ಶಾಲಾ ವಿದ್ಯಾರ್ಥಿಗೆ ಉದ್ಯೋಗ ಕೊಟ್ಟ ಸುದ್ದಿ ಸುಳ್ಳು ಎಂದ ಗೂಗಲ್

ಶಾಲಾ ವಿದ್ಯಾರ್ಥಿಗೆ ಉದ್ಯೋಗ ಕೊಟ್ಟ ಸುದ್ದಿ ಸುಳ್ಳು ಎಂದ ಗೂಗಲ್. ಎರಡು ದಿನಗಳ ಹಿಂದೆ ಹರಿದಾಡಿದ್ದ ಸುದ್ದಿ ಅಲ್ಲಗಳೆದ ವಿಶ್ವದ ದೈತ್ಯ ಕಂಪನಿ.

ನವದೆಹಲಿ, ಆಗಸ್ಟ್ 2: ಚಂಡೀಗಢದ 16 ವರ್ಷದ ಶಾಲಾ ವಿದ್ಯಾರ್ಥಿಯೊಬ್ಬನಿಗೆ ತಾನು ತಿಂಗಳಿಗೆ 12 ಲಕ್ಷ ರು. ವೇತನದ ಉದ್ಯೋಗ ನೀಡಿರುವುದಾಗಿ ಹರಡಿರುವ ಸುದ್ದಿಗಳು ಸುಳ್ಳೆಂದು ಗೂಗಲ್ ಸಂಸ್ಥೆ ಸ್ಪಷ್ಟಪಡಿಸಿದೆ.

ಗ್ರಾಫಿಕ್ಸ್ ತಂತ್ರಜ್ಞಾನದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ನೈಪುಣ್ಯತೆ ಸಾಧಿಸಿರುವ ಚಂಡೀಗಢದ ಸೆಕ್ಟರ್ 33-ಬಿ ನಲ್ಲಿರುವ ಸರ್ಕಾರಿ ಮಾಡೆಲ್ ಸೀನಿಯರ್ ಸ್ಕೂಲ್ ನಲ್ಲಿ 12ನೇ ತರಗತಿಯಲ್ಲಿ ಓದುತ್ತಿರುವ ಹರ್ಷಿತ್ ಶರ್ಮಾ ಎಂಬಾತನಿಗೆ ಗೂಗಲ್ ಸಂಸ್ಥೆಯು ತನ್ನಲ್ಲಿ, ಗ್ರಾಫಿಕ್ಸ್ ಡಿಸೈನರ್ ಆಗಿ ಕೆಲಸ ಕೊಟ್ಟಿದ್ದು, ತಿಂಗಳಿಗೆ 12 ಲಕ್ಷ ರು. ವೇತನ ನೀಡುವುದಾಗಿ ಹೇಳಿದೆ ಎಂದು ಎರಡು ದಿನಗಳ ಹಿಂದಷ್ಟೇ ವರದಿಯಾಗಿತ್ತು.

Google has no record of Chandigarh class 12 boy’s Rs 1.44 crore job offer

ಈ ಸುದ್ದಿ, ಇನ್ನೂ ಹಲವಾರು ಮಾಧ್ಯಮಗಳಲ್ಲಿ ಪ್ರತಿಧ್ವನಿತವಾಗಿ, ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿತ್ತು. ಕೋಟ್ಯಂತರ ಮಂದಿ ಸುದ್ದಿಯನ್ನು ಓದಿ ಹುಬ್ಬೇರಿಸುವಂತಾಗಿತ್ತು.

ಆದರೆ, ಮಂಗಳವಾರ ಈ ಸುದ್ದಿ ಸುಳ್ಳೆಂದಿರುವ ಗೂಗಲ್, ಜಗತ್ತಿನಲ್ಲಿ ತಾನು ಯಾವುದೇ ಶಾಲಾ ವಿದ್ಯಾರ್ಥಿಗೂ ಈವರೆಗೆ ಕೆಲಸ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+