ಮಕ್ಕಳ ದಿನದಂದು ಮನೋಹರ್ ಪರಿಕ್ಕರ್ ಹೇಳಿದ ಅಡಲ್ಟ್ ಸಿನಿಮಾ ವೃತ್ತಾಂತ

Posted By:
Subscribe to Oneindia Kannada

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಮಂಗಳವಾರ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ತಾವು ವಯಸ್ಕರ ಸಿನಿಮಾ ನೋಡಿದ ಅನುಭವ ಹೇಳಿಕೊಂಡಿದ್ದಾರೆ. "ನೀವು ಎಂಥ ಸಿನಿಮಾಗಳನ್ನು ನೋಡುತ್ತಿದ್ದಿರಿ?" ಎಂದು ಕೇಳಿದ ಪ್ರಶ್ನೆಗೆ ಪರಿಕ್ಕರ್ ಮುಕ್ತವಾದ ಉತ್ತರ ನೀಡಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದೇನು? ಮುಂದೆ ಓದಿ.

"ನಾವು ಬರೀ ಸಿನಿಮಾ ನೋಡುತ್ತಿರಲಿಲ್ಲ. ಆ ಕಾಲದ ವಯಸ್ಕರ ಸಿನಿಮಾಗಳನ್ನು ನೋಡುತ್ತಿದ್ದಿವಿ. ಆದರೆ ಆಗಿನ ವಯಸ್ಕರ ಸಿನಿಮಾಗಳಿಗಿಂತ ಈಗ ಟಿವಿಗಳಲ್ಲೇ ನೀವು ಹೆಚ್ಚಿನದನ್ನು ನೋಡ್ತಿದ್ದೀರಿ. ಆಗ ಅದು ತುಂಬ ಹೆಸರಾದ ವಯಸ್ಕರ ಸಿನಿಮಾ ಅದು. ಆಗ ನಾನು ಕೂಡ ವಯಸ್ಕರನಾಗಿದ್ದೆ. ನಾನು ಹಾಗೂ ನನ್ನ ಸೋದರ ಸಿನಿಮಾಗೆ ಹೋದಿವಿ".

ಪಣಜಿ ಉಪಚುನಾವಣೆಯಲ್ಲಿ ಪರಿಕ್ಕರ್ ಗೆ ಭರ್ಜರಿ ಜಯ

"ಸಿನಿಮಾದ ಇಂಟರ್ ವೆಲ್ ನಲ್ಲಿ ಲೈಟ್ ಗಳು ಹತ್ತಿಕೊಂಡವು. ಆಗ ನನಗೆ ಗೊತ್ತಾಯಿತು, ನನ್ನ ಎದುರು ಮನೆಯವರು ಪಕ್ಕದಲ್ಲೇ ಕೂತಿದ್ದಾರೆ. ಆ ವ್ಯಕ್ತಿ ಸಂಜೆ ವೇಳೆಯಲ್ಲಿ ನನ್ನ ತಾಯಿ ಜತೆ ಮಾತನಾಡುತ್ತಿದ್ದರು. ನನ್ನ ಸೋದರನಿಗೆ ಹೇಳಿದೆ: ನಾವು ಸತ್ತಿವಿ" ಎಂದು ಪರಿಕ್ಕರ್ ತಮ್ಮ ಅನುಭವ ಹೇಳಿದ್ದಾರೆ.

Manohar Parikkar

ಪರಿಕ್ಕರ್ ಹಾಗೂ ಅವರ ಸೋದರ ಅವ್ ಧೂತ್ ಸಿನಿಮಾ ಅರ್ಧಕ್ಕೆ ಬಿಟ್ಟು ಅಲ್ಲಿಂದ ಓಟ ಕಿತ್ತಿದ್ದರಂತೆ. "ನಾವು ಸಿನಿಮಾಗೆ ಹೋಗಿದ್ದಿವಿ. ಆದರೆ ಅದು ಪೋಲಿ ಸಿನಿಮಾ ಆಗಿತ್ತು. ನಾವು ಅರ್ಧಕ್ಕೆ ಬಿಟ್ಟು ಬಂದಿವಿ. ಆಗ ನಮ್ಮ ಎದುರು ಮನೆಯವರೂ ಅಲ್ಲಿದ್ದರು ಮತ್ತು ಸುಮ್ಮನಿದ್ದರು" ಎಂದು ಮನೆಗೆ ಹೋಗಿ ತಮ್ಮ ತಾಯಿಗೆ ಕಥೆ ಕಟ್ಟಿ ಹೇಳಿದ್ದರಂತೆ.

'ಕರ್ನಾಟಕದಿಂದ ಬೀಫ್ ತರಿಸ್ತೀನಿ': ಪರಿಕ್ಕರ್ ರಾಜೀನಾಮೆಗೆ VHP ಆಗ್ರಹ

ಮಾರನೇ ದಿನ ಈ ವಿಷಯವನ್ನು ಪರಿಕ್ಕರ್ ಅವರ ತಾಯಿ ಬಳಿಗೆ ಆ ಎದುರು ಮನೆಯವರು ಹೇಳುವುದಕ್ಕೆ ಬಂದಾಗ, ನನಗೆ ಗೊತ್ತು ಯಾವ ಸಿನಿಮಾಕ್ಕೆ ಅವರು ಹೋಗಿದ್ದರು ಅಂತ. ಆದರೆ ನೀವು ಯಾಕೆ ಆ ಸಿನಿಮಾಗೆ ಹೋಗಿದ್ದಿರಿ ಎಂದು ಪ್ರಶ್ನಿಸಿದ್ದರಂತೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Goa Chief Minister Manohar Parrikar on Tuesday shared at a Children's Day function here his experience of watching an "adult movie" in his youth.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ