ್, ಬೆನ್ನ ಮೂಳೆಗೆ ತಂದಿತು ಕುತ್ತು

ಜೈಪುರ್ ಮೂಲದ ಶಾರುಕ್ ಖಾನ್ ಗೆ ತನ್ನ ಮದುವೆ ವಿಶಿಷ್ಟವಾಗಿ ಆಗಬೇಕು ಅಂತಿತ್ತು. ಆತ ಮದುವೆಯಾದ ಹುಡುಗಿ, ಬಡ ಕುಟುಂಬದ ಹಿನ್ನೆಲೆಯ ಬಿಜ್ನೋರ್ ತಾಲೂಕಿನ ತಂಜಿಮ್ ಆಶಯವೂ ಅದೇ ಆಗಿತ್ತು. ಅಂತೂ ಆಕೆ ಮದುವೆ ಸಂದರ್ಭದಲ್ಲಿ ವೈಭವದ ಆಸೆಯು ಈಡೇರಿದೆ. ಮದುವೆ ನಿಗದಿಯಾಗಿದ್ದ ಸ್ಥಳದ ಸಮೀಪವೇ ಹೆಲಿಕಾಪ್ಟರ್ ಇಳಿಯುವುದಕ್ಕೆ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ಮದುವೆ ಆದ ನಂತರ ನವವಿವಿವಾಹಿತರು ರೋಟಾರ್ ಕ್ರಾಫ್ಟ್ ನಲ್ಲೇ ತೆರಳಿದ್ದಾರೆ.

Groom arrives in helicopter to take bride home

ನವವಿವಾಹಿತರನ್ನು ಬೀಳ್ಕೊಡುವುದನ್ನು ನೋಡಲು ಮದುವೆಯ ಸ್ಥಳಕ್ಕೆ ತಂಡೋಪತಂಡವಾಗಿ ಜನ ಸೇರಿದ್ದಾರೆ. ಈ ಮಧ್ಯೆ ಎಲ್ಲವೂ ಸರಾಗವಾಗಿ ನಡೆಯುವಂತೆ ಉತ್ತರಪ್ರದೇಶದ ಆಡಳಿತ ಕೂಡ ಸಾಕಷ್ಟು ಶ್ರಮ ವಹಿಸಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾಕಷ್ಟು ಪೊಲೀಸರನ್ನು ಕೂಡ ನಿಯೋಜಿಸಲಾಗಿತ್ತು.

ಅಂದಹಾಗೆ, ಈ ರೀತಿ ವರ ಮಹಾಶಯ ಹೆಲಿಕಾಪ್ಟರ್ ನಲ್ಲಿ ಬರುತ್ತಿರುವ ಘಟನೆ ಇದೇ ಮೊದಲೇನಲ್ಲ. ಈ ವರ್ಷದ ಅಕ್ಟೋಬರ್ ನಲ್ಲಿ ತನ್ನ ಮದುವೆಗೆ ಜೆಟ್ ನಲ್ಲಿ ಬಂದವರು ಸಹ ಇದ್ದಾರೆ. ಆ ರೀತಿ ಸುದ್ದಿ ಮಾಡಿದ್ದು ಜಮ್ಮು ಮೂಲದ ವರ. ತನ್ನ ಮನೆಗೆ ಪತ್ನಿಯನ್ನು ಹೆಲಿಕಾಪ್ಟರ್ ನಲ್ಲೇ ಕರೆದೊಯ್ದಿದ್ದ. ಈ ರೀತಿ ಮದುವೆ ಆಗುವುದು ಪಾಶ್ಚಾತ್ಯ ದೇಶಗಳಲ್ಲಿ ತುಂಬ ಸಾಮಾನ್ಯ. ಇತ್ತೀಚೆಗೆ ಭಾರತದಲ್ಲೂ ಶುರುವಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A groom from Jaipur fulfilled his bride's wish by arriving in a helicopter at their wedding. The wedding took place in Hapur, Uttar Pradesh.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ