Vande Bharat Express: ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ರೈಲು: ಭಾರತೀಯರಿಗೆ ಗುಡ್‌ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ
ನವದೆಹಲಿ: ಭಾರತೀಯ ರೈಲ್ವೆಯು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವಿಚಾರದಲ್ಲಿ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಬೆಂಗಳೂರು ಮತ್ತು ಕರ್ನಾಟಕ ಸೇರಿದಂತೆ ದೇಶದಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪರಿಚಯಿಸಲಾಗಿದೆ. ಆದರೆ ಇದೀಗ ವಂದೇ ಭಾರತ್ ರೈಲಿನಲ್ಲೇ ಮತ್ತೊಂದು ಭರ್ಜರಿ ಗುಡ್‌ನ್ಯೂಸ್ ಕೊಡಲಾಗಿದೆ. ಅದೇನು ಎನ್ನುವ ವಿವರ ನೋಡೋಣ.
ಭಾರತೀಯ ರೈಲ್ವೆಯು ವಂದೇ ಭಾರತ್ ಸ್ಲೀಪರ್ ರೈಲಿನ ವಿಚಾರದಲ್ಲಿ ಗುಡ್‌ನ್ಯೂಸ್ ಕೊಟ್ಟಿದೆ. ವಂದೇ ಭಾರತ್ ಸ್ಲೀಪರ್ ರೈಲಿನ ಪ್ರಾಯೋಗಿಕ ಪರೀಕ್ಷೆಗಳು ಮತ್ತು ಸುರಕ್ಷತಾ ಪ್ರಮಾಣೀಕರಣಗಳು ಪೂರ್ಣಗೊಂಡಿವೆ. ಈ ಮೂಲಕ ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲು ಅಸ್ಸಾಂ ರಾಜ್ಯದ ಗುವಾಹಟಿ ಮತ್ತು ಪಶ್ಚಿಮ ಬಂಗಾಳದ ಕೋಲ್ಕತ್ತಾ ನಡುವೆ ಮೊದಲ ಸೇವೆಯನ್ನು ಆರಂಭಿಸಲಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಗುರುವಾರ ಹೊಸ ಅಪ್ಡೇಟ್ಸ್ ಘೋಷಿಸಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ರೈಲನ್ನು ಉದ್ಘಾಟನೆ ಮಾಡಲಿದ್ದು, ಶೀಘ್ರ ಸೇವೆಗೆ ಮುಕ್ತವಾಗಲಿದೆ. ಈ ವಂದೇ ಭಾರತ್ ಸ್ಲೀಪರ್ ರೈಲು 1,000 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರದ ಪ್ರಯಾಣಕ್ಕಾಗಿ ವಿನ್ಯಾಸ ಮಾಡಲಾಗಿದೆ ಎಂದು ಹೇಳಲಾಗಿದೆ.

ಇದರಿಂದ ಮುಂದಿನ ದಿನಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ರೈಲಿನ ಮೂಲಕ ಪ್ರಯಾಣಿಕರು ದೂರದ ಪ್ರದೇಶಗಳು ಹಾಗೂ ದೂರದ ಪ್ರವಾಸಿ ತಾಣಗಳಿಗೆ ಕಡಿಮೆ ಅವಧಿ ಮತ್ತು ಆರಾಮದಾಯಕ ಯಾತ್ರೆ ಮಾಡುವುದಕ್ಕೆ ಅನುಕೂಲವಾಗಲಿದೆ. ಮೊದಲ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲು ಮುಂದಿನ 15-20 ದಿನಗಳಲ್ಲಿ ಪ್ರಾರಂಭವಾಗಲಿದೆ ಎಂದು ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಅವರು ತಿಳಿಸಿದ್ದಾರೆ.
ಹೊಸ ಸ್ಲೀಪರ್ ವಂದೇ ಭಾರತ್ ರೈಲುಗಳ ಸಂಚಾರವು ಭಾರತೀಯ ರೈಲ್ವೆಯ ಹೊಸ ಮೈಲಿಗಲ್ಲಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಚೇರ್ ಕಾರ್ ರೂಪಾಂತರಕ್ಕೆ ದೇಶದಾದ್ಯಂತ ಅತ್ಯುಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ದೇಶಾದ್ಯಂತ ಮುಂದಿನ ಪೀಳಿಗೆಯ ರೈಲುಗಳಿಗೆ ವ್ಯಾಪಕ ಬೇಡಿಕೆಗೆ ಕಾರಣವಾಗಿದೆ. ವಂದೇ ಭಾರತ್ ಸ್ಲೀಪರ್ ರೈಲನ್ನು 1,000 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರದ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಇದು ವೇಗವಾದ, ಸುರಕ್ಷಿತ ಮತ್ತು ಹೆಚ್ಚು ಆರಾಮದಾಯಕವಾದ ರಾತ್ರಿ ಪ್ರಯಾಣವನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಈ ರೈಲು ದೀರ್ಘ ಪ್ರಯಾಣದ ಸಮಯದಲ್ಲಿ ಪ್ರಯಾಣಿಕರ ಸೌಕರ್ಯವನ್ನು ಸುಧಾರಿಸಲು ನವೀಕರಿಸಿದ ಸಸ್ಪೆನ್ಷನ್, ಆಧುನಿಕ ಸ್ಲೀಪರ್ ಕೋಚ್‌ಗಳು ಮತ್ತು ಸುಧಾರಿತ ಸುರಕ್ಷತಾ ವ್ಯವಸ್ಥೆಗಳನ್ನು ಸೇರಿಸಲಾಗಿದೆ.
12 ವಂದೇ ಭಾರತ್ ಸ್ಲೀಪರ್ ರೈಲು
ಇನ್ನು 2026 ವರ್ಷಾಂತ್ಯದ ವೇಳೆಗೆ ವಂದೇ ಭಾರತ್ ಸ್ಲೀಪರ್ ಎಕ್ಸಪ್ರೆಸ್ ರೈಲಿನ ಸಂಖ್ಯೆಗಳನ್ನು 12ಕ್ಕೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ಸುಮಾರು 12 ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ರೈಲ್ವೆ ಜಾಲಕ್ಕೆ ಸೇರಿಸಲಾಗುವುದು, ಮುಂದಿನ ವರ್ಷ ವೇಗದ ವಿಸ್ತರಣೆಯನ್ನು ಯೋಜಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
नए सस्पेंशन के साथ पूरी तरह नई डिजाइन की बोगी तैयार की गई है। डिजाइन के पैरामीटर्स को एक नए स्तर पर ले जाया गया है। इसकी एर्गोनॉमिक डिजाइन वाले इंटीरियर्स और लैडर्स- हर जगह सेफ्टी और सिक्योरिटी के लिए विशेष पैरामीटर्स रखे गए हैं: माननीय रेल मंत्री श्री @AshwiniVaishnaw जी pic.twitter.com/K2bKvAhNuB
— Ministry of Railways (@RailMinIndia) January 1, 2026
ಪ್ರಯಾಣ ದರ ಹೇಗಿದೆ ?
ಗುವಾಹಟಿ - ಹೌರಾ ಮಾರ್ಗದ ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ರೈಲಿನ ದರವನ್ನು 3AC ಗೆ ಸುಮಾರು 2,300 ರೂಪಾಯಿಗೆ ನಿಗದಿಪಡಿಸಲಾಗಿದೆ ಎಂದು ವೈಷ್ಣವ್ ಅವರು ಹೇಳಿದ್ದಾರೆ. 2AC ದರ 3,000 ರೂಪಾಯಿ ಆಗುವ ನಿರೀಕ್ಷೆ ಇದೆ. ಫಸ್ಟ್ ಎಸಿ ಸುಮಾರು 3,600 ರೂಪಾಯಿ ಇರಲಿದೆ. ಒಂದೇ ಮಾರ್ಗದಲ್ಲಿನ ವಿಮಾನ ದರಗಳು ಸಾಮಾನ್ಯವಾಗಿ 6,000 ರೂಪಾಯಿಯಿಂದ 10,000 ರೂಪಾಯಿಯ ವರೆಗೂ ಇದೆ. ಇದು ಸ್ಲೀಪರ್ ರೈಲನ್ನು ಹೆಚ್ಚು ಕೈಗೆಟುಕುವ ಆಯ್ಕೆಯನ್ನಾಗಿ ಮಾಡುತ್ತದೆ ಎಂದು ವೈಷ್ಣವ್ ಅವರು ಮಾಹಿತಿ ನೀಡಿದ್ದಾರೆ.












Click it and Unblock the Notifications