Breaking: ಜಮ್ಮು ಕಾಶ್ಮೀರದ ಶೋಪಿಯಾನ್‌ನಲ್ಲಿ ಗ್ರೇನೆಡ್ ದಾಳಿ; ಇಬ್ಬರು ಸಾವು

ಶ್ರೀನಗರ, ಅ.18: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಕಾಶ್ಮೀರಿ ಪಂಡಿತನೊಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದ ಕೆಲವು ದಿನಗಳ ಬೆನ್ನಲ್ಲೆ, ಜಿಲ್ಲೆಯ ಹರ್ಮೆನ್ ಪ್ರದೇಶದಲ್ಲಿ ಗ್ರೆನೇಡ್ ದಾಳಿಯಲ್ಲಿ ಉತ್ತರ ಪ್ರದೇಶದ ಕನೌಜ್‌ನ ಇಬ್ಬರು ಸಾವನ್ನಪ್ಪಿದ್ದಾರೆ.

'ಭಯೋತ್ಪಾದಕರು ಶೋಪಿಯಾನ್‌ನಲ್ಲಿ ಹ್ಯಾಂಡ್ ಗ್ರೆನೇಡ್ ದಾಳಿ ನಡೆಸಿದ್ದು, ಘಟನೆಯಲ್ಲಿ ಉತ್ತರ ಪ್ರದೇಶದ ಇಬ್ಬರು ಕಾರ್ಮಿಕರು, ಅಂದರೆ ಯುಪಿಯ ಕನೂಜ್ ನಿವಾಸಿಗಳಾದ ಮೊನಿಶ್ ಕುಮಾರ್ ಮತ್ತು ರಾಮ್ ಸಾಗರ್ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಘಟನಾ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದಾರೆ" ಎಂದು ಕಾಶ್ಮೀರ ವಲಯ ಪೊಲೀಸರು ಮಂಗಳವಾರ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ಗ್ರೆನೇಡ್ ದಾಳಿ ನಡೆಸಿದ್ದ ಭಯೋತ್ಪಾದಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Grenade Attack in Jammu and Kashmirs Shopian; 2 killed

"ನಿಷೇಧಿತ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕ ಲೀಟಿ ಇಮ್ರಾನ್ ಬಶೀರ್ ಗನಿ ಎಂಬುವವನನ್ನು ಶೋಪಿಯಾನ್‌ನ ಹರ್ಮೆನ್‌ನಲ್ಲಿ ಗ್ರೆನೇಡ್ ದಾಳಿ ಮಾಡಿದ ಕಾರಣ ಶೋಪಿಯಾನ್ ಪೊಲೀಸರು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ಮತ್ತು ಶೋಧಕಾರ್ಯ ನಡೆಯುತ್ತಿವೆ" ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರೆನೇಡ್ ದಾಳಿಯ ವೇಳೆ ಸಂತ್ರಸ್ತರು ನಿದ್ದೆಯಲ್ಲಿದ್ದರು.

ಅಕ್ಟೋಬರ್ 15 ರಂದು ಈ ದಕ್ಷಿಣ ಕಾಶ್ಮೀರ ಜಿಲ್ಲೆಯ ಚೌದರಿ ಗುಂಡ್‌ನಲ್ಲಿ ಪುರನ್ ಕ್ರಿಶನ್ ಭಟ್ ಎಂಬ ಕಾಶ್ಮೀರಿ ಪಂಡಿತರು ಅವರ ಮನೆಯ ಸಮೀಪದಲ್ಲಿಯೇ ಗುಂಡಿನ ದಾಳಿಗೆ ಬಲಿಯಾಗಿದ್ದರು.

"ಶೋಪಿಯಾನ್‌ನ ಚೌಧರಿ ಗುಂಡ್‌ನಲ್ಲಿ ಇನ್ನೊಬ್ಬ ಕಾಶ್ಮೀರಿ ಪಂಡಿತರನ್ನು ಕೊಲ್ಲಲಾಗಿದೆ. ಅಕ್ಟೋಬರ್ 13 ರಂದು ನಾವು ಟ್ವೀಟ್ ಮಾಡಿದರೂ ಇಲ್ಲಿ ಏನೂ ಬದಲಾಗಿಲ್ಲ" ಎಂದು ಗೃಹ ಸಚಿವ ಅಮಿತ್ ಶಾ ಅವರನ್ನು ಉಲ್ಲೇಖಿಸಿ ಪಂಡಿತರನ್ನು ಪ್ರತಿನಿಧಿಸುವ ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿ (ಕೆಪಿಎಸ್‌ಎಸ್) ತನ್ನ ಅಧಿಕೃತ ಖಾತೆಯ ಟ್ವೀಟ್‌ನಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+