Fact Check: ಕೊರೊನಾ ಸೋಂಕಿತರ ಕಣ್ಗಾವಲಿಗೆ ಆರೋಗ್ಯ ಸೇತು App ಬಳಕೆ ?

ನವದೆಹಲಿ, ಏಪ್ರಿಲ್ 7: ಕೊರೊನಾ ಸೋಂಕಿತರ ಮೇಲೆ ಕಣ್ಗಾವಲಿಡಲು ಸರ್ಕಾರವು 'ಆರೋಗ್ಯ ಸೇತು' ಅಪ್ಲಿಕೇಷನ್ ಬಳಕೆ ಮಾಡುತ್ತಿದೆ ಎನ್ನುವುದು ಸುಳ್ಳು ಸುದ್ದಿ.

ಆರೋಗ್ಯ ಸೇತು ಅಪ್ಲಿಕೇಷನ್‌ನಿಂದ ಕೊರೊನಾ ಸೋಂಕಿತರ ಜೊತೆ ನಿಕಟ ಸಂಪರ್ಕ ಹೊಂದಿದ್ದರೆ ಅದು ಇಲಾಖೆ ಗಮನಕ್ಕೆ ಬರುತ್ತದೆ.

ಈ ಅಪ್ಲಿಕೇಷನ್ ಜನರಿಗೆ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುತ್ತದೆ. ಈ ಅಪ್ಲಿಕೇಷನ್ ಹೊಸ ಪ್ರಕರಣಗಳನ್ನು ಕಂಡು ಹಿಡಿಯುತ್ತದೆಯೇ ಹೊರತು ಇರುವ ರೋಗಿಗಳ ಮೇಲೆ ಕಣ್ಗಾವಲಿಡುವುದಿಲ್ಲ.

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕೊವಿಡ್ 19 ರೋಗಿಗಳ ಮೇಲೆ ಈ ಅಪ್ಲಿಕೇಷನ್‌ನಿಂದ ಕಣ್ಗಾವಲಿಡಲಾಗುತ್ತಿದೆ ಎನ್ನುವ ಸುಳ್ಳು ಸುದ್ದಿ ಹರಿದಾಡುತ್ತಿದೆ.

Govt Terms Allegations Against Arogya Setu App As Baseless

ಸರ್ಕಾರವು ಈ ಸುದ್ದಿಯನ್ನು ತಳ್ಳಿ ಹಾಕಿದೆ. ಈ ಆರೋಪ ಆಧಾರರಹಿತ, ಈ ಅಪ್ಲಿಕೇಷನ್ ಯೂಸರ್ ಲೊಕೇಷನ್‌ನ್ನು ಲಿಂಕ್ ಮಾಡುವುದಿಲ್ಲ. ಹಾಗೆಯೇ ಯಾವುದೇ ವ್ಯಕ್ತಿಯ ವೈಯಕ್ತಿಕ ಮಾಹಿತಿಯನ್ನೂ ಕೂಡ ಇದು ಪಡೆಯುವುದಿಲ್ಲ.

ಒಂದೊಮ್ಮೆ ನಿಮ್ಮ ಮನೆಯ ಬಳಿ ಯಾರಾದರೂ ಸೋಂಕಿತ ವ್ಯಕ್ತಿ ಇದ್ದರೆ ನೀವು ಆ ಅಪ್ಲಿಕೇಷನ್ ಮೂಲಕ ಅಲರ್ಟ್ ನೀಡಬಹುದಾಗಿದೆ. ಅಥವಾ ಆ ಅಪ್ಲಿಕೇಷನ್ ನಿಮಗೆ ಅಲರ್ಟ್ ನೀಡುತ್ತದೆ.

ಡಿಜಿಟಲ್ ಇಂಡಿಯಾ ಯೋಜನೆಯಡಿ ಈ ಅಪ್ಲಿಕೇಷನ್ ಅಭಿವೃದ್ಧಿಪಡಿಸಲಾಗಿದೆ. ಕೊರೊನಾ ವೈರಸ್‌ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಇದೊಂದು ಮಾರ್ಗವಾಗಿದೆ.

ಓರ್ವ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಾಗ ಆಸ್ಪತ್ರೆಯಲ್ಲಿ ಅವರ ಮೊಬೈಲ್ ನಂಬರ್ ಪಡೆದು ತಕ್ಷಣವೇ ಈ ಅಪ್ಲಿಕೇಷನ್‌ನಲ್ಲಿ ನೋಂದಣಿ ಮಾಡಲಾಗುತ್ತದೆ.

ಕೊರೊನಾ ಸೋಂಕು ಹರಡದಿರಲು ಸರ್ಕಾರವು ತೆಗೆದುಕೊಂಡ ಒಂದು ಕ್ರಮ ಇದಾಗಿದೆ. ಅಪ್ಲಿಕೇಷನ್ ಬಳಕೆ ದಾರರ ಪರವಾಗಿಯೇ ಸರ್ಕಾರ ಕೆಲಸ ಮಾಡುತ್ತದೆ. ಅದರಿಂದ ಯಾವುದೇ ತೊಂದರೆಯಿಲ್ಲ. ಈ ಅಪ್ಲಿಕೇಷನ್ 11 ಭಾಷೆಯಲ್ಲಿ ಲಭ್ಯವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+