ಮಹಾದಾಯಿ: ರಾಜ್ಯದ ಮನವಿ ತಿರಸ್ಕರಿಸಿದ ಗೋವಾ ಸರ್ಕಾರ
ಮಹದಾಯಿ ನದಿ ವಿವಾದ ವಿಚಾರದಲ್ಲಿ ಶಾಂತಿ ಮಾತುಕತೆ ಆಗ್ರಹಿಸಿದ್ದ ಕರ್ನಾಟಕ ಸಿಎಂ ಸಿದ್ದರಾಮಯ್ಯ ಪತ್ರ ತಿರಸ್ಕರಿಸಿದ ಗೋವಾ ಸರ್ಕಾರ. ನ್ಯಾಯಾಧೀಕರಣದ ಮೂಲಕವೇ ವಿವಾದ ಇತ್ಯರ್ಥಗೊಳಿಸಲು ಆಗ್ರಹ.
ಬೆಂಗಳೂರು, ಜುಲೈ 18: ಮಹಾದಾಯಿ ನದಿ ವಿವಾದವನ್ನು ಪರಸ್ಪರ ಸೌಹಾರ್ದಯುತ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಮಾಡಿದ್ದ ಮನವಿಯನ್ನು ಗೋವಾ ಸರ್ಕಾರ ತಿರಸ್ಕರಿಸಿದೆ.
ಇತ್ತೀಚೆಗೆ, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಪತ್ರ ಬರೆದಿದ್ದ ಸಿಎಂ ಸಿದ್ದರಾಮಯ್ಯ, ಮಹಾದಾಯಿ ವಿಚಾರದಲ್ಲಿ ಪರಸ್ಪರ ಮಾತುಕತೆಯ ಮೂಲಕ ಬಗೆ ಹರಿಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದರು.

ಇದಕ್ಕೆ ಪೂರಕವಾಗಿ, ನಿರ್ದಿಷ್ಟ ದಿನಾಂಕದಂದ ಮೂರು ರಾಜ್ಯಗಳ (ಕರ್ನಾಟಕ, ಗೋವಾ, ಮಹಾರಾಷ್ಟ್ರ) ಮುಖ್ಯಮಂತ್ರಿಗಳ ಸಭೆ ಕರೆಯಬೇಕೆಂದು ಕೋರಿದ್ದರು.
ಆದರೆ, ಈ ಕೋರಿಕೆಯನ್ನು ಗೋವಾ ಸರ್ಕಾರ ತಿರಸ್ಕರಿಸಿದೆ. ಈ ಬಗ್ಗೆ ಗೋವಾ ರಾಜ್ಯದ ನೀರಾವರಿ ಸಚಿವ ವಿನೋಬಾ ಪಾಲೆಂಕರ್, ವಿವಾದವು ಮಹಾದಾಯಿ ನ್ಯಾಯಾಧೀಕರಣದ ಮೂಲಕವೇ ಇತ್ಯರ್ಥಗೊಳ್ಳಲಿ ಎಂದಿದ್ದಾರೆ.
ಇದಲ್ಲದೆ, ನ್ಯಾಯಾಧೀಕರಣದ ಹೊರತಾಗಿ ಬೇರೆಲ್ಲೂ ಸಮಸ್ಯೆ ಇತ್ಯರ್ಥಗೊಳ್ಳಲು ಗೋವಾ ಸರ್ಕಾರ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications