ಗೋವಾ ಮೊದಲ ಮಹಿಳಾ ಸಿಎಂ ಶಶಿಕಲಾ ವಿಧಿವಶ

Posted By:
Subscribe to Oneindia Kannada

ಪಣಜಿ, ಅಕ್ಟೋಬರ್ 29: ಗೋವಾದ ಮೊದಲ ಹಾಗೂ ಈ ತನಕ ಏಕೈಕ ಮಹಿಳಾ ಮುಖ್ಯಮಂತ್ರಿ ಶಶಿಕಲಾ ಕಾಕೋಡ್ಕರ್ ಅವರು ಶುಕ್ರವಾರ ಅಲ್ಟಿನ್ಹೋದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ದೀರ್ಘ ಕಾಲದ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರಿಗೆ 81 ವರ್ಷ ವಯಸ್ಸಾಗಿತ್ತು.

ಶಶಿಕಲಾ ಕಾಕೋಡ್ಕರ್ ಗೌರವಾರ್ಥ ಗೋವಾದಲ್ಲಿ ಎರಡು ದಿನಗಳ ಶೋಕಾಚರಣೆ ಘೊಷಿಸಲಾಗಿದ್ದು, ಸರ್ಕಾರಿ ಕಚೇರಿಗಳಿಗೆ ಒಂದು ದಿನದ ರಜೆ ಘೊಷಿಸಲಾಗಿದೆ. ಕಾಕೋಡ್ಕರ್ ಅವರ ಅಂತ್ಯಕ್ರಿಯೆ ಶನಿವಾರ ನಡೆಯಲಿದೆ.

Goa's only woman Chief Minister Shashikala Kakodkar passes away

ಶಶಿಕಲಾ ಅವರ ಗೋವಾ ರಾಜ್ಯದ ಮೊದಲ ಮುಖ್ಯಮಂತ್ರಿ ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದ ನಾಯಕ ದಯಾನಂದ ಬಾಂದೋಡ್ಕರ್ ಅವರ ಪುತ್ರಿ.

1973ರಲ್ಲಿ ಬಾಂದೋಡ್ಕರ್ ಅವರು ಅಧಿಕಾರದಲ್ಲಿದ್ದಾಗಲೇ ನಿಧನರಾದರು. ನಂತರ ಶಶಿಕಲಾ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. 1977ರ ಚುನಾವಣೆಯಲ್ಲಿ ಅವರು ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷವನ್ನು ವಿಜಯದತ್ತ ಮುನ್ನಡೆಸಿದರು. ಆದರೆ, ಅದೇ ಪಕ್ಷದಲ್ಲಿ ಬಂಡಾಯ ಉಂಟಾದ ಬಳಿಕ ಶಶಿಕಲಾ ಅವರನ್ನು ಉಚ್ಚಾಟಿಸಲಾಗಿತ್ತು.

ಕಾಕೋಡ್ಕರ್ ಅವರು ಭಾರತೀಯ ಭಾಷಾ ಸುರಕ್ಷಾ ಮಂಚದ ನಾಯಕಿಯಾಗಿ, ಕೊಂಕಣಿ ಮತ್ತು ಮರಾಠಿಯನ್ನು ಪ್ರಾಥಮಿಕ ಶಿಕ್ಷಣದಲ್ಲಿ ಕಲಿಕಾ ಮಾಧ್ಯಮ ಭಾಷೆಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿದವರಲ್ಲಿ ಪ್ರಮುಖರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Goa's second Chief Minister and the only woman to hold that post so far, Shashikala Kakodkar, died on Friday in Panaji, after a prolonged illness.
Please Wait while comments are loading...