Tirupati October Darshan Tickets: ತಿರುಮಲ ಶ್ರೀವಾರಿ ಭಕ್ತರಿಗೆ ಗುಡ್ ನ್ಯೂಸ್: ಅಕ್ಟೋಬರ್ ದರ್ಶನ ಟಿಕೆಟ್ ಬಿಡುಗಡೆ
ತಿರುಮಲ ಶ್ರೀವಾರಿಯ ಭಕ್ತರಿಗೆ ಟಿಟಿಡಿ ಸಿಹಿಸುದ್ದಿಯೊಂದನ್ನು ನೀಡಿದೆ. ಅಕ್ಟೋಬರ್ ತಿಂಗಳಲ್ಲಿ ತಿರುಪತಿಗೆ ಹೋಗಲು ಬಯಸುವ ಭಕ್ತರಿಗಾಗಿ ಆನ್‌ಲೈನ್ ಟಿಕೆಟ್‌ಗಳನ್ನು ಟಿಟಿಡಿ ಬಿಡುಗಡೆ ಮಾಡಲಿದೆ.
ಜುಲೈ 18ರಿಂದ ಅಕ್ಟೋಬರ್ ತಿಂಗಳ ದರ್ಶನ್‌ಕ್ಕಾಗಿ ಭಕ್ತರು ಆನ್‌ಲೈನ್‌ನಲ್ಲಿ ಟಿಕೆಟ್ ಪಡೆಯಬಹುದಾಗಿದೆ. ಇದರಲ್ಲಿ ಆರ್ಜಿತ ಸೇವೆಗಳು, ದರ್ಶನ ಮತ್ತು ವಸತಿ ಕೊಠಡಿಗಳಿಗಾಗಿ ಟಿಕೆಟ್ ಬುಕ್ ಮಾಡಬಹುದು.

ಹೌದು... ಶ್ರೀವರಿ ಸೇವಾ ಟಿಕೆಟ್‌ಗಳನ್ನು ಇದೇ ತಿಂಗಳ 18 ರಂದು (ಜುಲೈ) ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ಜುಲೈ 20 ರಂದು ಬೆಳಗ್ಗೆ 10 ಗಂಟೆಯವರೆಗೆ ಭಕ್ತರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಟಿಟಿಡಿ ಅವಕಾಶ ಕಲ್ಪಿಸಲಿದೆ. ಜುಲೈ 20 ರಿಂದ 22 ರ ಮಧ್ಯಾಹ್ನ 12 ಗಂಟೆಯ ಮೊದಲು ಮೊತ್ತವನ್ನು ಪಾವತಿಸಿದವರಿಗೆ ಟಿಟಿಡಿ ಲಕ್ಕಿ ಡಿಪ್ ಟಿಕೆಟ್‌ಗಳನ್ನು ನೀಡುತ್ತದೆ.
ಅಲ್ಲದೆ ಟಿಟಿಡಿಯು ತಿರುಮಲ ಶ್ರೀವಾರಿ ಆರ್ಜಿತ ಸೇವೆಯ ಟಿಕೆಟ್‌ಗಳಾದ ಕಲ್ಯಾಣೋತ್ಸವ, ಆರ್ಜಿತ ಬ್ರಹ್ಮೋತ್ಸವ, ಸಹಸ್ರದೀಪಾಲಂಕಾರ, ಊಂಜಾಲ್ ಸೇವಾ ಟಿಕೆಟ್‌ಗಳನ್ನು ಜುಲೈ 22ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಿದೆ. ಅದೇ ದಿನ (ಜುಲೈ 22) ಮಧ್ಯಾಹ್ನ 3 ಗಂಟೆಗೆ, ವರ್ಚುವಲ್ ಸೇವೆಗಳಿಗಾಗಿ ಅಕ್ಟೋಬರ್ ಕೋಟಾ ಮತ್ತು ಅವುಗಳ ವೀಕ್ಷಣಾ ಸ್ಲಾಟ್‌ಗಳನ್ನು ಆನ್‌ಲೈನ್‌ನಲ್ಲಿ ಟಿಟಿಡಿ ಬಿಡುಗಡೆ ಮಾಡುತ್ತದೆ.
ಜೊತೆಗೆ ಟಿಟಿಡಿಯು ಅಕ್ಟೋಬರ್ ತಿಂಗಳ ಅಂಗಪ್ರದಕ್ಷಿಣಂ ಟೋಕನ್‌ಗಳ ಕೋಟಾವನ್ನು ಜುಲೈ 23 ರಂದು ಬೆಳಿಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಿದೆ.

ವಯೋವೃದ್ಧರು, ಅಂಗವಿಕಲರು ಮತ್ತು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರು ತಿರುಮಲ ಶ್ರೀಗಳ ದರ್ಶನಕ್ಕೆ ಅನುವು ಮಾಡಿಕೊಡಲು ಅಕ್ಟೋಬರ್ ತಿಂಗಳ ಉಚಿತ ವಿಶೇಷ ದರ್ಶನಂ ಟೋಕನ್‌ಗಳ ಕೋಟಾವನ್ನು ಜುಲೈ 23 ರಂದು ಮಧ್ಯಾಹ್ನ 3 ಗಂಟೆಗೆ ಟಿಟಿಡಿ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಿದೆ.
ಅಕ್ಟೋಬರ್ ತಿಂಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳ ಕೋಟಾವನ್ನು ಜುಲೈ 24ರಂದು ಬೆಳಿಗ್ಗೆ 10 ಗಂಟೆಗೆ ಟಿಟಿಡಿ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಿದೆ. ಜುಲೈ 24ರಂದು ಮಧ್ಯಾಹ್ನ 3 ಗಂಟೆಗೆ ತಿರುಮಲ ಮತ್ತು ತಿರುಪತಿಯಲ್ಲಿ ಅಕ್ಟೋಬರ್ ತಿಂಗಳ ಕೊಠಡಿಯ ಕೋಟಾವನ್ನು ಟಿಟಿಡಿ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡುತ್ತದೆ.
ಜುಲೈ 25 ರಂದು ಟಿಟಿಡಿ ವ್ಯಾಪ್ತಿಯ ದೇವಾಲಯಗಳಲ್ಲಿ ಆಗಸ್ಟ್ ತಿಂಗಳ ಸೇವಾ ಕೋಟಾವನ್ನು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ಭಕ್ತರು ಸೇವೆಗಳು, ದರ್ಶನ ಟಿಕೆಟ್‌ಗಳು ಮತ್ತು ವಸತಿ ಕೊಠಡಿಗಳನ್ನು https://ttdevasthanams.ap.gov.in ಮೂಲಕ ಕಾಯ್ದಿರಿಸುವಂತೆ ಟಿಟಿಡಿ ವಿನಂತಿಸಿದೆ.
ತಿರುಮಲ ರಶ್:
ಬೆಟ್ಟದಲ್ಲಿ ಭಕ್ತರ ದಂಡು ವಾರಾಂತ್ಯದಲ್ಲಿ ಹೆಚ್ಚಾಗಿ ಕಂಡು ಬಂದಿದೆ. ಭಾನುವಾರ 84,797 ಭಕ್ತರು ತಿರುಮಲ ಶ್ರೀಗಳಿಗೆ ಭೇಟಿ ನೀಡಿದ್ದರು. 29,497 ಮಂದಿ ಹರಕೆ ತೀರಿಸಿ ಪೂಜೆ ಸಲ್ಲಿಸಿದರು. ಶ್ರೀವಾರಿ ಹುಂಡಿಗೆ 3.98 ಕೋಟಿ ಆದಾಯ ಬಂದಿದೆ. ಟೋಕನ್ ಇಲ್ಲದ ಭಕ್ತರಿಗೆ ಶ್ರೀಗಳ ದರ್ಶನಕ್ಕೆ 18 ಗಂಟೆಯಿಂದ 24 ಗಂಟೆ ಬೇಕಾಗುತ್ತಿದೆ. ಇದರಿಂದಾಗಿ ಸರತಿ ಸಾಲಿನಲ್ಲಿ ಭಕ್ತರಿಗೆ ಅಗತ್ಯ ಆಹಾರ, ಕುಡಿಯುವ ನೀರು, ವೈದ್ಯಕೀಯ ಸೌಲಭ್ಯ ಕಲ್ಪಿಸಲು ಟಿಟಿಡಿ ವ್ಯವಸ್ಥೆ ಮಾಡಿದೆ. ಟ್ರಾಫಿಕ್ ಮೇಲೆ ಟಿಟಿಡಿ ನಿರಂತರವಾಗಿ ನಿಗಾ ಇಡುತ್ತಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications