• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಕೌನ್ ಬನೇಗಾ...' ವಿಡಿಯೋ ಹಂಚಿಕೊಂಡು ಖುಷಿಪಟ್ಟ ಗೀತಾ ಗೋಪಿನಾಥ್

|

ನವದೆಹಲಿ, ಜನವರಿ 22: ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಟೆಲಿವಿಷನ್ ಕ್ವಿಜ್ ಕಾರ್ಯಕ್ರಮ 'ಕೌನ್ ಬನೇಗಾ ಕರೋಡ್‌ಪತಿ'ಯ ವಿಶೇಷ ವಿಡಿಯೋವನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ. ಜನಪ್ರಿಯ ಕಾರ್ಯಕ್ರಮ ನಡೆಸಿಕೊಡುವ ನಟ ಅಮಿತಾಬ್ ಬಚ್ಚನ್ ಸ್ಪರ್ಧೆಯ ಸಂದರ್ಭದಲ್ಲಿ ತಮ್ಮನ್ನು ಕೊಂಡಾಡಿರುವುದರಿಂದ ಅವರು ಪುಳಕಿತರಾಗಿದ್ದಾರೆ.

'ಈ ಚಿತ್ರದಲ್ಲಿ ಕಾಣಿಸುವ ಅರ್ಥಶಾಸ್ತ್ರಜ್ಞೆ 2019ರಿಂದ ಯಾವ ಸಂಘಟನೆಯ ಮುಖ್ಯ ಆರ್ಥಿಕ ತಜ್ಞೆಯಾಗಿದ್ದಾರೆ?' ಎಂದು ಪರದೆ ಮೇಲೆ ಗೀತಾ ಗೋಪಿನಾಥ್ ಅವರ ಚಿತ್ರ ಬಂದಾಗ ಸ್ಪರ್ಧಿಗೆ ಅಮಿತಾಬ್ ಪ್ರಶ್ನಿಸಿದ್ದಾರೆ. 'ಆಕೆಯ ಮುಖ ಎಷ್ಟು ಸುಂದರವಾಗಿದೆಯೆಂದರೆ, ಯಾರೊಬ್ಬರೂ ಆಕೆಯನ್ನು ಆರ್ಥಿಕತೆಯೊಂದಿಗೆ ಸಂಬಂಧಿಸಿ ನೋಡುವುದಿಲ್ಲ' ಎಂದು ಅಮಿತಾಬ್, ಗೀತಾ ಅವರ ಗುಣಗಾನ ಮಾಡಿದ್ದಾರೆ.

ಕೊರೊನಾ ವಿರುದ್ಧದ ಹೋರಾಟ: ಜಿಡಿಪಿಯ ಶೇ 1 ರಷ್ಟು ಖರ್ಚು ಕೊರೊನಾ ವಿರುದ್ಧದ ಹೋರಾಟ: ಜಿಡಿಪಿಯ ಶೇ 1 ರಷ್ಟು ಖರ್ಚು

ಈ ಸಣ್ಣ ವಿಡಿಯೋ ತುಣಕನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಗೀತಾ ಗೋಪಿನಾಥ್, ತಾವು ಅಮಿತಾಬ್ ಬಚ್ಚನ್ ಅವರ ದೊಡ್ಡ ಅಭಿಮಾನಿಯಾಗಿರುವುದರಿಂದ ಈ ವಿಡಿಯೋ ತಮ್ಮ ಪಾಲಿಗೆ ಬಹಳ ವಿಶೇಷವಾಗಿದೆ ಎಂದಿದ್ದಾರೆ. ಅಮಿತಾಬ್ ಬಚ್ಚನ್ ಅವರು ಸಾರ್ವಕಾಲಿಕ ಶ್ರೇಷ್ಠ. ಇದಕ್ಕಿಂತ ಮಿಗಿಲಾಗಿರುವುದು ತಮಗೆ ಸಿಗುತ್ತದೆ ಎಂದೆನಿಸದು ಎಂದು ಅವರು ಹೇಳಿದ್ದಾರೆ.

ಗೀತಾ ಅವರ ವಿಡಿಯೋಕ್ಕೆ ಅಮಿತಾಬ್ ಬಚ್ಚನ್ ಪ್ರತಿಕ್ರಿಯೆ ನೀಡಿದ್ದಾರೆ. 'ಧನ್ಯವಾದ ಗೀತಾ ಗೋಪಿನಾಥ್. ನಿಮ್ಮ ಕುರಿತು ಕಾರ್ಯಕ್ರಮದಲ್ಲಿ ಆಡಿದ ಪ್ರತಿ ಪದವೂ ಅತ್ಯಂತ ಶ್ರದ್ಧಾಪೂರ್ವಕವಾಗಿದೆ' ಎಂದು ಹೇಳಿದ್ದಾರೆ. ಭಾರತ ಮೂಲದ ಗೀತಾ ಗೋಪನಾಥ್, ಅಮೆರಿಕದ ಸಂಜಾತೆಯಾಗಿದ್ದಾರೆ.

2021ರ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಐತಿಹಾಸಿಕ ಇಳಿಕೆ ಕಾಣಲಿದೆ: IMF2021ರ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಐತಿಹಾಸಿಕ ಇಳಿಕೆ ಕಾಣಲಿದೆ: IMF

ಆದರೆ ಅಮಿತಾಬ್ ಅವರು ಕಾರ್ಯಕ್ರಮದಲ್ಲಿ ನೀಡಿದ್ದ ಹೇಳಿಕೆ 'ಸೆಕ್ಸಿಸ್ಟ್' ಆಗಿದೆ ಎಂಬ ಆರೋಪವೂ ಕೇಳಿಬಂದಿದೆ. ಇಷ್ಟು ಸುಂದರ ಮುಖ ಅಥವಾ ಆರ್ಥಿಕತೆ ಎಂಬ ಪದಗಳನ್ನು ಅಮಿತಾಬ್ ಬಳಸಿದ್ದಾರೆ. ಆರ್ಥಿಕತೆಗೂ ಸುಂದರವಾಗಿರುವುದಕ್ಕೂ ಸಂಬಂಧವೇನಿದೆ? ಗೀತಾ ಅವರ ಸಾಧನೆಯನ್ನು ಮಾತ್ರ ಇಲ್ಲಿ ಪರಿಗಣಿಸಬೇಕಿರುವುದು. ಇಂತಹ ಪದ ಬಳಕೆ ಸಮಂಜಸವಲ್ಲ ಎಂದು ಟೀಕಿಸಿದ್ದಾರೆ.

English summary
Chief Economist of the International Monetary Fund Gita Gopinath has tweeted a video that appeared in Kaun Banega Crorepati show where Amitabh Bachchan praises her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X