ಗೋರಖ್ ಪುರ್ ನಿಮ್ಮ ಪಿಕ್ನಿಕ್ ಸ್ಪಾಟ್ ಅಲ್ಲ, ರಾಹುಲ್ ಗೆ ಯೋಗಿ ಟಾಂಗ್

By: ವಿಕಾಸ್ ನಂಜಪ್ಪ
Subscribe to Oneindia Kannada

ಗೋರಖ್ ಪುರ್, ಆಗಸ್ಟ್ 19: "ಗೋರಖ್ ಪುರ್ ನಿಮ್ಮ ಪಿಕ್ನಿಕ್ ಸ್ಪಾಟ್ ಅಲ್ಲ" ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಟಾಂಗ್ ನೀಡಿದ್ದಾರೆ. ಮಕ್ಕಳು ಮೃತಪಟ್ಟ ಗೋರಖ್ ಪುರ್ ನ ಆಸ್ಪತ್ರೆಗೆ ರಾಹುಲ್ ಭೇಟಿ ಬಗ್ಗೆ ಯೋಗಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಗೋರಖ್ ಪುರ ಆಸ್ಪತ್ರೆಯಲ್ಲಿ ಮತ್ತೆ 9ಮಕ್ಕಳ ಸಾವು

"ದೆಹಲಿಯಲ್ಲಿ ಕುಳಿತ ಯುವರಾಜಗೆ ಸ್ವಚ್ಛತೆ ಪದದ ಅರ್ಥ ಗೊತ್ತಾಗಲ್ಲ. ಗೋರಖ್ ಪುರ್ ಅನ್ನೋದು ಅವರ ಪಾಲಿಗೆ ಪಿಕ್ನಿಕ್ ಸ್ಪಾಟ್ ನಂತೆ. ನಾವದಕ್ಕೆ ಅವಕಾಶ ಕೊಡಲ್ಲ" ಎಂದು ಸಿಎಂ ಆದಿತ್ಯನಾಥ್ ಹೇಳಿದ್ದಾರೆ.

Goralhpur not your picnic spot: Yogi tells Rahul Gandhi

ಗೋರಖ್ ಪುರ್ ನ ಅಂಧಿಯಾರಿ ಬಾಗ್ ನಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಅವರು ಮಾತನಾಡಿದ್ದಾರೆ. ಗೋರಖ್ ಪುರ್ ಜಿಲ್ಲೆಯ ಸರಕಾರಿ ಬಿಆರ್ ಡಿ ಆಸ್ಪತ್ರೆಯಲ್ಲಿ ಆಗಸ್ಟ್ ಏಳರ ನಂತರ ಎಪ್ಪತ್ತಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. ಇದಕ್ಕೆ ಆಮ್ಲಜನಕ ಪೂರೈಕೆಯ ಕೊರತೆ ಕಾರಣ ಎಂಬ ಆರೋಪವಿದೆ.

ರಸ್ತೆಯಲ್ಲಿ ನಮಾಜ್, ಪೊಲೀಸ್ ಠಾಣೆ ಜನ್ಮಾಷ್ಟಮಿ: ಯೋಗಿ ಏನಂದ್ರು?

ಆದರೆ, ಈ ಆರೋಪವನ್ನು ರಾಜ್ಯ ಸರಕಾರವು ನಿರಾಕರಿಸಿದೆ. ಪೀಡಿಯಾಟ್ರಿಕ್ ವಾರ್ಡ್ ನ ಉಸ್ತುವಾರಿ ವಹಿಸಿದ್ದ ವೈದ್ಯರು ಹಾಗೂ ಆಸ್ಪತ್ರೆಯ ಮುಖ್ಯಸ್ಥರನ್ನು ಅಮಾನತು ಮಾಡಲಾಗಿದೆ. ಈ ಸಂಬಂಧ ತನಿಖೆಗೆ ಕೂಡ ರಾಜ್ಯ ಸರಕಾರ ಆದೇಶ ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gorakhpur is not a picnic spot, Uttar Pradesh Chief Minister Yogi Adityanath said. He was commenting on the visit by Rahul Gandhi to Gorakhpur where scores of children died at a hospital.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ