• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕಿಸ್ತಾನ: 'ಗಾಡ್‌ ಫಾದರ್‌ ಆಫ್‌ ತಾಲಿಬಾನ್' ಸಮಿ ಉಲ್‌ ಹಕ್‌ ಹತ್ಯೆ

|

ರಾವಲ್ಪಿಂಡಿ, ನವೆಂಬರ್ 02: ತಾಲಿಬಾನ್ ಗಾಡ್‌ಫಾದರ್‌ ಎಂದೇ ಕರೆಯಾಗುತ್ತಿದ್ದ ಪಾಕಿಸ್ತಾನದ ಮೌಲಾನಾ ಸಮಿ ಉಲ್ ಹಕ್‌ ನನ್ನು ಇಂದು ಹತ್ಯೆ ಮಾಡಲಾಗಿದೆ.

ಪಾಕಿಸ್ತಾನಾದ ರಾವಲ್ಪಿಂಡಿಯಲ್ಲಿ ಅಪರಿಚಿತ ವ್ಯಕ್ತಿಗಳು ಮೌಲಾನಾ ಸಮಿ ಉಲ್ ಹಕ್‌ (82) ಚೂರಿಯಿಂದ ಸತತವಾಗಿ ಇರಿದು ಹತ್ಯೆ ಮಾಡಿದ್ದಾರೆ. ಆತನ ವಿರುದ್ಧ ಸಾಕಷ್ಟು ಉಗ್ರ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ವಿರೋಧಿಗಳು ಇದ್ದರು.

ಸುಪ್ರೀಂ ತೀರ್ಪು ವಿರುದ್ಧ ಹೊತ್ತಿ ಉರಿಯುತ್ತಿದೆ ಪಾಕ್, ಏನಿದು ಏಶಿಯಾ ಬೀಬಿ ಕೇಸ್?

ಮೌಲಾನಾ ಸಮಿ ಉಲ್ ಹಕ್‌ ತಾನು ನಡೆಸುತ್ತಿದ್ದ ಶಾಲೆಯ ವೀಕ್ಷಣೆಗೆ ರಾವಲ್ಪಿಂಡಿಗೆ ಬಂದಿದ್ದರು. ಆತ ರಾವಲ್ಪಿಂಡಿಗೆ ಬಂದಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಇದರಿಂದಲೇ ಆತನ ಹತ್ಯೆಯಾಗಿದೆ ಎನ್ನಲಾಗುತ್ತಿದೆ.

ಮೌಲಾನಾ ಸಮಿ ಉಲ್ ಹಕ್‌ ನನ್ನು ಕೊಲೆ ಮಾಡಿರುವುದು ಯಾರು ಎಂದು ಖಚಿತವಾಗಿ ತಿಳಿದು ಬಂದಿಲ್ಲವಾದರೂ, ರಾಜಕೀಯ ಅಥವಾ ಧಾರ್ಮಿಕ ವಿಷಯಕ್ಕೆ ಮೌಲಾನಾ ಸಮಿ ಉಲ್ ಹಕ್ ಹತ್ಯೆ ಆಗಿದೆ ಎನ್ನಲಾಗಿದೆ.

ಅವರನ್ನು ಚೂರಿ ಇರಿದು ಹತ್ಯೆ ಮಾಡಲಾಗಿದೆ ಎಂದು ಆತನ ಕುಟುಂಬ ಸದಸ್ಯರು ತಿಳಿಸಿದ್ದಾರೆ ಬಿಬಿಸಿ ವರದಿ ಮಾಡಿದೆ. ಆದರೆ ಹತ್ಯೆಯ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ರೂಮಿನಲ್ಲಿ ಮೌಲಾನಾ ಸಮಿ ಉಲ್ ಹಕ್‌ ವಿಶ್ರಾಂತಿ ಪಡೆಯುತ್ತಿದ್ದಾಗ ಅಪರಿಚಿತನೊಬ್ಬ ನುಗ್ಗಿ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಪಾಕ್ ಉಗ್ರರಿಂದ ಮತ್ತೆ ದಾಳಿ, ಐವರು ಬಿಎಸ್ಎಫ್ ಜವಾನರಿಗೆ ಗಾಯ

ಮೌಲಾನಾ ಸಮಿ ಉಲ್ ಹಕ್‌ ಇಸ್ಲಾಮಿಕ್​ ಧಾರ್ಮಿಕ ಸೆಮಿನರ್​​ ದರೂಲ್​​ ಉಲುಮ್​ ಹಖ್ಖಾನಿ ಮುಖ್ಯಸ್ಥನಾಗಿದ್ದನು. ಅಲ್ಲದೇ ಜಾಮಿತ್​​ ಉಲೇಮಾ ಇ ಇಸ್ಲಾಂ ಶಮಿ (ಜೆಯುಐ-ಎಸ್​​​) ಪಕ್ಷದ ಮುಖ್ಯಸ್ಥನ್ನಾಗಿದ್ದ ಎನ್ನಲಾಗಿದೆ. ಮೌಲಾನಾ ಹತ್ಯೆ ಹಿನ್ನೆಲೆಯಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ಥಾನದಲ್ಲಿ ಹಿಂಸೆ ಭುಗಿಲೇಳುವ ಸಂಭವ ಇದೆ. ಪಾಕ್ ಸರ್ಕಾರ ಈಗಾಗಲೇ ಭದ್ರತೆ ವ್ಯವಸ್ಥೆ ಮಾಡಿದೆ.

English summary
God father of Taliban has been murder in Pakistan. The motive for the attack is unclear. There are still conflicting reports of exactly how Haq was killed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X