ಗೂಗಲ್ ಡೂಡಲ್ ನಲ್ಲಿ ಪ್ರೇಮಿಗಳ ದಿನ ಆಚರಿಸಿದ ಜೋಡಿಹಕ್ಕಿ!
ನವದೆಹಲಿ, ಫೆಬ್ರವರಿ 14: ಪ್ರೇಮಿಗಳ ದಿನದಂದು ಗೂಗಲ್ ಹೋಮ್ ಪೇಜ್ ತೆರೆಯುವವರಿಗೆ ಜೋಡಿ ಹಕ್ಕಿಗಳು, ಅರ್ಥಾತ್ ಲವ್ ಬರ್ಡ್ಸ್ ಸ್ವಾಗತ ಕೋರುತ್ತಿವೆ! ಹೌದು, ಇದು ಪ್ರೇಮಿಗಳ ದಿನಕ್ಕೆ ಗೂಗಲ್ ಡೂಡಲ್ ವಿಶೇಷ!
ಒಂದಲ್ಲ ಒಂದು ವಿಶೇಷ ದಿನವನ್ನು ಡೂಡಲ್ ಮೂಲಕ ನೆನಪಿಸಿಕೊಳ್ಳುವ ಗೂಗಲ್, ಪ್ರೇಮಿಗಳ ದಿನದಂದು ಎರಡು ಪ್ರೇಮ ಪಕ್ಷಿಗಳೊಂದಿಗೆ ಶುಭ ಹಾರೈಸಿದೆ.
ನೀರಲ್ಲಿ ಈಜುತ್ತಿರುವ ಎರಡು ಪಕ್ಷಿಗಳು ಈಜುತ್ತ ಈಜುತ್ತ ಹೃದಯದ ಆಕಾರವನ್ನು ಬಿಂಬಿಸಿ, ನೃತ್ಯಗೈಯುವ ಒಂದು ಪುಟ್ಟ ವಿಡಿಯೋ ಪ್ರೇಮಿಗಳ ದಿನದ ಸಂಭ್ರಮವನ್ನು ಹೆಚ್ಚಿಸುತ್ತಿದೆ!

ವ್ಯಾಲೆಂಟೈನ್ ಎಂಬ ಸಂತನ ನೆನಪಿಗಾಗಿ ಪ್ರತಿ ವರ್ಷ ಫೆಬ್ರವರಿ 14 ರಂದು ಆಚರಣೆಗೊಳ್ಳುವ ಪ್ರೇಮಿಗಳ ದಿನವನ್ನು ಇಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಹಲವರು ಪ್ರೇಮ ನಿವೇದನೆಗಾಗಿ ಈ ದಿನವನ್ನೇ ಆಯ್ದುಕೊಳ್ಳುವುದರಿಂದ ಪ್ರೇಮಿಗಳ ಪಾಲಿಗೆ ಇದು ಅತ್ಯಂತ ಮಹತ್ವದ ದಿನ ಎನ್ನಿಸಿದೆ. ಇಂಥ ದಿನವನ್ನು ನೆನಪಿಸಿದ ಗೂಗಲ್ ಡೂಡಲ್ ಗೆ ನಮನ...











Click it and Unblock the Notifications