• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೋನಿಯಾ ಗಾಂಧಿ ಇಟ್ಟ ಅಸಾಧಾರಣ ಚದುರಂಗದ ನಡೆಗೆ ಅಮಿತ್ ಶಾ ಚೆಕ್ ಮೇಟ್

|

ಇದುವರೆಗಿನ ದೇಶದ ರಾಜಕೀಯದ ಇತಿಹಾಸದ ಪುಟಗಳನ್ನು ತೆರವಿದಾಗ, ಮಹಾರಾಷ್ಟದಲ್ಲಿನ ಸದ್ಯದ ಬೆಳವಣಿಗೆಗಳು ಹಲವು ವಿಶೇಷತೆಗಳನ್ನು ಹೊಂದಿದೆ. ಅದಕ್ಕೆ, ಕಾರಣ, ಯಾವ ಪಕ್ಷಕ್ಕೂ ಸ್ಪಷ್ಟವಾದ ಜನಾದೇಶವನ್ನು ಮತದಾರ ನೀಡದೇ ಇದ್ದದ್ದು.

ಬಿಜೆಪಿ ಜೊತೆಗಿನ ಚುನಾವಣಾಪೂರ್ವ ಮೈತ್ರಿಯನ್ನು ಧಿಕ್ಕರಿಸಿ ಶಿವಸೇನೆ ಹೊಸ ಹೆಜ್ಜೆಯನ್ನು ಇಟ್ಟಿದೆ. ಇದು, ಶಿವಸೇನೆಗೆ ಅಧಿಕಾರದ ಲಾಲಸೆ ಎನ್ನುವುದಕ್ಕಿಂತ ಹೆಚ್ಚಾಗಿ, ತನ್ನನ್ನು ಬಿಟ್ಟು ಶಿವಸೇನೆ ಎಲ್ಲಿ ಹೋದೀತು ಎನ್ನುವ ಅಮಿತ್ ಶಾ ಅವರ ಓವರ್ ಕಾನ್ಫಿಡೆನ್ಸಿಗೆ ನೀಡಿದ ಕೊಡಲಿ ಪೆಟ್ಟು ಇದಾಗಿತ್ತು.

ಇನ್ನೂ ಕಾಲ ಮಿಂಚಿಲ್ಲ: 5ಕ್ಷೇತ್ರದಲ್ಲಿ ಬಿಜೆಪಿಗೆ ತುರ್ತಾಗಿ 'ರಾಜಕೀಯ ಚಾಣಕ್ಯ' ಬೇಕಾಗಿದ್ದಾರೆ

ಕೊನೆಗೂ, ಮಹಾರಾಷ್ಟ್ರದಲ್ಲಿ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಸರಕಾರ ಬರುವುದು ಬಹುತೇಕ ಅಂತಿಮವಾಗಿದೆ. ಮೂರೂ ಪಕ್ಷಗಳು ಕಾಮನ್ ಮಿನಿಮಮ್ ಪ್ರೊಗ್ರಾಂಗೆ ಅಸ್ತು ಎಂದಿವೆ. ಇದೇ ಶನಿವಾರ (ನ 23) ಮೂರೂ ಪಕ್ಷಗಳು ರಾಜ್ಯಪಾಲರ ಬಳಿ ತಮ್ಮ ಹಕ್ಕನ್ನು ಮಂಡಿಸಲು ಹೋಗುತ್ತಿವೆ.

ಗೋಕಾಕ: ಅಣ್ತಮ್ಮ ನಡುವಿನ ಕಾದಾಟದಲ್ಲಿ ಮೂರನೆಯವನೇ 'ಸಾಹುಕಾರ'?

ಇದೆಲ್ಲಾ ಮೇಲ್ನೋಟಕ್ಕೆ ಕಾಣುವ ರಾಜಕೀಯ. ಆದರೆ, ಇಂತಹ ಗಟ್ಟಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಸೋನಿಯಾ ಗಾಂಧಿ ತೆಗೆದುಕೊಂಡ ರಿಸ್ಕ್, ರಾಜಕೀಯ ಲೆಕ್ಕಾಚಾರ ಇಡೀ ಕಾಂಗ್ರೆಸ್ ವಲಯದಲ್ಲಿ ಮಾತ್ರ ಯಾಕೆ, ಬಿಜೆಪಿಯನ್ನೇ ಬೆಚ್ಚಿಬೀಳಿಸಿದಂತೂ ಹೌದು. ಅದಕ್ಕೆ ಕಾರಣಗಳು ಹಲವಾರು.

'ದೇಶದ ಐವರು ಮಹಾನ್ ಭ್ರಷ್ಟರು' ಎಂದು ಬಾಳಾ ಠಾಕ್ರೆ

'ದೇಶದ ಐವರು ಮಹಾನ್ ಭ್ರಷ್ಟರು' ಎಂದು ಬಾಳಾ ಠಾಕ್ರೆ

ಎಲ್ಲಿಯ ಶಿವಸೇನೆ, ಎಲ್ಲಿಯ ಕಾಂಗ್ರೆಸ್, ಎಲ್ಲಿಯ ಗಾಂಧಿ ಕುಟುಂಬ, ಎಲ್ಲಿಯ ಠಾಕ್ರೆ ಕುಟುಂಬ..? ರಾಜೀವ್ ಗಾಂಧಿ ಮತ್ತು ಅವರ ಕುಟುಂಬವನ್ನು 'ದೇಶದ ಐವರು ಮಹಾನ್ ಭ್ರಷ್ಟರು' ಎಂದು ಬಾಳಾ ಠಾಕ್ರೆ ಜರಿದಿದ್ದರು. ಕಟ್ಟಾ ಹಿಂದುತ್ವವಾದಿಗಳಾಗಿರುವ ಶಿವಸೇನೆ, ಎನ್ಸಿಪಿ ಮೂಲಕ ಕಾಂಗ್ರೆಸ್ ಮನೆಬಾಗಿಲು ಬಡಿದಾಗ, ದೇಶದ ರಾಜಕೀಯದಲ್ಲಿ ಹೊಸ ಪುಟವೊಂದು ತೆರೆಯಿತು. ಇದಕ್ಕೆ, ಶಿವಸೇನೆಯಲ್ಲಿ ತೀವ್ರ ವಿರೋಧ ವ್ಯಕ್ತವಾದರೂ, ಅಷ್ಟೇ ವೇಗದಲ್ಲಿ ಉದ್ದವ್ ಠಾಕ್ರೆ ಅದನ್ನು ಶಮನಗೊಳಿಸಿದರು.

ಶರದ್ ಪವಾರ್ ಮೂಲಕ ಸೋನಿಯಾ ಗಾಂಧಿಗೆ ಸರಕಾರ ರಚನೆಯ ಪ್ರಪೋಸಲ್

ಶರದ್ ಪವಾರ್ ಮೂಲಕ ಸೋನಿಯಾ ಗಾಂಧಿಗೆ ಸರಕಾರ ರಚನೆಯ ಪ್ರಪೋಸಲ್

'ಶಿವಸೇನೆಯ ಜೊತೆ ಸರಕಾರ ರಚನೆ' ಎನ್ನುವ ಊಹಿಸಲೂ ಅಸಾಧ್ಯವಾದ ಪ್ರಪೋಸಲ್, ಶರದ್ ಪವಾರ್ ಮೂಲಕ ಸೋನಿಯಾ ಗಾಂಧಿಗೆ ಬಂದಾಗ ಮೊದಲು ಅವರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಯಾಕೆಂದರೆ, ಎರಡು ಪಕ್ಷಗಳ ನಡುವಿನ ಸೈದ್ದಾಂತಿಕ ಭಿನ್ನ ನಿಲುವುಗಳು. ಆದರೆ, ಮಹಾರಾಷ್ಟ್ರ ಕಾಂಗ್ರೆಸ್ಸಿಗರ ಒತ್ತಡ, ಶರದ್ ಪವಾರ್ ಅವರ ಮೇಲಿಂದ ಮೇಲೆ ಮನವೊಲಿಕೆಯಿಂದಾಗಿ, ಈ ಬಗ್ಗೆ ಆಲೋಚಿಸುವುದಾಗಿ ಸೋನಿಯಾ ಹೇಳಿದರು.

ಸೋನಿಯಾ ಅವರ ಆಪ್ತ ಸಲಹಾ ವಲಯದಲ್ಲಿರುವ ಎ.ಕೆ.ಆಂಟನಿ ಕೂಡಾ ವಿರೋಧ

ಸೋನಿಯಾ ಅವರ ಆಪ್ತ ಸಲಹಾ ವಲಯದಲ್ಲಿರುವ ಎ.ಕೆ.ಆಂಟನಿ ಕೂಡಾ ವಿರೋಧ

ಮಹಾರಾಷ್ಟ್ರದಲ್ಲಿ ಶಿವಸೇನೆಯ ಜೊತೆ ಸರಕಾರ ಎನ್ನುವ ವಿಷಯವನ್ನು ಹಿರಿಯ ಕಾಂಗ್ರೆಸ್ಸಿಗರ ಮುಂದಿಟ್ಟಾಗ, ಸೋನಿಯಾ ಅವರ ಆಪ್ತ ಸಲಹಾ ವಲಯದಲ್ಲಿರುವ ಎ.ಕೆ.ಆಂಟನಿ ಸೇರಿದಂತೆ ಬಹುತೇಕ ಎಲ್ಲರ ವಿರೋಧ ವ್ಯಕ್ತವಾಗಿತ್ತು. ಈ ಸಮಯದಲ್ಲಿ ಸೋನಿಯಾ ಬೆಂಬಲಕ್ಕೆ ನಿಂತಿದ್ದು ಗಾಂಧಿ ಕುಟುಂಬದ ನಿಷ್ಠ ಅಹಮದ್ ಪಟೇಲ್. ಆದರೆ, ಈ ವಿಚಾರದಲ್ಲಿ ಯಾವುದೇ ಆತುರಾತುರದ ನಿರ್ಧಾರವನ್ನು ತೆಗೆದುಕೊಳ್ಳದೇ, ಎಲ್ಲರ ವಿಶ್ವಾಸವನ್ನು ಸೋನಿಯಾ ಪಡೆದುಕೊಂಡರು. ಅದಕ್ಕಾಗಿಯೇ ಎಷ್ಟೆಲ್ಲಾ ಒತ್ತಡಗಳಿದ್ದಾಗಲೂ, ರಾಜ್ಯಪಾಲರ ಆಳ್ವಿಕೆ ಹೇರಿದರೂ ಸೋನಿಯಾ ನಿರ್ಲಿಪ್ತತೆ ಪ್ರದರ್ಶಿಸಿದರು ಎಂದು ವರದಿಗಳು ಹೇಳುತ್ತಿವೆ.

ದೇಶದೆಲ್ಲಡೆ ಹರಡಿರುವ ಮೋದಿ-ಅಮಿತ್ ಶಾ ಹಿಡಿತ

ದೇಶದೆಲ್ಲಡೆ ಹರಡಿರುವ ಮೋದಿ-ಅಮಿತ್ ಶಾ ಹಿಡಿತ

"ತಮ್ಮ ರಾಜಕೀಯ ಜೀವನದಲ್ಲಿ ಅತ್ಯಂತ ಕ್ಲಿಷ್ಟಕರವಾದ ನಿರ್ಧಾರವನ್ನು ಸೋನಿಯಾ ತೆಗೆದುಕೊಳ್ಳಬೇಕಿತ್ತು. ಯಾಕೆಂದರೆ, ದೇಶದೆಲ್ಲಡೆ ಹರಡಿರುವ ಮೋದಿ-ಅಮಿತ್ ಶಾ ಹಿಡಿತ, ಇದಕ್ಕೆ ಮಹಾರಾಷ್ಟ್ರದಂತಹ ಮಹತ್ವದ ರಾಜ್ಯದಲ್ಲಿ ಬ್ರೇಕ್ ನೀಡುವ ಜರೂರತ್ ಇತ್ತು" ಎನ್ನುವುದು ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರ ಅಭಿಪ್ರಾಯ. ಇದರ ಜೊತೆಗೆ, "ಸೊರಗಿ ಸುಣ್ಣವಾಗಿರುವ ಪಕ್ಷದ ವರ್ಚಸ್ಸನ್ನು ಮತ್ತೆ ಟ್ರ್ಯಾಕಿಗೆ ತರುವ ಜವಾಬ್ದಾರಿ ಅವರ ಮೇಲಿರುವುದರಿಂದ, ಒಂದು ದಿಟ್ಟ ಹೆಜ್ಜೆಯನ್ನು ಸೋನಿಯಾ ಗಾಂಧಿ ಇಡಬೇಕಿತ್ತು".

ಸೋನಿಯಾ ಗಾಂಧಿ, ಕಾಂಗ್ರೆಸ್ ಅನ್ನು ಕಟ್ಟಿ ಬೆಳೆಸಿದ ರೀತಿ ಪ್ರಶ್ನಾತೀತ

ಸೋನಿಯಾ ಗಾಂಧಿ, ಕಾಂಗ್ರೆಸ್ ಅನ್ನು ಕಟ್ಟಿ ಬೆಳೆಸಿದ ರೀತಿ ಪ್ರಶ್ನಾತೀತ

ಪತಿಯ ಸಾವಿನ ನಂತರ, ಸೋನಿಯಾ ಗಾಂಧಿ, ಕಾಂಗ್ರೆಸ್ ಅನ್ನು ಕಟ್ಟಿ ಬೆಳೆಸಿದ ರೀತಿ ಪ್ರಶ್ನಾತೀತ. ಪ್ರಧಾನಿ ಹುದ್ದೆ ಅರಸಿ ಬಂದರೂ, ಪಕ್ಷದ ಕೆಲಸಕಷ್ಟೇ ತನ್ನನ್ನು ಸೀಮಿತಗೊಳಿಸಿದ್ದ ಸೋನಿಯಾ, ವಯೋಸಹಜ ಕಾಯಿಲೆಯಿಂದಾಗಿ, ಸಕ್ರಿಯ ರಾಜಕಾರಣದಿಂದ ದೂರಕ್ಕೆ ಉಳಿಯಲು ನಿರ್ಧರಿಸಿದ್ದರು. ಆದರೆ, ತನ್ನಂತೇ ಮಗನೂ, ಪಕ್ಷವನ್ನು ಮೇಲೆ ತಂದಾನು ಎನ್ನುವ ನಿರೀಕ್ಷೆ ಸುಳ್ಳಾಗಿದ್ದರಿಂದ ಮತ್ತು ರಾಹುಲ್ ಆ ಹುದ್ದೆಯಲ್ಲಿ ಮುಂದುವರಿಯಲು ನಿರಾಕರಿಸಿರುವುದರಿಂದ, ಸೋನಿಯಾ ಮತ್ತೆ ಕಾಂಗ್ರೆಸ್ಸಿನ ಸಾರಥ್ಯವಹಿಸಿದ್ದಾರೆ.

ಎಸ್ಪಿಜಿ ಭದ್ರತೆಯನ್ನು ಹಿಂದಕ್ಕೆ ಪಡೆದುಕೊಂಡ ಕೇಂದ್ರ ಸರಕಾರ

ಎಸ್ಪಿಜಿ ಭದ್ರತೆಯನ್ನು ಹಿಂದಕ್ಕೆ ಪಡೆದುಕೊಂಡ ಕೇಂದ್ರ ಸರಕಾರ

ತನಗೆ ಮತ್ತು ತನ್ನ ಕುಟುಂಬಕ್ಕೆ ನೀಡಲಾಗಿದ್ದ ಎಸ್ಪಿಜಿ ಭದ್ರತೆಯನ್ನು ಕೇಂದ್ರ ಸರಕಾರ ಹಿಂದಕ್ಕೆ ಪಡೆದುಕೊಂಡ ಈ ಸಮಯದಲ್ಲಿ ಗೊಂದಲಕ್ಕೀಡಾಗಿದ್ದ ಸೋನಿಯಾಗೆ, ಸೂಕ್ತ ಸಲಹೆಯನ್ನು ನೀಡಿದ್ದು ಅಹಮದ್ ಪಟೇಲ್. ಯಾಕೆಂದರೆ, ಯುಪಿಎ ಮೈತ್ರಿಕೂಟದ ಯಾವುದೇ ಪಕ್ಷಗಳು ಇದರ ಬಗ್ಗೆ ಚಕಾರವೆತ್ತಲಿರಲಿಲ್ಲ. ರಾಹುಲ್ ಗಾಂಧಿಯಂತೆ ಸಿದ್ದಾಂತದ ಹಿಂದೆ ಬೀಳದೇ, ಆ ಸಮಯದಲ್ಲಿ ಏನು ರಾಜಕೀಯ ಮಾಡಬೇಕೋ ಅದನ್ನು ಮಾಡುವುದು ಸೋನಿಯಾ ವರ್ಕಿಂಟ್ ಸ್ಟೈಲ್. ಅದಕ್ಕೆ ಉದಾಹರಣೆ, ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದಿದ್ದು.

ಸೋನಿಯಾ ಗಾಂಧಿ ಇಟ್ಟ ಅಸಾಧಾರಣ ಚದುರಂಗದ ನಡೆಗೆ ಅಮಿತ್ ಶಾ ಚೆಕ್ ಮೇಟ್

ಸೋನಿಯಾ ಗಾಂಧಿ ಇಟ್ಟ ಅಸಾಧಾರಣ ಚದುರಂಗದ ನಡೆಗೆ ಅಮಿತ್ ಶಾ ಚೆಕ್ ಮೇಟ್

ಒಟ್ಟಾರೆಯಾಗಿ, ಮಹಾರಾಷ್ಟ್ರದಲ್ಲಿ ಸರಕಾರ ರಚಿಸುವ ವಿಚಾರದಲ್ಲಿ ಸೋನಿಯಾ ಗಾಂಧಿ ತೆಗೆದುಕೊಂಡ ನಿರ್ಧಾರವನ್ನು 'ಡೈನಾಮಿಕ್ ಸ್ಟೆಪ್' ಎಂದೇ ವ್ಯಾಖ್ಯಾನಿಸಬಹುದು. ಹೋಗಿ..ಹೋಗಿ.. ಸೈದ್ದಾಂತಿಕ ವಿರೋಧಿ ಕಾಂಗ್ರೆಸ್ ಜೊತೆ ಮೈತ್ರಿಯೇ ಎಂದು ಶಿವಸೇನೆಯನ್ನು ಬಿಜೆಪಿ ಅಣಕಿಸುವಂತಿಲ್ಲ. ಯಾಕೆಂದರೆ, ಕೆಲವು ವರ್ಷಗಳ ಕೆಳಗೆ, ಜಮ್ಮು ಕಾಶ್ಮೀರದಲ್ಲಿ ಮೆಹಬೂಬಾ ಮುಫ್ತಿ ಜೊತೆ ಬಿಜೆಪಿ ಮಾಡಿಕೊಂಡಿದ್ದೇನು ಎನ್ನುವ ಪ್ರಶ್ನೆ ಎದುರಾಗಬಹುದು. ಜೊತೆಗೆ, ಕರ್ನಾಟಕದ್ಲಲಿನ ಉಪಚುನಾವಣೆಯಲ್ಲಿ ಸರಕಾರ ಉಳಿಸಿಕೊಳ್ಳುವಷ್ಟು ಸೀಟು ಸಿಗದೇ ಇದ್ದರೆ, ಜೆಡಿಎಸ್ ಜೊತೆ ಬಿಜೆಪಿ ಮಾಡಿಕೊಳ್ಳುವುದು ಇದನ್ನೇ...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Government Formation With Shivasena And NCP In Maharashtra: AICC President Sonia Gandhi Difficult Decision To Checkmate BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more