Gold Price: ಬಂಗಾರದ ಬೆಲೆ ₹1 ಲಕ್ಷಕ್ಕೆ ಹೆಚ್ಚಳ ಫಿಕ್ಸ್, ಯಾವಾಗ?

ಬೆಂಗಳೂರು, ಜನವರಿ 08: ಭಾರತದಲ್ಲಿ ಇರುವಷ್ಟು ಚಿನ್ನಕ್ಕೆ ಬೇಡಿಕೆ ಬೇರೆ ದೇಶದಲ್ಲಿ ಇಲ್ಲವೇನೋ ಎಂದನಿಸುತ್ತದೆ. ಅಷ್ಟರಮಟ್ಟಿಗೆ ಚಿನ್ನ ಖರೀದಿ ನಡೆಯುತ್ತಿದೆ. ಕಳೆದ ಒಂದೇ ವರ್ಷದಲ್ಲಿ ಚಿನ್ನದ ದರದಲ್ಲಿ ಮಹತ್ವದ ಬದಲಾಣೆ ಆಗಿವೆ. ಮುಂದಿನ ಕೇಲವೇ ತಿಂಗಳಲ್ಲಿ ಆಭರಣಪ್ರಿಯರಿಗೆ ದೊಡ್ಡ ಶಾಕ್ ಕಾದಿದೆ ಎನ್ನಬಹುದು. ಕಳೆದ ಒಂದೇ ವರ್ಷದಲ್ಲಿ ಚಿನ್ನದ ದರ ಶೇಕಡಾ 35ರಷ್ಟು ಏರಿಕೆ ಆಗಿದೆ. ಮುಂದಿನ ಒಂದು ವರ್ಷದಲ್ಲಿ ಇದೇ ರೀತಿ ದರ ಹೆಚ್ಚಳವಾದರೆ, ಬಂಗಾರ ಮಹಿಳೆಯರ ಪಾಲಿಗೆ ಗಗನಕುಸುಮವಾಗಲಿದೆ.

ಅಗತ್ಯ ವಸ್ತುಗಳಂತೆ ದಿನದಿಂದ ದಿನಕ್ಕೆ ಬೆಲೆ ಹಾಗೂ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವ ಚಿನ್ನವು ಯಾರಿಗೆತಾನೇ ಇಷ್ಟವಿಲ್ಲ ಹೇಳಿ. ಹೆಣ್ಣಿಗೆ ಧರಿಸಲು ಇಷ್ಟವಾದರೆ, ಗಂಡಿಗೆ ಚಿನ್ನ ಎಂಬುದು ಬಂಡವಾಳ ಹೂಡಿಕೆ, ಗಳಿಕೆಯ ಭಾಗವಾಗಿದೆ. ಚಿನ್ನದ ಮೇಲೆ ಹಣ ಹೂಡಿಸಿದರೆ ಸದಾ ಸೇಫ್ ಎಂಬ ವಿಚಾರ ಬಂದುಬಿಟ್ಟಿದೆ. ಅಂದರೆ ಚಿನ್ನದ ದರ ಎಂದಿಗೂ ಪಾತಾಳ ಕಾಣುವುದಿಲ್ಲ ಎಂಬ ನಂಬಿಕೆ ಜನರಲ್ಲಿದೆ.

Gold Price Likely to Reach Rs 1 Lakh by Year-End 2025 Check Silver Rate here

ಸದ್ಯದ ಮಾಹಿತಿ ಪ್ರಕಾರ, ಚಿನ್ನದ ಬೆಲೆ 01 ಲಕ್ಷ ರೂಪಾಯಿಗೆ ಏರಿಕೆ ಆಗುವ ನಿರೀಕ್ಷೆ ಇದೆ. 2023ರ ಅಕ್ಟೋಬರ್‌ನಿಂದ 2024ರ ಅಕ್ಟೋಬರ್‌ಗೆ ಬಂಗಾರದ ದರವು 35ರಷ್ಟು ಏರಿಕೆ ಕಂಡಿತ್ತು. ಆಗ 61000 ರೂ.ಆಸು ಪಾಸಿನಲ್ಲಿದ್ದ 10 ಗ್ರಾಂ ಚಿನ್ನದ ಬೆಲೆ, ಕಳೆದ ವರ್ಷ ಅಕ್ಟೋಬರ್‌ಗೆ 82000ಕ್ಕೆ ಏರಿಕೆ ಆಯಿತು. ಸದ್ಯ ಅದರ ದರ 86000 ರೂಪಾಯಿಗೆ ಹೆಚ್ಚಳವಾಗಿದೆ. ತಿಂಗಳಿಗೆ ಒಂದರಿಂದ ಎರಡು ಸಾವಿರ ರೂಪಾಯಿಯಷ್ಟು ನಿರಂತರವಾಗಿ ಏರಿಕೆ ಕಾಣುತ್ತಿದೆ.

ಚಿನ್ನದ ಬೇಡಿಕೆ, ದರ ಹೆಚ್ಚಳ ಹೀಗೆ ಮುಂದುವರಿದರೆ ಇದೇ ವರ್ಷಾಂತ್ಯಕ್ಕೆ ಚಿನ್ನದ ದರ 01 ಲಕ್ಷ ರೂಪಾಯಿ ಆಸು ಪಾಸಿಗೆ ಏರಿಕೆ ಆಗಲಿದೆ. ಇದರಿಂದ ಚಿನ್ನ ಪ್ರಿಯರಿಗೆ ದೊಡ್ಡ ಆಘಾತ ಎದುರಾಗುವ ದಿನಗಳು ದೂರ ಇಲ್ಲ. ಬೇಡಿಕೆ ಹೆಚ್ಚಾಗಲಿದೆ ಎಂಬ ಕಾರಣಕ್ಕೆ ಆರ್‌ಬಿಐ ಸಹ ಹೆಚ್ಚಿನ ಪ್ರಮಾಣದಲ್ಲಿ ಈ ವರ್ಷ ಚಿನ್ನ ಖರೀದಿ ಮಾಡಿದೆ.

ಇಂದು ಚಿನ್ನದ ಬೆಲೆಯಲ್ಲಿ ಮತ್ತೆ ರೂ.1600 ಹೆಚ್ಚಳ

ಮದುವೆ, ವಿವಾಹ, ಇನ್ನಿತರ ಯಾವುದೇ ಕೌಟುಂಬಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಚಿನ್ನ ಖರೀದಿ ಮಾಡಲು ಉತ್ಸುಕರಾಗಿರುವ ಜನರಿಗೆ ಭವಿಷ್ಯದಲ್ಲಿ ಚಿನ್ನದ ಬೆಲೆ ದೊಡ್ಡ ಶಾಕ್ ನೀಡಲಿದೆ. ಬೆಂಗಳೂರಿನಲ್ಲಿ ಫೆಬ್ರವರಿ 08ರಂದು ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಆಗಿದೆ. 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 86,670 ರೂಪಾಯಿ ಇದೆ. 22 ಕ್ಯಾರಟ್ ಚಿನ್ನ ಇಂದು 65,010 ರೂಪಾಯಿಗೆ ಏರಿಕೆ ಆಗಿದೆ.

Gold Price Likely to Reach Rs 1 Lakh by Year-End 2025 Check Silver Rate here

ಹತ್ತು ಗ್ರಾಂ ಚಿನ್ನಕ್ಕೆ 160 ರೂಪಾಯಿ, 100 ಗ್ರಾಂ ಚಿನ್ನಕ್ಕೆ 1600 ರೂಪಾಯಿ ಹೆಚ್ಚಳವಾಗಿದೆ. ಬೆಳ್ಳಿ ದರದಲ್ಲೂ ಯಾವುದೇ ಬದಲಾವಣೆ ಆಗಿಲ್ಲ. ಮುಂದಿನ ದಿನಗಳಲ್ಲಿ ಕ್ರಮೇಣ ಚಿನ್ನ ಬೆಳ್ಳಿ ದರದಲ್ಲಿ ಭಾರೀ ವ್ಯತ್ಯಾಸಗಳು ಆಗಲಿದ್ದು, ಖರೀದಿದಾರರು ಬೆಲೆ ಕೇಳಿಯೇ ಸುಸ್ತಾಗಲಿದ್ದಾರೆ.

ಕಳೆದ ವರ್ಷ 2024ರಲ್ಲಿ ಬಂಗಾರದ ಬೆಲೆ ದಿಢೀರನೇ 7000ಗೂ ಹೆಚ್ಚು ಏರಿಕೆ ಆಗಿತ್ತು. ಇದು ಆ ವರ್ಷದ ಗರಿಷ್ಠ ದರ ಏರಿಕೆ ಎನ್ನಬಹುದು. ಅದಾದ ಬಳಿಕ ಆಗಾಗ 100 ರೂಪಾಯಿ ನಿಂದ 300 ರೂಪಾಯಿವರೆಗೆ ಅನೇಕ ಬಾರಿ ಏರಿಕೆ ಆಗಿದೆ. ಕೆಲವೊಮ್ಮೆ 600 ರೂಪಾಯಿಯಿಂದ 700 ರೂಪಾಯಿವರೆಗೆ ಹೆಚ್ಚಾಗಿದೆ. ಹೀಗಿದ್ದರು, ಹಬ್ಬ ಹರಿದಿನಗಳಲ್ಲಿ, ವಿವಾಹ ಮುಂತಾದ ಸಂದರ್ಭಗಳಲ್ಲಿ ಚಿನ್ನಾಭರಣ ಖರೀದಿಯೇನು ಕಡಿಮೆ ಆಗಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಲೇ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+