ದೇಶದಲ್ಲಿ 21 ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳ ಸ್ಥಾಪನೆಗೆ ಸರ್ಕಾರದ ಅನುಮೋದನೆ
ನವದೆಹಲಿ, ಡಿ. 25: ದೇಶಾದ್ಯಂತ 21 ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳ ಸ್ಥಾಪನೆಗೆ ಭಾರತ ಸರ್ಕಾರವು 'ತಾತ್ವಿಕ ಅನುಮೋದನೆ' ನೀಡಿದೆ.
ದೇಶದಲ್ಲಿ ಇದುವರೆಗೆ ಹತ್ತು ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳು ಕಾರ್ಯಾಚರಣೆ ಮಾಡುತ್ತಿದ್ದು, ಗೋವಾದ ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಈ ವರ್ಷದ ಡಿಸೆಂಬರ್ 11 ರಂದು ಉದ್ಘಾಟಿಸಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಲೆಫ್ಟಿನೆಂಟ್ ಜನರಲ್ (ನಿವೃತ್ತ) ವಿಕೆ ಸಿಂಗ್ ರಾಜ್ಯಸಭೆಯಲ್ಲಿ ಲಿಖಿತವಾಗಿ ತಿಳಿಸಿದ್ದಾರೆ.
ಗೋವಾದ ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೊರತು ಪಡಿಸಿ 2018 ರಿಂದ, ಏಳು ವಿಮಾನ ನಿಲ್ದಾಣಗಳು, ಪಾಕ್ಯೊಂಗ್ (ಸಿಕ್ಕಿಂ), ಕಣ್ಣೂರು (ಕೇರಳ), ಕಲಬುರಗಿ (ಕರ್ನಾಟಕ), ಸಿಂಧುದುರ್ಗ (ಮಹಾರಾಷ್ಟ್ರ), ಕುಶಿನಗರ (ಉತ್ತರ ಪ್ರದೇಶ), ಓರ್ವಕಲ್ (ಆಂಧ್ರಪ್ರದೇಶ) ಮತ್ತು ದೋನಿ ಪೊಲೊ (ಅರುಣಾಚಲ ಪ್ರದೇಶ) ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿವೆ.

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು 2017-18ರಲ್ಲಿ 2504.38 ಕೋಟಿ ರೂಪಾಯಿ, 2018-19ರಲ್ಲಿ 4297.44 ಕೋಟಿ ರೂ. 2019-20ರಲ್ಲಿ 4713.49 ಕೋಟಿ ರೂ, 2020-21ರಲ್ಲಿ 4, 350 ಕೋಟಿ ಮತ್ತು 2021-22ರಲ್ಲಿ 3724.34 ಕೋಟಿ ರೂಪಾಯಿಗಳನ್ನು ಈ ರೂ. ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳ ನಿರ್ಮಾಣಕ್ಕಾಗಿ ವೆಚ್ಚ ಮಾಡಿದೆ.

ಕೋವಿಡ್ ಮುಂಚಿನ ಅವಧಿಯ 2018-19 ರ ವರ್ಷದಲ್ಲಿ, ದೇಶಾದ್ಯಂತದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆಯು ಹಿಂದಿನ ವರ್ಷಕ್ಕೆ ಅಂದರೆ 2017-18ಕ್ಕೆ ಹೋಲಿಸಿದರೆ 11.6% ರಷ್ಟು ಹೆಚ್ಚಾಗಿದೆ. ಸಾಂಕ್ರಾಮಿಕ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಆದರೂ, ಕೋವಿಡ್ ನಂತರ, 2021-22 ವರ್ಷದಲ್ಲಿ 63.7% ರಷ್ಟು ಹೆಚ್ಚಳ ಕಂಡು ಬಂದಿದೆ ಎಂದು ಸಚಿವ ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಲೆಫ್ಟಿನೆಂಟ್ ಜನರಲ್ (ನಿವೃತ್ತ) ವಿಕೆ ಸಿಂಗ್ ತಮ್ಮ ಉತ್ತರದಲ್ಲಿ ಬರೆದಿದ್ದಾರೆ.












Click it and Unblock the Notifications