UPI: ಫೋನ್‌ಪೇ, ಗೂಗಲ್‌ಪೇ ಬಳಕೆದಾರರಿಗೆ ಗುಡ್‌ನ್ಯೂಸ್‌: ಹಣ ವರ್ಗಾವಣೆ ಮಿತಿ ಹೆಚ್ಚಳ, ಎಷ್ಟು?

UPI Transaction: ಡಿಜಿಟಲ್‌ ಇಂಡಿಯಾ ಯುಗದಲ್ಲಿ ಸಾಗುತ್ತಿರುವ ಭಾರತದಲ್ಲಿ ಹಣ ಪಾವತಿ, ವರ್ಗಾವಣೆಗೆ ಯುಪಿಐ ಬಳಸುವವರ ಸಂಖ್ಯೆ ಅಧಿಕವಾಗಿದೆ. ಇದೀಗ ಫೋನ್‌ ಪೇ, ಗೂಗಲ್‌ ಪೇ ಸೇರಿದಂತೆ ಯುಪಿಐ ಬಳಕೆದಾರರಿಗೆ ಗುಡ್‌ನ್ಯೂಸ್‌ವೊಂದು ಹೊರಬಿದ್ದಿದೆ. ಸದ್ಯ ಯುಪಿಐ ವಹಿವಾಟಿಗೆ ಮಿತಿ ನಿಗದಿ ಮಾಡಲಾಗಿದ್ದು, ತುರ್ತು ಸಂದರ್ಭಗಳಲ್ಲಿ ಖಾತೆಯಲ್ಲಿ ಹಣವಿದ್ದರೂ ನಮ್ಮ ಕೈಸೇರದ ಪರಿಸ್ಥಿತಿ ಇದೆ. ಆದರೆ ಇನ್ನು ಮುಂದೆ ಯುಪಿಐ ಮೂಲಕ ಹಣ ವರ್ಗಾವಣೆ ಮತ್ತಷ್ಟು ಸುಲಭವಾಗಲಿದ್ದು, ಸೆಪ್ಟೆಂಬರ್ 15ರಿಂದ ಹೊಸ ನಿಯಮ ಜಾರಿಯಾಗಲಿದೆ.

ಡಿಜಿಟಲ್ ಪಾವತಿಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಸಿಪಿಐ) ಯುಪಿಐ ಪಾವತಿ ಮಿತಿಯನ್ನು ಹೆಚ್ಚಳ ಮಾಡಿದೆ. ಸೆಪ್ಟೆಂಬರ್ 15ರಿಂದ ಜಾರಿಯಾಗಲಿರುವ ಹೊಸ ನಿಯಮಗಳ ಅನ್ವಯ ಗ್ರಾಹಕರು ಕೆಲವೊಂದು ವಿಶೇಷ ವರ್ಗಗಳಿಗೆ ಏಕಕಾಲಕ್ಕೆ ₹5 ಲಕ್ಷದವರೆಗೆ ಹಾಗೂ 24 ಗಂಟೆಗಳಲ್ಲಿ ಒಟ್ಟು ₹10 ಲಕ್ಷವರೆಗೆ ಯುಪಿಐ ಮೂಲಕ ಪಾವತಿ ಮಾಡಬಹುದಾಗಿದೆ.

good-news-for-upi-users-phonepe-google-pay-transaction-limit-increased

ಯಾರಿಗೆಲ್ಲ ಅನುಕೂಲ?

ಇದು ತೆರಿಗೆ, ವಿಮೆ ಕಂತು, ಬಂಡವಾಳ ಮಾರುಕಟ್ಟೆ ಹೂಡಿಕೆ, ಬ್ಯಾಂಕ್ ಸಾಲದ ಇಎಂಐ ಮುಂತಾದ 12 ನಿರ್ದಿಷ್ಟ ವ್ಯವಹಾರಗಳಿಗೆ ಮಾತ್ರ ಈ ಹೆಚ್ಚುವರಿ ಮಿತಿ ಅನ್ವಯವಾಗಲಿದೆ. ಪರ್ಸನ್-ಟು-ಪರ್ಸನ್ ಪಾವತಿ ಮಿತಿ ದಿನಕ್ಕೆ ₹1 ಲಕ್ಷವಿರುತ್ತದೆ. ಐಪಿಒ ಹೂಡಿಕೆಗಳ ಪಾವತಿ ಮಿತಿಯೂ ₹5 ಲಕ್ಷಕ್ಕೆ ಮಿತಿಗೊಳಿಸಲಾಗಿದೆ. ಕ್ರೆಡಿಟ್ ಕಾರ್ಡ್ ಪಾವತಿಯು ಒಂದು ವರ್ಗಾವಣೆಗೆ ₹5 ಲಕ್ಷ ಮತ್ತು ಒಂದೇ ದಿನಕ್ಕೆ ₹6 ಲಕ್ಷಕ್ಕೆ ಸೀಮಿತವಾಗಿದೆ.

ಅದರಂತೆ ಸೆಪ್ಟೆಂಬರ್ 15ರಿಂದ ಬಳಕೆದಾರರು ತೆರಿಗೆ ಪಾವತಿಗಳು, ವಿಮಾ ಕಂತುಗಳು, ಇಎಂಐ ಮತ್ತು ಬಂಡವಾಳ ಮಾರುಕಟ್ಟೆ ಹೂಡಿಕೆಗಳಂತಹ ನಿರ್ದಿಷ್ಟ ವರ್ಗಗಳಿಗೆ 24 ಗಂಟೆಗಳ ಅವಧಿಯಲ್ಲಿ ₹10 ಲಕ್ಷದವರೆಗೆ ಹಣ ವರ್ಗಾಯಿಸಲು ಸಾಧ್ಯವಾಗುತ್ತದೆ. ಹೆಚ್ಚಿನ ಮೌಲ್ಯದ ಡಿಜಿಟಲ್ ವಹಿವಾಟುಗಳನ್ನು ಸರಳಗೊಳಿಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಈ ಹೊಸ ವ್ಯವಸ್ಥೆ ಕಲ್ಪಿಸಿದೆ.

ಎಲ್ಲ ಬ್ಯಾಂಕ್ ಹಾಗೂ ಯುಪಿಐ ಆ್ಯಪ್‌ಗಳಿಗೆ ಈ ನಿಯಮ ಜಾರಿಗೆ ಸೂಚನೆ ನೀಡಲಾಗಿದೆ. ಯುಪಿಐ ಮೂಲಕ ಉದ್ಯಮಿಗಳು, ಹೂಡಿಕೆದಾರರು ಹೆಚ್ಚಿನ ಮೊತ್ತದ ಪಾವತಿಯನ್ನು ಇನ್ನು ಸುಲಭವಾಗಿ ಮಾಡಬಹುದು. ಈಗ ಪ್ರತಿ ವಹಿವಾಟಿಗೆ ₹5 ಲಕ್ಷದವರೆಗೆ ಅವಕಾಶವಿದ್ದು, ಯುಪಿಐ ಮೂಲಕ ದಿನಕ್ಕೆ ₹10 ಲಕ್ಷದವರೆಗೆ ಮಿತಿ ನಿಗದಿಪಡಿಸಲಾಗಿದೆ. ಈ ಹಿಂದೆ ಇದ್ದ ₹2 ಲಕ್ಷ ಮಿತಿಯಿಂದ ಪ್ರತಿ ವಹಿವಾಟಿಗೆ ₹5 ಲಕ್ಷಕ್ಕೆ ಮತ್ತು 24 ಗಂಟೆಗಳಲ್ಲಿ ₹10 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.

ಸೆಪ್ಟೆಂಬರ್ 15ರಿಂದ ಈ ಮಿತಿಗಳನ್ನು ಜಾರಿಗೊಳಿಸಲು ಎಲ್ಲ ಬ್ಯಾಂಕ್‌ಗಳು ಹಾಗೂ ಯುಪಿಐ ಅಪ್ಲಿಕೇಶನ್‌ಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದೆ. ಬ್ಯಾಂಕುಗಳು ತಮ್ಮದೇ ಆದ ಆಂತರಿಕ ಮಿತಿಗಳನ್ನು ಹೊಂದಿಸಲು ಅವಕಾಶವೂ ನೀಡಿದೆ. ಆದರೆ ಬ್ಯಾಂಕ್ ಅಥವಾ ಯುಪಿಐ ಈ ಹೊಸ ಮಿತಿಗಳನ್ನು ಜಾರಿಗೆ ತರುವ ನಿರೀಕ್ಷೆಯಿದ್ದು, ಸ್ವಲ್ಪ ಬದಲಾವಣೆಯಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+