ಕರ್ನಾಟಕದಲ್ಲಿ 7 ಸೇರಿ 149 ಅಂಚೆ ಕಚೇರಿ ಪಾಸ್‌ ಪೋರ್ಟ್‌ ಕೇಂದ್ರಗಳಿಗೆ ಚಾಲನೆ

Posted By:
Subscribe to Oneindia Kannada

ಬೆಂಗಳೂರು, ಜೂನ್ 18: ಕರ್ನಾಟಕದ ಸೇರಿ 149 ಅಂಚೆ ಕಚೇರಿ ಪಾಸ್‌ ಪೋರ್ಟ್‌ ಸೇವಾ ಕೇಂದ್ರ ಆರಂಭಿಸುವ ಪ್ರಕ್ರಿಯೆಗೆ ಗಳಿಗೆ ಶನಿವಾರದಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಚಾಲನೆ ನೀಡಿದ್ದಾರೆ. ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬಜೆಟ್ ನಲ್ಲಿ ಘೋಷಿಸಿದಂತೆ, ವಿದೇಶಾಂಗ ವ್ಯವಹಾರ ಇಲಾಖೆಯ ಮಹತ್ವದ ಯೋಜನೆಗೆ ಚಾಲನೆ ಸಿಕ್ಕಿದೆ.

ಕರ್ನಾಟಕದಲ್ಲಿ ಬೆಳಗಾವಿ, ದಾವಣಗೆರೆ, ಹಾಸನ, ಕಲಬುರಗಿ, ಮೈಸೂರು ನಗರಗಳಲ್ಲಿ ಮೊದಲಿಗೆ ಈ ಯೋಜನೆ ಜಾರಿಗೊಳಿಸಲಾಗಿತ್ತು. ಈಗ ಉಡುಪಿ, ಬಳ್ಳಾರಿ, ಬೀದರ್‌, ರಾಯ ಚೂರು, ಶಿವಮೊಗ್ಗ, ತುಮಕೂರು ಹಾಗೂ ವಿಜಯಪುರದಲ್ಲಿ ಹೊಸ ಪಾಸ್‌ಪೋರ್ಟ್‌ ಕೇಂದ್ರಗಳು ಆರಂಭವಾಗಿವೆ.

Government announces 149 new post office passport kendras, aims a centre every 50 km

'ಪಾಸ್‌ಪೋರ್ಟ್‌ ಪಡೆಯಲು 50 ಕಿ.ಮೀ.ಗಿಂತ ಹೆಚ್ಚು ದೂರ ಪ್ರಯಾಣಿಸಬಾರದು. ಈ ನಿಟ್ಟಿನಲ್ಲಿ ಈಗಾಗಲೇ ಇರುವ 86 ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಕೇಂದ್ರಗಳ ಹೊರತಾಗಿ 149 ಅಂಚೆ ಕಚೇರಿ ಪಾಸ್‌ಪೋರ್ಟ್‌ ಕೇಂದ್ರ(POPSK)ಗಳನ್ನು ಆರಂಭಿಸಲು ಸರಕಾರ ಮುಂದಾಗಿದೆ.

ಇದರೊಂದಿಗೆ ದೇಶದಾದ್ಯಂತ ಇರುವ ಎಲ್ಲ 810 ಪ್ರಧಾನ ಅಂಚೆ ಕಚೇರಿಗಳಿಗೆ ಪಾಸ್‌ಪೋರ್ಟ್‌ ಸೇವೆ ವಿಸ್ತರಿಸುವ ನಿಟ್ಟಿನಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಮೊದಲು ಅಂಚೆ ಕಚೇರಿಗಳನ್ನು ಗುರುತಿಸಿ, ಮೂರನೇ ಹಂತದಲ್ಲಿ ಅಲ್ಲಿ ಪಾಸ್‌ಪೋರ್ಟ್‌ ಕೇಂದ್ರಗಳನ್ನು ತೆರೆಯಲಾಗುವುದು' ಎಂದು ಸುಷ್ಮಾ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Now, you may not have to travel too far for getting your passport as the government came up with a plan to open passport centres within a radius of 50 km, while announcing that nearly 150 post offices would start doubling as passport kendras soon.
Please Wait while comments are loading...