ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಮೋದಿ ಮುಂದೆ ಎಂಎಸ್ಎಸ್ ಮರಿ ಮೊಮ್ಮಕ್ಕಳ ಗಾಯನ

By Mahesh
|
Google Oneindia Kannada News

ನವದೆಹಲಿ, ಸೆ. 20: ಭಾರತರತ್ನ ಎಂ.ಎಸ್. ಸುಬ್ಬುಲಕ್ಷ್ಮೀ ಅವರ ಮರಿ ಮೊಮ್ಮಕ್ಕಳಾದ ಎಸ್. ಐಶ್ವರ್ಯ ಮತ್ತು ಎಸ್. ಸೌಂದರ್ಯ ಅವರು ಮಂಗಳವಾರದಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಐಶ್ವರ್ಯ ಮತ್ತು ಸೌಂದರ್ಯ ಅವರ ಪಾಲಕರಾದ ವಿ. ಶ್ರೀನಿವಾಸನ್ ಮತ್ತು ಗೀತಾ ಶ್ರೀನಿವಾಸನ್ ಅವರು ಉಪಸ್ಥಿತರಿದ್ದರು.

Great grand-daughters of Bharat Ratna M.S. Subbulakshmi meets PM

ಕುಮಾರಿ ಐಶ್ವರ್ಯ ಮತ್ತು ಕುಮಾರಿ ಸೌಂದರ್ಯ ಅವರು "ಮೈಥ್ರೀಮ್ ಭಜಥಾ."ವನ್ನು ಸಂಕ್ಷಿಪ್ತವಾಗಿ ಗಾಯನ ಮಾಡಿದರು.. ಇದು ಒಂದು ಸ್ತುತಿಯಾಗಿದ್ದು, ಇದನ್ನು 1966 ರ ಅಕ್ಟೋಬರ್ ನಲ್ಲಿ ಎಂ.ಎಸ್.ಸುಬ್ಬುಲಕ್ಷ್ಮೀ ಅವರು ಸ್ವತಃ ವಿಶ್ವಸಂಸ್ಥೆಯಲ್ಲಿ ಹಾಡಿದ್ದರು. ಈ ಸ್ತುತಿಯನ್ನು ಕಂಚಿಯ ಆಚಾರ್ಯ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಸಂಸ್ಕೃತದಲ್ಲಿ ರಚಿಸಿದ್ದಾರೆ.

ಇದು ವಿಶ್ವಶಾಂತಿ ಮತ್ತು ಸಾರ್ವತ್ರಿಕ ಗೆಳೆತನದ ಗೀತೆಯಾಗಿದ್ದು, ಇದನ್ನು ಎಂ.ಎಸ್. ಸುಬ್ಬುಲಕ್ಷ್ಮೀ ಅವರು, ವಿಶ್ವಸಂಸ್ಥೆಯ ಸಂಗೀತ ಕಛೇರಿಯ ನಂತರದ ತಮ್ಮ ಹಲವು ಸಂಗೀತ ಕಛೇರಿಗಳಲ್ಲಿ ಹಾಡಿದ್ದರು.

ಇದು "ಶ್ರೇಯೋ ಭೂಯಾತ್ ಸಕಲ ಜನನಂ" - ಎಲ್ಲ ಮಾನವ ಕುಲಕ್ಕೂ ಶ್ರೇಯಸ್ಸು ಮತ್ತು ಸಂತೋಷ ಲಭಿಸಲಿ ಎಂಬ ಪದಗಳೊಂದಿಗೆ ಇದು ಅಂತ್ಯಗೊಳ್ಳುತ್ತದೆ.ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದ ಅವರ ಮರಿಮೊಮ್ಮಕ್ಕಳು ಇದೇ ಹಾಡನ್ನು ಪ್ರಸ್ತುತಪಡಿಸಿದ್ದಾರೆ. ಈ ಹಾಡಿಗೆ ಮೋದಿ ತಲೆದೂಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತರತ್ನ ಎಂ.ಎಸ್. ಸುಬ್ಬುಲಕ್ಷ್ಮೀ ಅವರ ಹಾಡುಗಾರಿಕೆ

English summary
S Aishwarya and S Saundarya, great grand-daughters of Bharat Ratna M.S. Subbulakshmi, called on Prime Minister Narendra Modi, along with their parents, V Shrinivasan and Geetha Shrinivasan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X